ಸ್ಲಂ ಮುಕ್ತ ತಮಿಳುನಾಡು ನಿರ್ಮಾಣ- ಕಮಲಹಾಸನ್ ಪ್ರಣಾಳಿಕೆ ಮುಖ್ಯಅಂಶ 

 Slum Free Tamil Nadu Construction,  The Kamalasan Manifesto

26-03-2019

ರಾಜಕೀಯ ವ್ಯವಸ್ಥೆಗೆ ಹೊಸತನ ತರಲು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು  ಹೊಸ ಪಕ್ಷ ಸ್ಥಾಪಿಸಿದ ನಟ ಕಮಲ್ ಹಾಸನ್ ತಮ್ಮ ಪಕ್ಷದ ಪ್ರನಾಳಿಕೆ ಜೊತೆ ಚುನಾವಣೆಗೆ ಸಜ್ಜಾಗಿದ್ದಾರೆ. ಕಮಲಹಾಸನ್ ಸ್ಥಾಪಿಸಿದ ಮಕ್ಕಳ್ ನೀದಿ ಮಯ್ಯಂ ಪಕ್ಷದ ಮೂಲಕ ಚುನಾವಣಗೆ ಜನರ ಬಳಿ ಹೋಗಲು ಕಮಲಹಾಸನ್ ಪ್ರಣಾಳಿಕೆ ಸಿದ್ಧವಾಗಿದ್ದು, ಸ್ಲಂ ಮುಕ್ತ ತಮಿಳುನಾಡು ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ. 

ಯೂನಿವರ್ಸಲ್ ಸ್ಟಾರ್ ಖ್ಯಾತಿಯ ಕಮಲ್ ಹಾಸನ್ ಲೋಕಸಭಾ ಚುನಾವಣೆಯಿಂದ ಹೊರಗುಳಿದಿದ್ದು, ಆದರೆ ಲೋಕಸಭಾ ಚುನಾವಣೆ ಹಾಗೂ 18 ಕ್ಷೇತ್ರದ ಉಪಚುನಾವಣೆಗಾಗಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹೆದ್ದಾರಿಗಳನ್ನು ಟೋಲ್ ಮುಕ್ತಮಾಡುವುದು, ಸ್ಲಂಮುಕ್ತ ತಮಿಳುನಾಡು ನಿರ್ಮಾಣ, ಉಚಿತ ವೈಫೈ, 50 ಲಕ್ಷ ಉದ್ಯೋಗ ಸೃಷ್ಟಿ, ಆರೋಗ್ಯಕ್ಕಾಗಿ ವಿಮೆಯಂತಹ ಯೋಜನೆಗಳನ್ನು ಪ್ರಣಾಳಿಕೆ ಒಳಗೊಂಡಿದೆ. 

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು  ಯೋಜನೆಗಳನ್ನು ರೂಪಿಸಿದ್ದು, 60 ಲಕ್ಷಕ್ಕೂ ಅಧಿಕ ಕುಟುಂಬಗಳ ಅಭಿವೃದ್ಧಿ, ಸಬ್ಸಿಡಿ ದರದಲ್ಲಿ ವಸತಿ ಯೋಜನೆ, ಲೋಕಾಯುಕ್ತ ಯೋಜನೆ, ರೈತರ ಅನುಕೂಲಕ್ಕಾಗಿ ಕನಿಷ್ಠ ಬೆಂಬಲ ಬೆಲೆ , ಪ್ರತಿ ಮನೆಗೆ ಶುದ್ಧವಾದ ಕುಡಿಯುವ ನೀರು ಪೊರೈಕೆ, ಮಹಿಳೆಯರಿಗೆ ಸಮಾನ ವೇತನಗಳಂತಹ ಸುಧಾರಣೆಗಳನ್ನು ಕಮಲ್ ಹಾಸನ್  ಮಕ್ಕಳ ನೀದಿಯಂ ಪಕ್ಷದ ಪ್ರಣಾಳಿಕೆ ಒಳಗೊಂಡಿದೆ. 

ಕಮಲಹಾಸನ್ ಪಕ್ಷದಿಂದ ಸಾಹಿತಿ ಸ್ನೇಹನ್, ಪೊಲ್ಲಾಚ್ಛಿಯಿಂದ ಮೂಕಂಬಿಗೈ, ನಟ ನಾಸರ್ ಪತ್ನಿ ಕಮೀಲಾ ನಾಸರ್ ಸೇರಿದಂತೆ ಹಲವು ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಮೂಡಿಸಲು ಕಮಲ್ ಹಾಸನ ಸಜ್ಜಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Makkal Needhi Maiam # Manifesto #Kamal Haasan #Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ