ಬಿಜೆಪಿ ಕೇ ಸಾರಿ ಚೌಕಿದಾರ ಜೋರ್ ಹೈ- ರಾಹುಲ್ ಗಾಂಧಿ

 BJP

23-03-2019

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕೆಗೆ ಒಂದೊಳ್ಳೆ ಅಸ್ತ್ರ ಹುಡುಕಿಕೊಂಡಿದ್ದು, ಬಿಎಸ್‍ವೈ ಹೈಕಮಾಂಡ್‍ಗೆ ನೀಡಿದ್ದರೂ ಎನ್ನಲಾದ ಕಪ್ಪಕಾಣಿಕೆಯ ವಿವರ ಉಳ್ಳ ಡೈರಿಯ ಪ್ರತಿಗಳನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‍ನ ಸುರ್ಜೆವಾಲ್ ಸುದ್ದಿಗೋಷ್ಠಿ ನಡೆಸಿ ವಿವರ ಬಿಡುಗಡೆಗೊಳಿಸಿದ್ದು, ಮೋದಿ ಲೋಕಪಾಲ್ ತನಿಖೆಗೆ ಒಳಪಡಿಸಲಿ ಎಂದಿದ್ದಾರೆ. ಇನ್ನು ಈ ವಿಚಾರಕ್ಕೆ ಕಟುವಾಗಿ ಟೀಕಿಸಿರುವ ರಾಹುಲ್ ಗಾಂಧಿ ಬಿಜೆಪಿಯ ಎಲ್ಲ ಚೌಕಿದಾರರೂ ಕಳ್ಳರು ಎಂದಿದ್ದಾರೆ.
 
ಈ ಹಿಂದೆ ಅನಂತಕುಮಾರ್ ಹಾಗೂ ಬಿಎಸ್‍ವೈ ನಡುವಿನ ಮಾತುಕತೆಯ ಆಡಿಯೋ ಇಟ್ಟುಕೊಂಡು ಕಾಂಗ್ರೆಸ್ ಸಾಕಷ್ಟು ಆರೋಪ ಮಾಡಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆ ವೇಳೆ ಮತ್ತೆ ಹಳೆ ಡೈರಿಯ ಪುಟಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿಯವರನ್ನು ಹಾಗೂ ಮೋದಿಯನ್ನು ಹೆದರಿಸುವ ಪ್ರಯತ್ನಕ್ಕೆ ಮುಂದಾದಂತಿದೆ. 

ಇನ್ನು ಈ ಕಪ್ಪ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ ಕೇ ಸಾರಿ ಚೌಕಿದಾರ ಜೋರ್ ಹೈ ಎಂದಿದ್ದು, ಕೆಳಗಡೆ ನಮೋ, ಅರುಣ್ ಜೇಟ್ಲಿ, ರಾಜನಾಥ ಸಿಂಗ್ ಎಂದು ನಮೂದಿಸಿದ್ದಾರೆ. ಮೋದಿ ಮೈ ದೇಶ ಕಾ ಚೌಕಿದಾರ್ ಹೂಂ ಅಂದಾಗಿನಿಂದ ರಾಹುಲ್ ಗಾಂಧಿ ಚೌಕಿದಾರ ಚೋರ್ ಅನ್ನುತ್ತಲೇ ಬಂದಿದ್ದರು. ಈಗ ಟೀಕಿಸಲು ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ. 

ಸುರ್ಜೆವಾಲ್ ಬಿಡುಗಡೆ ಮಾಡಿದ ಡೈರಿಗೆ ಪ್ರತ್ಯುತ್ತರವಾಗಿ ಬಿಜೆಪಿ ಕೂಡ ಟ್ವಿಟ್ ಮಾಡಿದ್ದು, ಸ್ವತಃ ಬಿಎಸ್‍ವೈ ಸುದ್ದಿಗೋಷ್ಠಿ ನಡೆಸಿ ಈ ಡೈರಿ ಕಪೋಲ್ ಕಲ್ಪಿತವಾಗಿದ್ದು, ನನಗೂ ಇದಕ್ಕೂ ಸಂಬಂಧವಿಲ್ಲ. ಇದು ನನ್ನ ಬರಹವಲ್ಲ ಎಂದಿದ್ದಾರೆ. 
ಆದರೆ ಕಾಂಗ್ರೆಸ್ ರಾಜ್ಯ ನಾಯಕರು, ಹೈಕಮಾಂಡ್‍ಗೆ ಕಪ್ಪ ನೀಡಿದ್ದಾರೆ. ಡೈರಿಯಲ್ಲಿ ಅರುಣ್ ಜೇಟ್ಲಿ,ರಾಜನಾಥ ಸಿಂಗ್ ಹಾಗೂ ನಿತಿನ್ ಗಡ್ಕರಿ  ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರೂಪಾಯಿ ನೀಡಿದ್ದಾರೆ ಎಂಬ ಉಲ್ಲೇಖವಿದೆ. 
ಹೀಗಾಗಿ ಲೋಕಪಾಲ್  ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. 


ಕಾಂಗ್ರೆಸ್ ಚುನಾವಣೆ ಎದುರಿನಲ್ಲಿ ಈ ವಿಚಾರವನ್ನು ಮರುಪ್ರಸ್ತಾಪ ಮಾಡಿರೋದು ಬಿಜೆಪಿಗೆ ಮುಜುಗರ ತರುವಂತಾಗಿದ್ದು, ಮೈ ಬಿ ಚೌಕಿದಾರ್ ಬದಲು ಚೌಕಿದಾರ್ ಚೋರ್ ಹೈ ಅನ್ನೋ ಕಾಂಗ್ರೆಸ್ ಉದ್ಘಾರಕ್ಕೆ ಮೋದಿ, ಅಮಿತ್ ಶಾ ಏನೆಂದು ಉತ್ತರಿಸುತ್ತಾರೆ ಕಾದು ನೋಡಬೇಕಿದೆ.  
 


ಸಂಬಂಧಿತ ಟ್ಯಾಗ್ಗಳು

#Loksabha 2019 #Bjp #Congress #Rahul Gandhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ