ಕಮಲದ ತೆಕ್ಕೆಗೆ ಕ್ರಿಕೆಟಿಗ್ ಗೌತಮ ಗಂಭೀರ್

 The Cricketer Gautam Gambhir to Bjp

22-03-2019

ಸಿನಿಮಾ ನಟ-ನಟಿಯರ ಬಳಿಕ ಇದೀಗ ಕ್ರೀಡಾಪಟುಗಳು ಬಿಜೆಪಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೌದು ಮಾಜಿ ಕ್ರಿಕೆಟಿಗ್ ಗೌತಮ್ ಗಂಭೀರ, ನವದೆಹಲಿಯ ಬಿಜೆಪಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅವರನ್ನು ಕೇಂದ್ರ ಸಚಿವರಾದ ಅರುಣ ಜೇಟ್ಲಿ ಹಾಗೂ  ರವಿಶಂಕರ್ ಪ್ರಸಾದ್ ಹಾಜರಿದ್ದು ಸ್ವಾಗತಿಸಿ ಬರಮಾಡಿಕೊಂಡರು. 

ಹಿಂದಿನಿಂದಲೂ ಬಿಜೆಪಿ ಬಗ್ಗೆ ಒಲವು ಹೊಂದಿದ್ದ ಗೌತಮ್ ಗಂಭೀರ್ ಮೋದಿ ಬಗ್ಗೆ ತಮ್ಮ ನಿಲುವುಗಳನ್ನು ಪ್ರದರ್ಶಿಸುತ್ತ ಬಂದಿದ್ದರು. ಅಲ್ಲದೆ ಗಂಭೀರ್,  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಸುಸಂದರ್ಭದಲ್ಲೇ ಗಂಭೀರ್ ಬಿಜೆಪಿ ಪಾಳಯ ಸೇರ್ಪಡೆಗೊಂಡಿದ್ದಾರೆ. 

 ಬಿಜೆಪಿ ನಿನ್ನೆಯಷ್ಟೇ 182 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಉಳಿದ ಕ್ಷೇತ್ರಗಳ ಪಟ್ಟಿ ಪ್ರಕಟವಾಗಬೇಕಿದೆ. ಇನ್ನು ಆ ಎರಡನೆ ಪಟ್ಟಿಯಲ್ಲಿ ಗೌತಮ್ ಗಂಭೀರ್ ಹೆಸರು ಕೂಡಇರಬಹುದೆಂಬ ನೀರಿಕ್ಷೆ ವ್ಯಕ್ತವಾಗಿದೆ. ಈ ಮೊದಲೆ ಗೌತಮ್ ಗಂಭೀರ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಮೋದಿ ಪರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಗಂಭೀರ್ ಪಕ್ಷ ಸೇರ್ಪಡೆಯನ್ನು ಬಿಜೆಪಿಯ ಕಾರ್ಯಕರ್ತರು ಸ್ವಾಗತಿಸಿದ್ದು, ಸಂಭ್ರಮಿಸಿದ್ದಾರೆ .

ಇತ್ತೀಚಿಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತರಾದ ಗೌತಮ್ ಗಂಭೀರ್ ಕೋಚಿಂಗ್ ಸೇರಿದಂತೆ ಯಾವುದೇ ಕ್ಷೇತ್ರದತ್ತ ಮುಖಮಾಡದೆ ನಿವೃತ್ತಿ ಜೀವನ ಎಂಜಾಯ್ ಮಾಡುತ್ತಿದ್ದರು. ಈಗ ಬಿಜೆಪಿ ಸೇರ್ಪಡೆಯಾಗಿದ್ದು, ನವದೆಹಲಿಯ ಯಾವುದಾದರೂ ಕ್ಷೇತ್ರದಿಂದ ಗೌತಮ್ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Gautam gambhir #Bjp #Cricketer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ