ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ?

 BJP has majority in Lok Sabha polls?

27-03-2019

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ನಿರೀಕ್ಷಿತ ಹೊಂದಾಣಿಕೆ ಸಾಧ್ಯವಾಗದಿದ್ದರೆ ಇದರಿಂದ ಬಿಜೆಪಿಗೆ ಅನುಕೂಲವಾಗಬಹುದು ಎನ್ನುವ ವರದಿ ಮೈತ್ರಿ ಕೂಟದ ನಾಯಕರನ್ನು ಕೆಂಗೆಡಿಸಿದೆ

ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಖಾಸಗಿ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಪ್ರಮುಖರು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹಿಸಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳು ಎರಡಂಕಿ ದಾಟಲಿವೆ. ಆದರೆ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಮಾಹಿತಿ ನೀಡಿದೆ.

ಮೈತ್ರಿಕೂಟದ ನಡುವೆ ಸಾಧಿತವಾದ ಹೊಂದಾಣಿಕೆ ಪ್ರಾಮಾಣಿಕವಾಗಿ ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮೈತ್ರಿ ಸಾಧನೆಯಿಂದ ಅರ್ದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ  ಗೆಲ್ಲಬೇಕು ಎಂಬ ಕನಸು ಭಗ್ನವಾಗುವ ಲಕ್ಷಣಗಳಿವೆ ಎಂದು ಹೇಳಿದೆ.

ಮೈತ್ರಿಕೂಟ ಅದ್ಭುತ ಯಶಸ್ಸು ಸಾಧಿಸಿದರೆ ಮುಂದಿನ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರಿಯಲಿದೆ. ಹಾಗೇನಾದರೂ ತಮ್ಮ ರಾಜಕೀಯ ಭವಿಷ್ಯ ಕೊನೆಗೊಳ್ಳಲಿದೆ ಎಂಬ ಆತಂಕ ಹಲವು ಕಾಂಗ್ರೆಸ್ ನಾಯಕರನ್ನು ಕಾಡುತ್ತಿದ್ದು, ಈ ಹಿನ್ನೆಲೆಯಲಿ ್ಲಅವರು ಬಹುತೇಕ ಎಲ್ಲ ಕಡೆ ಜೆಡಿಎಸ್‍ಗೆ ಉಲ್ಟಾ ಹೊಡೆಯಲು ಸಜ್ಜಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದರೆ ಸಹಜವಾಗಿಯೇ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಾಗುತ್ತದೆ. ಆದರೆ ಹಾಗಾಗುವುದು ಜೆಡಿಎಸ್‍ನ ಸ್ಥಳೀಯ ಕಾರ್ಯಕರ್ತರಿಗೆ ಹಾಗೂ ಜೆಡಿಎಸ್ ಪಕ್ಷದ ಮೂಲ ಮತಬ್ಯಾಂಕ್‍ಗೆ ಇಷ್ಟವಿಲ್ಲ. ಆದರೂ ಬಹಿರಂಗ ಮೈತ್ರಿಯ ಕಾರಣಕ್ಕಾಗಿ ಕೆಲವರು ಬೆಂಬಲ ನೀಡಿದರೂ ಒಟ್ಟಾರೆಯಾಗಿ ಅದರಿಂದ ಕಾಂಗ್ರೆಸ್‍ಗೆ ಲಾಭವಾಗುವುದು ಕಡಿಮೆ. ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಜೆಡಿಎಸ್ ಒಳ ಏಟು ನೀಡುವ ಆತಂಕ ಕಾಂಗ್ರೆಸ್ ನಲ್ಲಿದೆ.

ವಾಸ್ತವವಾಗಿ ಪ್ರಧಾನಿ ನರೇಂದ್ರಮೋದಿ ಅವರ ಅಲೆ ಕರ್ನಾಟಕದಲ್ಲಿ ಇಲ್ಲ. ಈ ಅಲೆ ಸಾಮಾಜಿಕ ಜಾ¯ ತಾಣದಲ್ಲಿ ಕಾಣುತ್ತಿದೆಯಾದರೂ, ಅದಕ್ಕೆ ಪ್ರತಿ ಅಲೆಯೂ ಸಾಮಾಜಿಕ ಜಾಲತಾಣದಲ್ಲೇ ಸೃಷ್ಟಿಯಾಗಿದೆ.

ಮತ್ತೊಂದೆಡೆ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮೂಲೆಗುಂಪು ಮಾಡಲಿದೆ ಎಂಬ ಮಾತು ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರಿದೆಯಾದರೂ ಸ್ವತ: ಯಡಿಯೂರಪ್ಪ ಅವರು ಅಂತಹ ಅಪಾಯವೇನೂ ಇಲ್ಲ ಎಂದು ಸಮುದಾಯಕ್ಕೆ ಸಂದೇಶ ರವಾನಿಸಿರುವುದರಿಂದ ಇದು ಬಿಜೆಪಿಗೆ ಲಾಭವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಾಲದೆಂಬಂತೆ ಯಡಿಯೂರಪ್ಪ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಲು ಕಾಂಗ್ರೆಸ್‍ನ ಪ್ರಭಾವಿ ನಾಯಕರೇ ಮಾಸ್ಟರ್ ಪ್ಲಾನ್ ರೂಪಿಸಿದ್ದು ಜೂನ್ ವೇಳೆಗೆ ಇದು ಅನುಷ್ಟಾನವಾಗುವ ಸಾಧ್ಯತೆಗಳು ಸಹ ಕಾಣಿಸಿಕೊಂಡಿವೆ.

ಹೀಗಾಗಿ ಬಿಜೆಪಿ ಹೈಕಮಾಂಡ್ ಅಷ್ಟು ಸುಲಭವಾಗಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಲಿಂಗಾಯತ ಸಮುದಾಯದಲ್ಲೂ ಮೂಡುತ್ತಿದ್ದು ಪರಿಣಾಮವಾಗಿ ಆ ಸಮುದಾಯ ಬಿಜೆಪಿಗೆ ತಿರುಗೇಟು ಹೊಡೆಯದೇ ಇರಲು ನಿರ್ಧರಿಸಿದೆ.

ಹೀಗಾಗಿ ಮೈತ್ರಿಕೂಟದ ಅಂಗಪಕ್ಷಗಳು ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಕಡೆ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಮಾನಸಿಕವಾಗಿ ಸಜ್ಜಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ಲಾಭ ಪಡೆಯುವ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಬಹುದು ಎನ್ನುವ ಮಾಹಿತಿ ಮೈತ್ರಿ ಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Bjp #Election # Majority


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ