ತೆರೆ ಮೇಲೆ ಬರ್ತಿದೆ ತಲೈವಿ ಬಯೋಪಿಕ್ 

Jayalalitha Biopic on the Screen

23-03-2019

ಬಾಲಿವುಡ್‍ನಲ್ಲಿ ಈಗ ರಾಜಕಾರಣಿಗಳ ಬಯೋಪಿಕ್‍ನದ್ದೇ ಸದ್ದು. ಬಾಳಠಾಕ್ರೆ, ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಬಯೋಪಿಕ್ ತೆರೆಗೆ ಬರುತ್ತಿದ್ದಂತೆ ಇದೀಗ ದಕ್ಷಿಣ ಭಾರತದ ಹೆಸರಾಂತ ನಟಿ ಹಾಗೂ ದಕ್ಷ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ಕೂಡ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. 

ಈಗಾಗಲೆ ಜಯಲಲಿತಾಜೀವನ ಆಧರಿಸಿ ಒಂದು ಬಯೋಪಿಕ್ ತೆರೆಗೆ ಬರುತ್ತಿದ್ದು,  ಅದರಲ್ಲಿ ಜಯಲಲಿತಾ ಪಾತ್ರದಲ್ಲಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ. ಇದರ ಮಧ್ಯೆ ಮತ್ತೊಮ್ಮೆ ಜಯಲಲಿತಾ ಬಯೋಪಿಕ್ ತೆರೆಗೆ ಬರಲು ಸಿದ್ಧತೆ ಆರಂಭವಾಗಿದೆ. 

ಇತ್ತೀಚಿಗಷ್ಟೆ ಮಣಿಕರ್ಣಿಕಾದಂತಹ ಹಿಟ್ ಚಿತ್ರ ನೀಡಿದ ನಟಿ ಕಂಗನಾ ರಣಾವತ್ ಈ ಚಿತ್ರದಲ್ಲಿ ಕುಮಾರಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ.ಎಲ್.ವಿಜಯ್ ನಿರ್ದೇಶಿಸಲಿರುವ ಈ ಚಿತ್ರದಕ್ಕೆ  ಬಾಹುಬಲಿ, ಮಣಿಕರ್ಣಿಕಾದಂತಹ ಚಿತ್ರಗಳಿಗೆ ಕತೆ ಬರೆದಿರುವ  ವಿಜಯೇಂದ್ರ ಪ್ರಸಾದ್ ಕತೆ ಸಿದ್ಧಪಡಿಸುತ್ತಿದ್ದಾರೆ. 

ಒಬ್ಬ ವ್ಯಕ್ತಿಯನ್ನು ಆಧರಿಸಿ ಎರಡಿಸಿ ಬಯೋಪಿಕ್‍ಗಳು ಸಿದ್ಧವಾಗುತ್ತಿರುವುದರಿಂದ ಸಹಜವಾಗಿಯೇ ಯಾವ ಚಿತ್ರ ಹೇಗೆ ಮೂಡಿ ಬರಬಹುದೆಂಬ ಕುತೂಹಲ ಜನರಲ್ಲಿ ಮನೆ ಮಾಡಿದ್ದು, ಯಾವ ಯಾವ ಸಂಗತಿಗಳನ್ನು ಚಿತ್ರಗಳು ಒಳ್ಳಗೊಳ್ಳಲಿದೆ ಎಂಬದು ಜಯಲಲಿತಾ ಅವರನ್ನು ಹತ್ತಿರದಿಂದ ಬಲ್ಲವರ ಕುತೂಹಲವಾಗಿದೆ. 

ಕಂಗನಾ ರಣಾವತ್ ನಟಿಸುವ ಚಿತ್ರ ಹಿಂದಿ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು,  ತಮಿಳಿನಲ್ಲಿ ತಲೈವಿ ಟೈಟಲ್ ಫೈನಲ್ ಆಗಿದ್ದರೇ, ಹಿಂದಿಯಲ್ಲಿ ಜಯಾ ಎಂದು ಹೆಸರಿಡಲಾಗುತ್ತಿದೆ. ಈ ಬಯೋಪಿಕ್‍ಗಳು ವರ್ಷಾಂತ್ಯಕ್ಕೆ ತೆರೆ ಕಾಣಲಿದ್ದು, ಜಯಾ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. 
ಜಯಲಲಿತಾ ಕರ್ನಾಟಕದಲ್ಲಿ ಹುಟ್ಟಿದ್ದರೂ ನಾಯಕಿಯಾಗಿ ಬೆಳೆದು ನಿಂತಿದ್ದು, ಸಿಎಂ ಆಗಿ  ಮನೆ ಮನೆಯಲ್ಲಿ ಅಮ್ಮನಾಗಿ ಪೂಜಿಸಲ್ಪಟ್ಟಿದ್ದು, ತಮಿಳುನಾಡಿನಲ್ಲಿ ಹೀಗಾಗಿ ಚಿತ್ರ ತಮಿಳುನಾಡಿನಲ್ಲಿ ಅದ್ಭುತ ಪೂರ್ವ ಯಶಸ್ಸು ಪಡೆಯೋದರಲ್ಲಿ ಸಂಶಯವಿಲ್ಲ. 


ಸಂಬಂಧಿತ ಟ್ಯಾಗ್ಗಳು

#Bollywood # Biopic #Jayalalitha #Kangana Ranaut


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ