ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಕೋರಿದ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ

Mp candidate Prajwal Revanna Taken  Former CM Siddaramaiah

26-03-2019

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ದಿನದಿಂದ ದಿನಕ್ಕೆ ಬಿರುಕು ಹೆಚ್ಚಾಗುತ್ತಿದೆ ಎಂಬ ಕೂಗು ದಟ್ಟವಾಗುತ್ತಿದ್ದಂತೆಯೇ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣಅವರ ಪುತ್ರ,ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆಶೀರ್ವಾದ ಕೋರಿದ್ದಾರೆ.

ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿಇಂದು ಭೇಟಿ ಮಾಡಿದ ಪ್ರಜ್ವಲ್‍ರೇವಣ್ಣಅವರು ಹಾಸನ ಲೋಕಸಭಾಕ್ಷೇತ್ರದಲ್ಲಿಗೆಲ್ಲಲು ಆಶೀರ್ವದಿಸುವಂತೆ ಮನವಿ ಮಾಡಿದ್ದಾರೆ.

ಹಾಸನದಲ್ಲಿಇನ್ನೂ ಕೆಲವು ಕಾಂಗ್ರೆಸ್ ನಾಯಕರು ಪ್ರಜ್ವಲ್ ಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿಮಾಡಿ  ಸಂಪೂರ್ಣ ಸಹಕಾರಕೋರಿದ್ದಾರೆಎನ್ನಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಪ್ರಜ್ವಲ್‍ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆಅಂತ ತಿಳಿಸಿದ್ದಾರೆ. ನಾವು ಸಣ್ಣವರಿದ್ದಾಗಿಂದಲೂ ನಾನು ಸಿದ್ದರಾಮಯ್ಯ ನವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂಉತ್ತಮ ಬಾಂಧವ್ಯ ಹೊಂದಿದ್ದಾರೆ.

ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆಎಂದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಈಗ ಅಭ್ಯರ್ಥಿಯಾಗಿರುವ ಎ. ಮಂಜುಅವರ ಬಗ್ಗೆ ನನಗಂತೂ ಭಯಇಲ್ಲ. ನಾನು ಯಾವತ್ತಾದ್ರೂ ಎ. ಮಂಜು ವಿರುದ್ದ ಮಾತನಾಡಿದ್ದು ಕೇಳಿದ್ದೀರಾ..?. ನಾನು ಟೀಕೆಯರಾಜಕಾರಣ ಮಾಡೋದಿಲ್ಲ ಎಂದು ಹೇಳಿದರು.

ಹಾಸನದಲ್ಲಿ ಎ. ಮಂಜು ನಾಮಪತ್ರ ಸಲ್ಲಿಸುವ ವೇಳೆ ಜನ ಸೇರಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್, ಹಣಕೊಟ್ಟುಜನ ಸೇರಿಸೋದುದೊಡ್ಡದಲ್ಲ. ನಾನು ಈಗತಾನೇ ಪ್ರಚಾರಕ್ಕೆ ಬರ್ತಿದ್ದೀನಿ. ಹೀಗಾಗಿ ಎಲ್ಲರ ಆಶೀರ್ವಾದ ತೆಗೆದುಕೊಂಡರೆಗೆಲ್ಲುವುದಕ್ಕೆ ಒಳ್ಳೆಯದು. ಹಾಸನ ಕಾಂಗ್ರೆಸಿಗರೆಲ್ಲರೂ ಒಟ್ಟಾಗಿ ನನಗೆ ಬೆಂಬಲ ಕೊಡುತ್ತಿದ್ದಾರೆಎಂದು ಪರೋಕ್ಷವಾಗಿಟಾಂಗ್ ನೀಡಿದರು.ಕಡೂರು, ಅರಕಲಗೂಡು, ಅರಸಿಕೆರೆ ಹಾಸನಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತೇನೆಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Siddaramayya #Prajwal Revanna #Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ