ಆಸ್ಯಿಡ್ ಸಂತ್ರಸ್ಥೆ ಲುಕ್‍ನಲ್ಲಿ ದೀಪಿಕಾ ಪಡುಕೋಣೆ

 Deepika Padukone in the Asiad epidemic look

26-03-2019

ಬಾಲಿವುಡ್ ಅತ್ಯಂತ ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಪೋಟೋವೊಂದು ಸಖತ್ ವೈರಲ್ ಆಗಿದ್ದು, ಸಿನಿಮಾ ಪ್ರಿಯರು ಹುಬ್ಬೇರಿಸಿ ಅಚ್ಚರಿಯಿಂದ ನೋಡುವಂತೆ ಮಾಡಿದೆ. ಆ  ಪೋಟೋ ಯಾವುದು ಅಂದ್ರಾ, ಅದು ದೀಪಿಕಾ ಪಡುಕೋಣೆಯ ಬಹುನೀರಿಕ್ಷಿತ ಚಿತ್ರ ಚಪಕ್‍ನ ಫಸ್ರ್ಟ ಲುಕ್. 
ಹೌದು ಮದುವೆ ಬಳಿಕ ದೀಪಿಕಾ  ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರ ಬಾಲಿವುಡ್‍ನಲ್ಲಿ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿತ್ತು. ಇದೀಗ ರಿಲೀಸ್ ಆಗಿರುವ ಫಸ್ರ್ಟ ಲುಕ್ ಈ ನೀರಿಕ್ಷೆಯನ್ನು ದ್ವಿಗುಣಗೊಳಿಸಿದೆ. ಹೌದು ಆಸ್ಯಿಡ್ ಸಂತ್ರಸ್ತೆ ಲಕ್ಷ್ಮೀ ಅಗರವಾಲ್ ಚಿತ್ರದಲ್ಲಿ ದೀಪಿಕಾ ಲಕ್ಷ್ಮೀಯವರ ಆಸ್ಯಿಡ್ ದಾಳಿಗೊಳಗಾದ ಮುಖದಲ್ಲಿ ಮೊದಲ ಲುಕ್ ನೀಡಿದ್ದು, ಲಕ್ಷ್ಮೀ ಅಗರವಾಲ್‍ರಂತೆ ಕಾಣುತ್ತಿರುವ ದೀಪಿಕಾ ಪೋಸ್ ನೋಡಿ ಸಿನಿಪ್ರಿಯರು ಬೆರಗಾಗಿದ್ದಾರೆ. 

ದೀಪಿಕಾಗೆ ಲಕ್ಷ್ಮೀಯಂತೆ ಲುಕ್ ತರಲು ಪ್ರಾಸ್ಥೆಟಿಕ್ ಮೇಕಪ್ ಮಾಡಲಾಗಿದೆ.  ಇದರಿಂದ ದೀಪಿಕಾ ಚರ್ಮ ಥೇಟ್ ಆಸ್ಯಿಡ್ ಸಂತ್ರಸ್ತರ ಚರ್ಮದಂತೆ ಎಳೆದುಕೊಂಡಿದೆ. ಚಿತ್ರತಂಡ ಫಸ್ರ್ಟ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ಸಖತ್ ವೈರಲ್ ಆಗಿದೆ.
 
ಪದ್ಮಾವತ್ ಸೇರಿದಂತೆ ನಟಿಸಿದ  ಬಹುತೇಕ ಚಿತ್ರಗಳಲ್ಲಿ ಸೌಂದರ್ಯ ದೇವತೆಯಂತೆ ಕಂಗೊಳಿಸಿದ್ದ ದೀಪಿಕಾ ಈ ಪೋಟೋ ಬಾಲಿವುಡ್ ಜನರನ್ನು ಸೇರಿದಂತೆ ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸ್ವತಃ ದೀಪಿಕಾ ಪಡುಕೋಣೆ ಕೂಡ ತಮ್ಮ ಇಮೇಜ್‍ನಿಂದ ಸಾಕಷ್ಟು ಅಚ್ಚರಿಗೊಂಡಿದ್ದು,  ಈ ಪೋಟೋವನ್ನು  ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ  ಪೋಸ್ಟ್ ಮಾಡಿರುವ ಅವರು, ಈ ಪಾತ್ರ ನನ್ನಲ್ಲಿ ಎಂದೆಂದಿಗೂ ಉಳಿಯುತ್ತದೆ ಎಂದಿದ್ದಾರೆ. 

ರಾಝಿಯಂತಹ ಹಿಟ್ ಚಿತ್ರಗಳನ್ನು ನೀಡಿದ  ಮೇಘನಾ ಗುಲ್ಜಾರ್ ನಿರ್ದೇಶನದ  ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಸಹನಿರ್ಮಾಪಕಿಯಾಗಿದ್ದು, ಇದನ್ನು ದೀಪಿಕಾ ವೃತ್ತಿಬದುಕಿನ ಅತ್ಯಂತ ಮಹತ್ವದ ಚಿತ್ರ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ದೀಪಿಕಾ ಲುಕ್ ಹಾಗೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, 2020 ರ  ಜನವರಿ 10 ರಂದು ಚಿತ್ರ ರಿಲೀಸ್ ಆಗಲಿದೆ. 
 


ಸಂಬಂಧಿತ ಟ್ಯಾಗ್ಗಳು

# Chhapaak #First Look #Deepika Padukone #Lakshmi Agarwal


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ