ಪುತ್ರ ನಿಖಿಲ್ ಗೆಲುವಿವಾಗಿ ಪುಣ್ಯಕ್ಷೇತ್ರ ಪಳನಿಯ ಮುರುಗನ್ ಮೊರೆ ಹೋದ ಸಿಎಂ

Cm Visited Palani Murugan Temple Along With Anitha Kumarswamy

26-03-2019

ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಸ್ಪರ್ಧೆಯಿಂದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಗೆಲುವಿವಾಗಿ ಸಿಎಂ ಕುಮಾರಸ್ವಾಮಿ ಇದೀಗ ಪುಣ್ಯಕ್ಷೇತ್ರ ಪಳನಿಯ ಮುರುಗನ್ ಮೊರೆ ಹೊಕ್ಕಿದ್ದಾರೆ.

ಮಂಡ್ಯ ಲೋಕಸಭೆಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮ ಮಗನ ಗೆಲುವಿಗಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಅವರುಕುಟುಂಬ ಸಮೇತ ತಮಿಳುನಾಡಿನ ಪಳನಿ ದೇವಸ್ಥಾನ ಕ್ಕೆ ಹೋಗಿದ್ದಾರೆ.

ಬೆಂಗಳೂರಿನ ಎಚ್‍ಎಎಲ್ ವಿಮಾನನಿಲ್ದಾಣದಿಂದ ವಿಶೇಷ ವಿಮಾನದಲ್ಲಿಇಂದು ಮಧ್ಯಾಹ್ನ ತಮಿಳ್ನಾಡಿಗೆ ಹೊರಟ ಸಿಎಂ, ಜೊತೆಗೆ ಪತ್ನಿಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್‍ಕುಮಾರಸ್ವಾಮಿ ಸಹ ಪಳನಿ ಗೆ ತೆರಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರಕ್ಕೆಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಾಲ್ಗೊಂಡಿದ್ದಕುಮಾರಸ್ವಾಮಿತದ ನಂತರಕುಟುಂಬ ಸಮೇತರಾಗಿ ಪಳನಿಯ ಮುರುಗನ್‍ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಿಖಿಲ್ ಗೆ ಜ್ಯೋತಿಷಿಗಳ ಪ್ರಕಾರ, ಈ ವರ್ಷ ಸಮಯ ಸರಿಯಿಲ್ಲ.ನಿಖಿಲ್‍ದೋಷ ನಿವಾರಣೆಗಾಗಿ ಸಿಎಂ ಕುಟುಂಬ   ಮುರುಗದೇವರಿಗೆ  ಪೂಜೆ  ಮಾಡಿಸಿ ಪಳನಿಯಿಂದಇಂದು ಸಂಜೆ  ಹಿಂದಿರುಗಿದರು.

ನಿಖಿಲ್‍ಜಾತಕದಲ್ಲಿರುವದೋಷ ನಿವಾರಣೆಗೆ ಪಳನಿಯ ಮುರುಗನ್‍ದೇವಸ್ಥಾನಕ್ಕೆ ಭೇಟಿ ನೀಡಿ ನಿರ್ದಿಷ್ಟ ಪೂಜೆ ಸಲ್ಲಿಸಬೇಕು.ಹಾಗಾದಾಗಅವರಜಾತಕಕ್ಕೆ ಬಲ ಬರುತ್ತದೆಎಂದು ಜ್ಯೋತಿಷಿಗಳು ನೀಡಿದ ಸಲಹೆಯನ್ನುಗಂಭೀರವಾಗಿ ಪರಿಗಣಿಸಿರುವ ಕುಮಾರಸ್ವಾಮಿಕುಟುಂಬ ಈ ಕೈಂಕರ್ಯವನ್ನು ಪೂರ್ಣಗೊಳಿಸಿದೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Palani Murugan #Cm Kumarswamy #Temple Run


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ