ಬಾಲಿವುಡ್‍ಗೆ ಬರ್ತಿದ್ದಾರೆ ಕಪಿಲ್‍ದೇವ್ ಪುತ್ರಿ 

 Kapil Dev daughter Entry to  Bollywood

27-03-2019

ಬಾಲಿವುಡ್ ನಟ-ನಟಿಯರ ಮಕ್ಕಳು ಬಾಲಿವುಡ್‍ಗೆ ಬರೋದು ಸಾಮಾನ್ಯವಾದ ಸಂಗತಿ. ಆದರೆ ಇತ್ತೀಚಿಗೆ ಕೇವಲ ಸಿನಿಮಾ ನಟರ ಮಕ್ಕಳ ಜೊತೆ ಕ್ರಿಕೇಟ್ ಕಲಿಗಳ ಮಕ್ಕಳೂ ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಕ್ರಿಕೇಟ್ ಜಗತ್ತಿನ ದೊಡ್ಡ ಶಕ್ತಿ ಕಪಿಲ್‍ದೇವ್ ಅವರ ಪುತ್ರಿ ಅಮಿಯಾ ದೇವ್. 


ಭಾರತ ಕ್ರಿಕೆಟ್ ತಂಡ ಮಾಜಿ ನಾಯಕರಾಗಿದ್ದ ಕಪಿಲ್ ದೇವ್ ಪುತ್ರಿ ಆಮಿಯಾ ದೇವ್ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ವಿಭಿನ್ನವಾಗಿ ಕೆಲಸವನ್ನು ಆರಂಭಿಸಿದ್ದಾರೆ. ಆದರೆ ಆಮಿಯಾ ಕೆರಿಯರ್ ಶುರು ಮಾಡಿರೋದು ನಟಿಯಾಗಿ ಅಲ್ಲ, ಬದಲಾಗಿ  ಸಿನಿಮಾ ಅಸಿಸ್ಟೆಂಟ್ ಡೈರೈಕ್ಟರ್ ಆಗಿ. 


ಭಾರತ ವಿಶ್ವಕಪ್ ಗೆದ್ದ 1983 ರ ಕ್ರಿಕೇಟ್ ಜರ್ನಿಯನ್ನು ಆಧರಿಸಿ 83 ಎಂಬ ಚಿತ್ರ ನಿರ್ಮಿಸಲಾಗುತ್ತಿದೆ. ಈ ಚಿತ್ರ ವಿಶೇಷವಾಗಿ ವಿಶ್ವಕಪ್ ಗೆದ್ದ ವೇಳೆ ಭಾರರ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಕತೆ ಆಧರಿಸಿದೆ. ಇದೇ ಚಿತ್ರಕ್ಕೆ ಅಸಿಸ್ಟೆಂಟ್ ಡೈರೈಕ್ಟರ್ ಆಗುವ ಮೂಲಕ ಆಮಿಯಾ ಬಾಲಿವುಡ್‍ನಲ್ಲಿ ತಮ್ಮ ಜರ್ನಿ ಆರಂಭಿಸಿದ್ದಾರೆ. 
ಭಜರಂಗಿ ಭಾಯಿಜಾನ್ ಖ್ಯಾತಿಯ ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್ ಸಹ ಈ ಚಿತ್ರದ ನಿರ್ಮಾಣದ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಅಗತ್ಯ ತರಬೇತಿ ನೀಡುತ್ತಿದ್ದಾರೆ. 
ಇನ್ನು ತಂದೆ ಪಾಲಿಗೆ ಬಹುನೀರಿಕ್ಷಿತ ಚಿತ್ರವಾಗಿರುವ 83 ಬಗ್ಗೆ ಹೆಚ್ಚು ಗಮನ ವಹಿಸಿರುವ ಆಮಿಯಾ, ಸಹ ನಿರ್ದೇಶನದ ಜೊತೆಗೆ ನಟರ ಕಾಸ್ಟ್ಯುಮ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಕ್ರಿಕೇಟ್ ಕಾಶಿ ಲಾಡ್ರ್ಸ ನಲ್ಲಿ ನಡೆಯಲಿದೆ. ಇನ್ನು ಒಂದು ವರ್ಷಗಳ ಕಾಲ ಶೂಟಿಂಗ್ ನಡೆಯುವ ಸಾಧ್ಯತೆ ಇದ್ದು,ಚಿತ್ರ 2020 ರ ಏಪ್ರಿಲ್ 10 ರಂದು ರಿಲೀಸ್ ಆಗಲಿದೆ. 


ಸಂಬಂಧಿತ ಟ್ಯಾಗ್ಗಳು

#Bollywood #Daughter #Kapil Dev #Amiya Dev


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ