ಪಿಎಂ ನರೇಂದ್ರ ಮೋದಿ ಬಯೋಪಿಕ್‍ಗೆ ಅಡ್ಡಿ? 

Narendra Modi biopic broadcast in trouble

26-03-2019

2019 ರ ಲೋಕಸಭಾ ಚುನಾವಣೆಯಲ್ಲಿ ಬಿಡುಗಡೆಗೊಂಡು ಮೋಡಿ ಮಾಡಲು ಸಿದ್ಧವಾಗಿದ್ದ ನರೇಂದ್ರ ಮೋದಿಯವರ ಬಯೋಪಿಕ್ ಪಿಎಂ ನರೇಂದ್ರ ಮೋದಿ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಏಪ್ರಿಲ್ 5 ರಂದು ಚಿತ್ರ ಬರಲು ಸಿದ್ಧವಾಗಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡಿದೆ.ಹೀಗಿರುವಾಗಲೇ, ಇದೀಗ ಈ ಚಿತ್ರದ ಚಟುವಟಿಕೆಗಳ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಚಿತ್ರ ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿದೆ. 

ಏಪ್ರಿಲ್ 12 ರಂದು ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆಗೊಳಿಸಲು ಸಿದ್ಧತೆ ನಡೆದಿತ್ತು. ಆದರೆ ಈ ಚಿತ್ರ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಚಿತ್ರಬಿಡುಗಡೆಗೆ ತಡೆಕೋರಿ ಚುನಾವಣಾ ಆಯೋಗದ ಮೊರೆ ಹೋಗಲು ನಿರ್ಧರಿಸಿತ್ತು. ಆದರೆ ಪೂರ್ವ ದೆಹಲಿಯ ರಿಟರ್ನಿಂಗ್ ಆಫೀಸರ್ ಮಹೇಶ್ ಪಿಎಂ ನರೇಂದ್ರ ಮೋದಿ ಚಿತ್ರ ತಂಡಕ್ಕೆ ನೊಟೀಸ್ ಜಾರಿ ಮಾಡಿದ್ದಾರೆ. 
ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲದೆ ಸಂಗೀತ ನೀಡಿದ ಸಂಸ್ಥೆ, ಜಾಹೀರಾತು ಪ್ರಕಟಿಸಿದ ಎರಡು ಪ್ರಮುಖ ಪತ್ರಿಕೆಗಳಿಗೂ ನೊಟೀಸ್ ನೀಡಲಾಗಿದೆ. ನೊಟೀಸ್‍ಗೆ ಉತ್ತರಿಸಲು ಮಾರ್ಚ್ 30 ರವರೆಗಿನ ಕಾಲಾವಕಾಶ ನೀಡಲಾಗಿದೆ. 
ಚುನಾವಣಾ ನೀತಿ ಸಂಹಿತೆ ಅನ್ವಯ, ನೀತಿ ಸಂಹಿತೆ ಜಾರಿಯಲ್ಲಿದ್ದಾಗ,  ಯಾವುದೇ ರಾಜಕೀಯ ಜಾಹೀರಾತನ್ನು, ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಮಾಜ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಲಿ, ಬಿತ್ತರಿಸುವುದಕ್ಕಾಗಲಿ ಮಾಧ್ಯಮ ಕಣ್ಗಾವಲು  ಸಮಿತಿಯ ಪ್ರಮಾಣಪತ್ರ ಅಗತ್ಯವಾಗಿದೆ.  ಈ ನಿಯಮ ರಾಜಕೀಯ ವ್ಯಕ್ತಿ, ಪಕ್ಷ, ಸಂಘಟನೆ,ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಬಿಡುಗಡೆಗೂ ಅನ್ವಯವಾಗುತ್ತದೆ. ಹೀಗಾಗಿ ಈಗ ಪಿಎಂ ನರೇಂದ್ರ ಮೋದಿ ಚಿತ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಚಿತ್ರಬಿಡುಗಡೆಯಾಗುತ್ತಾ ಇಲ್ವಾ ಅನ್ನೋದು ಕುತೂಹಲ ಸಂಗತಿಯಾಗಿದೆ.  


ಸಂಬಂಧಿತ ಟ್ಯಾಗ್ಗಳು

#Loksabha 2019 #Biopic #PM Narendra Modi #Election Commission


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ