ರಾಷ್ಟೀಯ ಹೆದ್ದಾರಿ 7 ರಲ್ಲಿ ಸರಣಿ ಅಪಘಾತ !

Kannada News

07-06-2017

ಬೆಂಗಳೂರು:- ರಾಷ್ಟೀಯ ಹೆದ್ದಾರಿ 7 ರ ಅತ್ತಿಬೆಲೆ ಟೋಲ್ ಬಳಿ ಲಾರಿ ಮತ್ತು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಅತ್ತಿಬೆಲೆ ಬಳಿಯ ಟೋಲ್ ಬಳಿ ವೇಗವಾಗಿ ಬಂದ ಲಾರಿ ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಅದರ ಮುಂದಿನ ಐದು ಕಾರುಗಳ ನಡುವೆ ಸರಣಿ ಅಫಘಾತ ಸಂಭವಿಸಿ 6 ಕಾರುಗಳು ಜಖಂಗೊಂಡಿವೆ, 10 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ