ನೀವು ಓಲಾ ಪ್ರಯಾಣಿಕರಾಗಿದ್ದರೆ ಕಾದಿದೆ ಶಾಕ್

 If you are an Ola traveler, it

23-03-2019

ನಗರದಲ್ಲಿ ಓಲಾ ಕ್ಯಾಬ್ ಹಾಗೂ ಅಟೋಗಳ ಅಟಾಟೋಪ ಎಲ್ಲೆ ಮೀರಿತ್ತು. ಯಾವುದೆ ನಿಯಮಗಳಿಲ್ಲದೇ, ಜನರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದ ಓಲಾಗೆ ಇದೀಗ  ಸಾರಿಗೆ ಇಲಾಖೆ ಬ್ರೇಕ್ ಹಾಕಿದ್ದು, ಸಾರಿಗೆ ನಿಯಮ ಉಲ್ಲಂಘಿಸಿ  ಬೈಕ್, ಟ್ಯಾಕ್ಸಿಗಳನ್ನು  ಕಾರ್ಯಾಚರಣೆಗಿಳಿಸಿದ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳ ಕಾಲ ಓಲಾ ಕಂಪನಿಗೆ ನೀಡಿದ್ದ ಪರವಾನಿಗೆ ರದ್ದು ಮಾಡಿ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಈ ಬಗ್ಗೆ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ,  ಮೂರು ದಿನದಲ್ಲಿ 2021 ಜೂ 19 ರವರೆಗೆ ಚಾಲ್ತಿಯಲ್ಲಿರುವ ಪರವಾನಿಗೆಯನ್ನು ತಂದು ಪ್ರಾಧಿಕಾರಕ್ಕೆ ಒಪ್ಪಿಸಬೇಕು. ಜೊತೆಗೆ ಟ್ಯಾಕ್ಸಿ ಸೇವೆಯನ್ನು  ನಿಲ್ಲಿಸಬೇಕೆಂದು ಕಟ್ಟುನಿಟ್ಟಾದ ಆದೇಶ ನೀಡಿದೆ. 
ಅಲ್ಲದೆ ಸಾರಿಗೆ ಇಲಾಖೆಯ ಆಯುಕ್ತರು ನೀಡಿರುವ ಓಲಾ ಅಮಾನತು ಆದೇಶವನ್ನು  ಎಲ್ಲೆಡೆ ಜಾರಿಗೊಳಿಸುವಂತೆ ಈಗಾಗಲೇ ಎಲ್ಲ ಆರ್‍ಟಿಓಗಳಿಗೆ ಸಾರಿಗೆ ಇಲಾಖೆ ಆದೇಶಿಸಿದೆ. ಅಲ್ಲದೆ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಮಾಚ್ 25 ರವರೆಗೆ ಅವಕಾಶ ನೀಡಲಾಗಿದೆ. 
ಇದರ ಬಳಿಕ ರಸ್ತೆಗಿಳಿಯುವ ಓಲಾ ಕ್ಯಾಬ್‍ಗಳನ್ನು  ವಶಕ್ಕೆ ಪಡೆಯಲಾಗುವುದು ಎಂದು ಸಾರಿಗೆ ಇಲಾಖೆ  ಎಚ್ಚರಿಕೆ ನೀಡಿದೆ. ಸರ್ಕಾರ ನಿಯಮ ಉಲ್ಲಂಘನೆ ಬಗ್ಗೆ ನೀಡಿದ್ದ ನೊಟೀಸ್‍ಗೆ ಓಲಾ ಸಂಸ್ಥೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಈ ಅಮಾನತ್ತು ಆದೇಶ ಹೊರಬಿದ್ದಿದೆ. 
ಇನ್ನು ರಾಜ್ಯದ ಬೆಂಗಳೂರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಈ ಓಲಾ ಸೌಲಭ್ಯ ಬಳಕೆಯಲ್ಲಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಪ್ರತಿನಿತ್ಯ ಓಲಾವನ್ನು ಓಡಾಟಕ್ಕಾಗಿ ಅವಲಂಬಿಸಿದ್ದಾರೆ. ಒಂದೊಮ್ಮೆ ಓಲಾ ನಿಷೇಧವಾದಲ್ಲಿ ಮತ್ತೆ ಈ ಪ್ರಯಾಣಿಕರು ಸಮಸ್ಯೆಗಿಡಾಗಲಿದ್ದಾರೆ. ಇನ್ನೊಂದೆಡೆ ಸಾವಿರಾರು ಯುವಕರು ಈ ಓಲಾ ಟ್ಯಾಕ್ಸಿಗಳ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದು, ಧೀಡಿರ ಓಲಾ ಸ್ಥಗತಿಗೊಳ್ಳೋದರಿಂದ ಈ ಚಾಲಕರು ಉದ್ಯೋಗದಿಂದ ವಂಚಿತರಾಗಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Karnataka #Break #Ola service #March 25


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ