ಆರ್ಥಿಕ ಸಂಕಷ್ಟದಲ್ಲಿ ಬಿಎಸ್‍ಎನ್‍ಎಲ್

 BSNL in financial crisis

26-03-2019

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‍ಎನ್‍ಎಲ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರಾಷ್ಟ್ರದಾದ್ಯಂತ ಕೆಲಸ ಮಾಡುತ್ತಿರುವ ಲಕ್ಷಾಂತರ ಸಿಬ್ಬಂದಿಗೆ ವೇತನ ವಿತರಿಸಲಾಗದ ಹಂತ ತಲುಪಿದೆ. ಕಳೆದ ಮೂರು ತಿಂಗಳಿನಿಂದ ಆರ್ಥಿಕ ಪರಿಸ್ಥಿತಿ ಹಿಂದೆಂದಿಗಿಂತ ಹದಗೆಟ್ಟಿದ್ದು, ಉದ್ಯೋಗಿಗಳು ಸಂಬಳಿವಲ್ಲದೇ ಕಂಗಾಲಾಗಿದ್ದಾರೆ. 


ಬಿಎಸ್‍ಎನ್‍ಎಲ್‍ನ ಒಟ್ಟು ಆದಾಯದ ಶೇಕಡಾ 55 ರಷ್ಟು ಸಿಬ್ಬಂದಿ ವೇತನ ಪಾವತಿಗೆ ವಿನಿಯೋಗವಾಗುತ್ತಿದೆ. ವಾರ್ಷಿಕವಾಗಿ ಸಂಸ್ಥೆಯ ವೇತನ ಶುಲ್ಕ ಶೇ 8 ರಷ್ಟು ಹೆಚ್ಚಳವಾಗುತ್ತಿದ್ದು,  ಆದರೆ ಇತರ ಟೆಲಿಕಾಂ ಕಂಪನಿಗಳ ಸ್ಪರ್ಧೆ ಹಾಗೂ ಉತ್ತಮ ಸೇವೆಯಿಂದಾಗಿ ಆದಾಯದಲ್ಲಿ ಹೆಚ್ಚಳವಾಗುತ್ತಿಲ್ಲ.ಹೀಗಾಗಿ ಬಿಎಸ್‍ಎನ್‍ಎಲ್ ಹೀಗೆ ನಷ್ಟ ಹಾದಿ ತಲುಪಿದೆ. 


ದೆಹಲಿ, ಕೇರಳ,ಜಮ್ಮುಕಾಶ್ಮೀರ್,ಒಡಿಸ್ಸಾ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ತಕ್ಕ ಮಟ್ಟಿಗೆ ವೇತನ ವಿತರಣೆಯಾಗುತ್ತಿದ್ದು, ಉಳಿದ ರಾಜ್ಯಗಳ ಲಕ್ಷಾಂತರ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಸಂಬಳ ಕಾಣದೆ ಕಂಗಾಲಾಗಿದ್ದಾರೆ. ಇನ್ನು ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದರೂ ಸರ್ಕಾರ ಸಹಾಯ ನೀಡಿಲ್ಲ. ಹೀಗಾಗಿ ವೇತನ ಪಾವತಿ ಇನ್ನಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ.


ಇನ್ನು ವರದಿಗಳ ಆದಾರದ ಮೇಲೆ ಬಿಎಸ್‍ಎನ್‍ಎಲ್ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದ್ದು, 2018 ರಲ್ಲಿ 8 ಸಾವಿರ ಕೋಟಿ ನಷ್ಟ ಎದುರಿಸಿದ ಬಿಎಸ್‍ಎನ್‍ಎಲ್ 2017 ರ ಆರ್ಥಿಕವರ್ಷದಲ್ಲಿ 4.786 ಕೋಟಿ ರೂಪಾಯಿ ಹಾಗೂ 2019 8 ಸಾವಿರ ಕೋಟಿಗೂ ಅಧಿಕ ಮೊತ್ತದ  ನಷ್ಟ ನೀರಿಕ್ಷಿಸಲಾಗುತ್ತಿದೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾದ ವೇಗದಲ್ಲಿ ಸ್ಪಂದಿಸಲು ಸಾಧ್ಯವಾಗದ ಬಿಎಸ್‍ಎನ್‍ಎಲ್ ಈಗ ಇದೆ ಕಾರಣಕ್ಕೆ ನಷ್ಟ ಹಾಗೂ ಸಂಕಷ್ಟ ಎರಡನ್ನು ಎದುರಿಸುವಂತಾಗಿದೆ. 


ಸಂಬಂಧಿತ ಟ್ಯಾಗ್ಗಳು

#Bsnl # Financial crisis #No Salary #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ