ಶಾಸಕ ಉಮೇಶ್‍ಜಾಧವ್ ಅನರ್ಹತೆ ಪ್ರಕರಣ ತೀರ್ಪು ಕಾಯ್ದಿರಿಸಿದ ಸ್ಪೀಕರ್

 Speaker  Reserved  Umesh Jadhav the disqualification case

26-03-2019

ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ವಿಧಾನಸಭಾ ಸಭಾಧ್ಯಕ್ಷ ಕೆ.ಆರ್, ರಮೇಶ್‍ಕುಮಾರ್ ಅವರು, ತೀರ್ಪುನ್ನು ಕಾಯ್ದಿರಿಸಿದ್ದಾರೆ. ಆದರೆ ಜಾಧವ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದತಮ್ಮಕೊಠಡಿಯಲ್ಲಿಂದು ನಡೆದ ವಿಚಾರಣೆ ವೇಳೆ ಶಾಸಕ ಉಮೇಶ್‍ಜಾಧವ್, ಅವರ ಪರ ವಕೀಲ ಸಂದೀಪ್ ಪಾಟೀಲ್, ಕಾಂಗ್ರೆಸ್ ಪರ ವಕೀಲ ಶಶಿಕಿರಣ್ ಮತ್ತಿತರರು ಈ ವೇಳೆ ಹಾಜರಿದ್ದರು. 

ತಮ್ಮ ಶಾಸಕ ಸ್ಥಾನಕ್ಕೆ ಉಮೇಶ್‍ಜಾಧವ್‍ಅವರು ಕೆಲ ದಿನಗಳ ಹಿಂದೆರಾಜೀನಾಮೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಈ ಕುರಿತು ಸ್ಪೀಕರ್ ಅವರು ಉಮೇಶ್ ಜಾಧವ್ ಅವರನ್ನು ವಿಚಾರಣೆ ನಡೆಸಿದರು.

ಎರಡೂಕಡೆ ವಾದ ಆಲಿಸಿದ ನಂತರ ವಿಚರಣೆಯನ್ನು ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್‍ಕುಮಾರ್, ಹೈಕೋರ್ಟ್ ವಿಭಾಗೀಯ ಪೀಠದತೀರ್ಪು ಸಹ ನಮ್ಮ ಮುಂದಿದೆ. ಎಲ್ಲವನ್ನೂ ನೋಡಿತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಶಾಸಕರ ರಾಜೀನಾಮೆಯಾವಾಗ ಅಂಗೀಕಾರ ಮಾಡುತ್ತೇನೆ. ಮಾಡಲ್ಲ ಎಂಬುದರ ಬಗ್ಗೆ ಟೈಮ್ ಬಾಂಡ್ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಸಂವಿಧಾನದ 10 ನೇ ಪರಿಚ್ಛೇದದ ಅನ್ವಯ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನೂನ್ಯತೆಯಿಂದ ಕೂಡಿದೆ. ಅದರ ಬದಲಾವಣೆ ಆಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನಾನು ಈಗ ಅನರ್ಹತೆಗೊಳಿಸಿದರೂ ಚಿಂಚೋಳಿಯಿಂದ ಉಮೇಶ್‍ಜಾಧವ್ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಬದಲಾವಣೆಯ ಅಗತ್ಯವಿದೆ ಎಂಬುದರ ಬಗ್ಗೆ ನಾನು ಪರವಾಗಿದ್ದೇನೆ. ಆದರೆ, ಮುಂದೆ ಅವರು ಚುನಾವಣೆಗೆ ಸ್ಪರ್ಧಿಸಬರದು ಎನ್ನುವ ತೀರ್ಪು ಹೈಕೋರ್ಟ್‍ನಲ್ಲಿ ತೀರ್ಮಾನ ಆಗಬೇಕು. ರಾಜೀನಾಮೆ ಮತ್ತು ವಜಾಗೊಳಿಸಿ ಎಂಬ ಎರಡು ತೀರ್ಪು ನಮ್ಮ ಮುಂದಿದೆ ಎಂದು ವಿವರಿಸಿದರು.

ಸದಸ್ಯರನ್ನು ಶಾಸಕತ್ವದಿಂದ ವಜಾಗೊಳಿಸಬೇಕೆಂದು ದೂರು ಬಂದಿದ್ದು, ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿ ಇದೆ. ಈ ಮಧ್ಯೆ ಅದೇ ಸದಸ್ಯ ಬಂದು ರಾಜೀನಾಮೆ ನೀಡಿರೋದು ನನ್ನರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಪ್ರಕರಣ. ನನ್ನ ಮನಸಾಕ್ಷಿ, ಕಾನೂನು ಏನು ಹೇಳುತ್ತದೆಯೋ ಹಾಗೆ ಕೆಲಸ ಮಾಡುತ್ತೇನೆ. ರಾಜ್ಯದ ಜನರಿಗೆ ಗೊತ್ತಾಗಬೇಕೆಂದು ಮಾಧ್ಯಮಗಳ ಮುಂದೆ ಪಾರದರ್ಶಕವಾಗಿ ವಿಚಾರಣೆ ಮಾಡುತ್ತಿದ್ದೇನೆ ಎಂದರು.

ವಜಾಗೊಳಿಸುವ ವಿಚಾರಣೆಗೆ ತರರಾರಿಲ್ಲ ಎಂದು ಜಾಧವ್ ಪರ ವಕೀಲರು ಹೇಳಿದ್ದಾರೆ. ಮುಂದೆ ಆ ವಿಚಾರಣೆಗೆ ಅವರು ಹಾಜರಾಗುತ್ತಾರೆ ಎಂದು ಹೇಳಿದರು.

ರಾಜೀನಾಮೆ ನೀಡುವುದು, ಅಂಗೀಕಾರ ಮಾಡುವುದು ಸ್ಪೀಕರ್ ಮತ್ತು ಶಾಸಕರ ನಡುವೆ ಇರುವ ವಿಚಾರ. ಆದರೆ ಇವತ್ತು ಎಲ್ಲರ ಮುಂದೆಯಾಕೆ ವಿಚಾರಣೆ ಮಾಡುತ್ತಿದ್ದೇನೆ ಅಂದರೆ ಜಾಧವ್ ಅವರು ರಾಜೀನಾಮೆ ನೀಡುವ ಮೊದಲೇ ಅವರು ಇದ್ದ ಪಕ್ಷದ ನಾಯಕರು ನನಗೆ ದೂರು ನೀಡಿದ್ದರು. ಆ ದೂರುಇನ್ನೂ ವಿಚಾರಣೆ ಹಂತದಲ್ಲಿದೆ. ಅಲ್ಲದೇ ಸದಸ್ಯರ ಕ್ಷೇತ್ರದ ಜನರು ಕೆಲವು ಮನವಿ ಮಾಡಿದ್ದಾರೆ. ಹಾಗಾಗಿ, ಸತ್ಯದ ನಿಷ್ಠೆ ಏನು ಅಂತ ಜನರಿಗೆ ನಾನು ತಿಳಿಸಬೇಕಾಗಿದೆ ಎಂದರು.

ಡಾ. ಉಮೇಶ್ ಜಾಧವ್ ಸ್ಪರ್ಧೆಯ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಅದರ ಬಗ್ಗೆ ನಾನೂ ಏನೂ ಹೇಳುವುದಿಲ್ಲ. ಮಾಧ್ಯಮಗಳ ಎದುರು ವಿಚಾರಣೆ ಮಾಡುವುದು ಹೊಸ ಅಧ್ಯಾಯ. ಮತದಾರರ ಅಭಿಪ್ರಾಯವನ್ನು ಚುನಾಯಿತ ಪ್ರತಿನಿಧಿಯಾಗಿ ರಾಜೀನಾಮೆ ನೀಡುವಾಗ ಕೇಳಿದ್ದಾರೊ ಇಲ್ಲವೊ ಎಂಬುದನ್ನ ಆಲಿಸಿದ್ದೇನೆ ಎಂದರು.

 

ಇದಕ್ಕೂ ಮುನ್ನ ಉಮೇಶ್ ಜಾಧವ್ ಪರ ವಕೀಲ ಸಂದೀಪ್ ಪಾಟೀಲ್ ಮಾತನಾಡಿ, ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ ಬಳಿಕ ವಜಾಗೊಳಿಸಬೇಕು ಅನ್ನೋ ವಿಚಾರಣೆಯನ್ನು ಮುಂದುವರಿಸಿ, ನಾವು ಕೂಡ ಆ ವಿಚಾರಣೆಯಲ್ಲಿ ಭಾಗಿಯಾಗುತ್ತೇವೆ. 10ನೇ ಶೆಡ್ಯೂಲ್ ನಲ್ಲಿ ವಜಾಗೊಳಿಸುವ ಪ್ರಕ್ರಿಯೆ ಬೇರೆ. ಹಾಗಯೇ ರಾಜೀನಾಮೆ ಸ್ವೀಕಾರಕ್ಕೆ ಇರುವ ಪ್ರಕ್ರಿಯೆಯೇ ಬೇರೆ ಎಂದರು.

ಜಾಧವ್ ಪರ ವಕೀಲ ಸಂದೀಪ್ ಪಾಟೀಲ್ ಮಾತನಾಡಿ,

ಮಾರ್ಚ್ 4ಕ್ಕೆ ಉಮೇಸ್‍ಜಾಧವ್ ಅವರು ರಾಜೀನಾಮೆ ನೀಡಿದ್ದಾರೆ. ಮಾರ್ಚ್ 6ಕ್ಕೆ ಬಿಜೆಪಿ ಸೇರಿದ್ದಾರೆ. ದೂರು ಬಂದಿರೋದು ವಿಧಾನ ಸಭೆಗೆ ಮತ್ತೆ ಆಯ್ಕೆಯಾಗುತ್ತಾರೆ ಜಾದವ್ ಬರಬಾರದು ಅಂತ ಅಥವಾ ಅವರು ಶಾಸಕರಾಗಿ ಮುಂದುವರಿಯಬಾರದು ಎಂದು ದೂರು ಬಂದಿರುವುದು. ಈ  ಬಗ್ಗೆ ಅನರ್ಹಗೊಳಿಸಿದ ಬಳಿಕ ಅನರ್ಹನಾಗುತ್ತಾರೆ. ಅನರ್ಹಗೊಳ್ಳುವರೆಗೂ ಜಾಧವ್‍ಅವರು ಶಾಸಕರಾಗಿರುತ್ತಾರೆ. ಆದರೆಅದ್ಯಾವುದು ಬೇಡವೆಂದುರಾಜೀನಾಮೆ ನೀಡಿದ್ದಾರೆ. ಇದನ್ನೆಲ್ಲ ಗಮನಿಸಿ ನೀವು ಏನು ತೀರ್ಪುಕೊಟ್ಟರು ನಾವು ತಲೆಬಾಗುತ್ತೇವೆಎಂದು ಮನವಿ ಮಾಡಿದರು.

ಕಾಂಗ್ರೆಸ್ ಪರ ವಕೀಲ ಶಶಿಕಿರಣ್ ಮಾತನಾಡಿ, ಫೆ.16ರಂದು ಕಾಂಗ್ರೆಸ್ ನಾಯಕರುದೂರು ನೀಡಿದ್ದಾರೆ. ಬಳಿಕ ಜಾಧವ್‍ತಾನು ಪಕ್ಷದಲ್ಲೇ ಇದ್ದೇನೆ ಎಂದು ತಿಳಿಸಿದ್ದಾರೆ. ನಂತರ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 6ಕ್ಕೆ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ವಜಾಗೊಳಿಸಿದ್ದರೆ ಅವರು ರಾಜೀನಾಮೆಕೊಡುವ ಪ್ರಶ್ನೆ ಎದುರಾಗುತ್ತಿರಲಿಲ್ಲ ಎಂದರು.

 

ಇದೇ ವೇಳೆ ಮತದಾರ ಶಿವಕುಮಾರ್ ಎಂಬುವರು ಮಾತನಾಡಿ, ಉಮೇಶ್ ಜಾಧವ್ ಅವರ ರಾಜೀನಾಮೆ ಪಡೆಯಬೇಡಿ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಅವರನ್ನು ಆಯ್ಕೆ ಮಾಡಿದ್ದೇವೆ. ಹಿಂದೆ ಒಳ್ಳೆಯ ಕೆಲಸ ಮಾಡಿದ್ದರು ಎಂದು ಎರಡು ಬಾರಿ ಆಯ್ಕೆ ಮಾಡಿದ್ದೆವು. ಇನ್ನೂ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎನ್ನುವ ಅಸೆ ನಮಗಿತ್ತು. ಆದರೆ, ಶಾಸಕರಿಗೆ ಏನು ಆಯಿತೋ ಗೊತ್ತಿಲ್ಲ. ಅವರು ಯಾರ ಬಳಿ ಕೇಳದೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಹೀಗಾಗಿ ಅಂಗೀಕರಿಸಬಾರದು ಎಂದು ಮನವಿ ಮಾಡಿದರು.

ಮತ್ತೊರ್ವ ಮತದಾರರಾದ ಸವಿತಾ ಸಜ್ಜನ್ ಮಾತನಾಡಿ, ಗೆದ್ದ ಬಳಿಕ ಶಾಸಕರು ಕೈಗೆ ಸಿಗುತ್ತಿಲ್ಲ. ಎಲ್ಲ ಮತದಾರರ ಬಳಿ ಕೇಳಿ ರಾಜೀನಾಮೆ ಕೊಟ್ಟಿದ್ದೇನೆ ಎನ್ನುತ್ತಾರೆ. ಆದರೆ, ಅವರು ಯಾರ ಬಳಿ ಕೇಳದೇ ರಾಜೀನಾಮೆ ನೀಡಿದ್ದಾರೆ. ಅವರು ಹಣ ಅಮಿಷಕ್ಕೆ ಬಲಿಯಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆಏನಾದ್ರೂ ಸಾಕ್ಷಿಇದೀಯಾ ಎಂದು ಸ್ಪೀಕರ್ ಕೇಳಿದರು. ಈ ಬಗ್ಗೆ ಮಾಧ್ಯಮದಲ್ಲೂ ವರದಿಯಾಗಿದೆ. ಜನ ಕೂಡ ಹೇಳಿದ್ದಾರೆ ಎಂದಾಗ, ಮಾಧ್ಯಮದಲ್ಲಿ ಬಂದಿದ್ದು ಎಲ್ಲ ಸರಿ ಅಲ್ಲ ಎಂದರು.

 

ಈ ವೇಳೆ ಶಾಸಕ ಉಮೇಶ್‍ಜಾಧವ್ ಮಾತನಾಡಿ, ನನಗೆ ಮತ ಹಾಕಿರುವ, ಚಿಂಚೊಳ್ಳಿ ಜನತೆ ನನ್ನಲ್ಲಿ ಮನವಿ ಮಾಡಿದರು. ಅದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ ಕಳೆದ 6 ತಿಂಗಳಿಂದ ಆದ ಬೆಳವಣಿಗೆ ಎಲ್ಲರಿಗೂಗೊತ್ತಿದೆ. ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಹೆಚ್ಚೇನು ಮಾತಾಡಲಿಕ್ಕೆ ಇಚ್ಚಿಸುವುದಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.


ಸಂಬಂಧಿತ ಟ್ಯಾಗ್ಗಳು

#Umesh Jhadav # Reserved # Disqualification #Ramesh Kumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ