ದೇಶದಾದ್ಯಂತ ಇದುವರೆಗೂ 540 ಕೋಟಿ ಚುನಾವಣಾ ಅಕ್ರಮ ಪತ್ತೆ

After Election announcement 540 crore have been detected

27-03-2019

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಕೇಂದ್ರ ಚುನಾವಣಾ ಆಯೋಗ  ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟಿದೆ. ಆದರೂ ರಾಜ್ಯದಲ್ಲಿ ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ದುಡ್ಡು ಹಂಚಿಕೆಯಂತಹ ಅಕ್ರಮಗಳೂ ಎಗ್ಗಿಲ್ಲದೆ ನಡೆಯುತ್ತಿದೆ. ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗಿನ 15 ದಿನದ ಅವಧಿಯಲ್ಲಿ  ಆಯೋಗ 540 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. 

ಇದರಲ್ಲಿ ಸೂಕ್ತ ದಾಖಲೆ ಇಲ್ಲದ 143.37 ಕೋಟಿ ರೂಪಾಯಿ ನಗದು, 89.64  ಕೋಟಿ ರೂಪಾಯಿ ಮೌಲ್ಯದ ಮದ್ಯ, 131.75 ಕೋಟಿ ರೂ ಮೌಲ್ಯದ ಮಾದಕ ವಸ್ತು,  169.93 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಹಾಗೂ 12.20 ಕೋಟಿ ಮೌಲ್ಯದ  ಉಚಿತವಾಗಿ ಹಂಚಲು ಸಂಗ್ರಹಿಸಲಾಗಿದ್ದು, ಧವಸ ಧಾನ್ಯಗಳನ್ನು  ವಶಕ್ಕೆ ಪಡೆದಿದೆ. 

ತಮಿಳುನಾಡಿನಲ್ಲಿ 107.24 ಕೋಟಿ, ಉತ್ತರ ಪ್ರದೇಶದಲ್ಲಿ 104.54 ಕೋಟಿ, ಆಂಧ್ರಪ್ರದೇಶದಲ್ಲಿ  103.40 ಕೋಟಿ, ಪಂಜಾಬ್‍ನಲ್ಲಿ 92.80 ಕೋಟಿ, ಕರ್ನಾಟಕದಲ್ಲಿ 26.53 ಕೋಟಿ, ಮಹಾರಾಷ್ಟ್ರದಲ್ಲಿ  19.11 ಕೋಟಿ, ತೆಲಂಗಾಣದಲ್ಲಿ 8.20 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಅಕ್ರಮಗಳನ್ನು ವಶಕ್ಕೆ ಪಡೆಯಲಾಗಿದೆ. 

ಕರ್ನಾಟಕದಲ್ಲಿ ವಶ ಪಡೆಯಲಾದ 26.53 ಕೋಟಿ ಅಕ್ರಮ ವಸ್ತುಗಳಲ್ಲಿ,  5.95 ಕೋಟಿ ನಗದು, 19.88 ಕೋಟಿ ಮೊತ್ತದ  4.90 ಲಕ್ಷ ಲೀಟರ್ ಮದ್ಯ,  8 ಲಕ್ಷ ಮೌಲ್ಯದ ಮಾದಕ ವಸ್ತು, 18 ಲಕ್ಷದ ಚಿನ್ನಾಭರಣ ಸೇರಿದೆ. ಇನ್ನು ಈ ಕಾರ್ಯಾಚರಣೆ ಮುಂದುವರೆದಿದ್ದು, ಚುನಾವಣೆ ಮುಗಿಯುವ ವೇಳೆಗೆ ಇನ್ನಷ್ಟು ಭ್ರಷ್ಟರು ಸಿಕ್ಕಿಬೀಳೋದು ಗ್ಯಾರಂಟಿ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Detected #Election #Money


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ