ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಭ್ರಷ್ಟರು !

Kannada News

07-06-2017

ಬೆಂಗಳೂರು:- ಮೈಸೂರು ಹಾಗೂ ಮಡಿಕೇರಿ ಯಲ್ಲಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಭ್ರಷ್ಟ ಅಧಿಕಾರಿಗಳು, (ಎಸಿಬಿ) ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮೈಸೂರು ನಗರಾಭಿವೃದ್ಧಿ ಕಚೇರಿಯ ವಿಶೇಷ ಭೂಸ್ವಾಧೀನ ಶಾಖೆಯ ಪ್ರಥಮದರ್ಜೆ ಸಹಾಯಕ  ಮಲ್ಲೇಶಯ್ಯ 5 ಸಾವಿರ ರೂ.ಲಂಚ ಪಡೆಯುವಾಗ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ವಿಜಯನಗರ 4 ನೇ ಹಂತದ ಜಮೀನಿಗೆ ಸಂಬಂಧಿದ ನಿರಪೇಕ್ಷಣಾ ಪತ್ರ ನೀಡಲು ಈ ಲಂಚದ ಬೇಡಿಕೆ ಇಟ್ಟಿದ್ದ ಮಲ್ಲೇಶಯ್ಯನನ್ನು ಬಲಗೆ ಕೆಡವಿ ವಿಚಾರಣೆ ನಡೆಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ  ಮಡಿಕೇರಿಯ ಕುಶಾಲನಗರದ ಆರ್‍ಎಫ್‍ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿನೋದ್ ಕುಮಾರ್ 20 ಸಾವಿರ  ರೂ.ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟಿಂಬರ್ ಲಾರಿಯೊಂದನ್ನು ಬಿಡಲು ಈ ಹಣದ ಬೇಡಿಕೆ ಇಟ್ಟಿದ್ದ. ಈ ಸಂಬಂಧ ನಂಜಪ್ಪ ಎನ್ನುವವರು ದೂರು ದಾಖಲಿಸಿದ್ದರು. ಎಸಿಬಿ ಎಸ್ಪಿ ಕವಿತಾ ಮಾರ್ಗದರ್ಶನ ದಲ್ಲಿ ಡಿವೈಎಸ್ಪಿ ಶಾಂತಮಲ್ಲಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಲೆಗೆ ಕೆಡವಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ