ಉದ್ಯೋಗಿಗಳಿಗೆ ಚುನಾವಣೆ ಶಾಕ್ ನೀಡಿದ ಐಟಿ ಕಂಪನಿಗಳು

IT Companies Offering Election Shock to Employees

26-03-2019

ಚುನಾವಣೆಯ ಸಂದರ್ಭದಲ್ಲಿ ರಜೆ ಪಡೆದು ಪ್ರವಾಸ,ಮೋಜು-ಮಸ್ತಿಗೆ ತೆರಳುವ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಹಲ ಐಟಿ ಕಂಪನಿಗಳು ಈ ಬಾರಿ ನಡೆಯಲಿರುವ ಮತದಾನದ ದಿನದಂದು ವೇತನ ಸಹಿತ ರಜೆ ನೀಡುತ್ತೇವೆ.ಆದರೆ ಮತದಾನ ಮಾಡಿದ್ದಕ್ಕೆ ಒಂದು ವಾರದೊಳಗಾಗಿ ದಾಖಲೆ ಸಲ್ಲಿಸಬೇಕು ಎಂದು ಕರಾರು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮತದಾನದ ದಿನ ವೇತನ ಸಹಿತ ರಜೆ ನೀಡುತ್ತೇವೆ.ಹೀಗೆ ರಜೆ ಪಡೆದವರು ತಾವು ಮತದಾನ ಮಾಡಿದ್ದಕ್ಕೆ ಪ್ರತಿಯಾಗಿ ಚುನಾವಣಾಧಿಕಾರಿಗಳು ನೀಡುವ ಪೂರಕ ದಾಖಲೆಯನ್ನು ಒಂದು ವಾರದೊಳಗಾಗಿ ಸಂಸ್ಥೆಗೆ ಸಲ್ಲಿಸಬೇಕು ಎಂದು ಕರಾರು ಹಾಕಿವೆ.

ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಲವು ರಜೆಗಳ ಸವಲತ್ತುಗಳಿದ್ದು ಈ ಸಂದರ್ಭದಲ್ಲಿ ಅದರ ಲಾಭ ಪಡೆದು ಮತದಾನದ ದಿನವನ್ನೂ ಮೋಜು-ಮಸ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಹಲವು ಐಟಿ ಕಂಪನಿಗಳು ಈ ವಿಶೇಷ ಕಾರ್ಯಾಚರಣೆಗೆ ಮುಂದಾಗಿವೆ.

ಅಂದ ಹಾಗೆ ಸರ್ಕಾರಿ ರಜೆಗಳಂದು ಐಟಿ ಕಂಪನಿಗಳಿಗೆ ರಜೆ ಇರಬೇಕೆಂದೇನೂ ಇಲ್ಲ.ಹೀಗಾಗಿ ಆ ರಜೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕಷ್ಟ ಕೂಡಾ.ಆದರೆ ಮತದಾನದ ದಿನ ಸಾರ್ವತ್ರಿಕ ರಜೆ ಇಲ್ಲ.

ಆದರೆ ಮೊದಲ ಹಂತದ ಮತದಾನ ನಡೆಯುವ ಏಪ್ರಿಲ್ ಹದಿನೆಂಟರಂದು ವೇತನ ಸಹಿತ ರಜೆ ಪಡೆಯುವವರು ಮರು ದಿನ ಗುಡ್ ಫ್ರೈಡೇ ಸೌಲಭ್ಯ ಪಡೆದರೂ,ರಜೆ ಹಾಕಿದರೂ ಶನಿವಾರ ಹಾಗೂ ಭಾನುವಾರ ಬರುತ್ತದೆ.ಹೀಗಾಗಿ ನಾಲ್ಕು ದಿನ ಅವರಿಚ್ಚೆಯಂತೆ ಸಮಯ ಬಳಸಿಕೊಳ್ಳುವ ಅವಕಾಶ ಲಭ್ಯವಾಗುತ್ತದೆ.

ಹೀಗಾಗಿ ಮತದಾನದ ದಿನ ವೇತನ ಸಹಿತ ರಜೆ ನೀಡಲಾಗಿದ್ದು ಅಂದು ಮತದಾನ ಮಾಡಿದ ಕುರಿತು ಚುನಾವಣಾಧಿಕಾರಿಗಳು ನೀಡುವ ದಾಖಲೆಯನ್ನು ಒಂದು ವಾರದೊಳಗೆ ಸಂಸ್ಥೆಗೆ ಸಲ್ಲಿಸಬೇಕು ಎಂದು ಹಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿವೆ.

ಹೀಗೆ ಐಟಿ ಸಂಸ್ಥೆಗಳು ಇಟ್ಟಿರುವ ಹೆಜ್ಜೆ ಕುತೂಹಲಕಾರಿಯಾಗಿದ್ದು ಸರ್ಕಾರಿ ರಜೆಗಳನ್ನು ಬಳಸಿಕೊಳ್ಳುವವರ ಮೇಲೂ ಇಂತಹ ಕರಾರು ಹಾಕುವಂತೆ ಹಲ ಪ್ರಮುಖರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

ಮತದಾನವನ್ನು ಕಡ್ಡಾಯಗೊಳಿಸಲು ಅನುಕೂಲವಾಗುವಂತೆ ಖಾಸಗಿ ಸಂಸ್ಥೆಗಳ ಹಾಗೆಯೇ ಸರ್ಕಾರವೂ ಈ ತಂತ್ರವನ್ನು ಬಳಸಬೇಕು ಎಂದು ಹಲವರು ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಏನು ಮಾಡುತ್ತದೆ?ಎಂಬುದನ್ನು ಗಮನಿಸಬೇಕಿದೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Shock #Election # It Companies


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ