ಮತ್ತೆ ಅಮೇಥಿಯಿಂದ ಕಣಕ್ಕಿಳಿತಾರೆ ಸ್ಮತಿ ಇರಾನಿ 

Smriti  Irani again from Amethi

22-03-2019

ಮೋದಿ ಓಟವನ್ನು ಕಟ್ಟಿಹಾಕಲು ಕಾಂಗ್ರೆಸ್ ಕಸರತ್ತು ನಡೆಸಿದ್ದರೇ, ಇತ್ತ ಕಾಂಗ್ರೆಸ್‍ನ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ರಾಹುಲ್ ಗಾಂಧಿಯನ್ನು ಲೋಕಸಭೆ ಪ್ರವೇಶಿಸದಂತೆ ತಡೆಯಲು ಮೋದಿ ಟೀಂ ಕೂಡ ಸರ್ಕಸ್ ನಡೆಸಿದೆ. ಹೌದು ರಾಹುಲ್ ಗಾಂಧಿಗೆ ಎದುರಾಳಿಯಾಗಿ ಬಿಜೆಪಿಯ ಸ್ಮøತಿ ಇರಾನಿ ಸ್ಪರ್ಧಿಸಲಿದ್ದು, ರಾಹುಲ್ ಗಾಂಧಿ ಪಾಲಿಗೆ ಇದು ಮತ್ತೊಂದು ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. 


 ಕಳೆದ ಬಾರಿ ಅಮೇಥಿಯಿಂದ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ ಬಿಜೆಪಿಯ ಸ್ಮøತಿ ಇರಾನಿಯನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು. ಆದರೂ ಈ ಬಾರಿಯೂ ಹಲವು ಚುನಾವಣಾ ಲೆಕ್ಕಾಚಾರಗಳ ಬಳಿಕ ಬಿಜೆಪಿ ಮತ್ತೆ ಸ್ಮøತಿ ಇರಾನಿಯನ್ನು ಅಮೇಥಿಯಿಂದಲೇ ಕಣಕ್ಕಿಳಿಸಲು ನಿರ್ಧರಿಸಿದೆ. 


ಕಳೆದ ಬಾರಿ ಸೋತ ಬಳಿಕ ಸ್ಮøತಿ ಇರಾನಿ, ರಾಜ್ಯಸಭಾ ಸದಸ್ಯರಾಗಿ ಪ್ರಸ್ತುತ ಕೇಂದ್ರ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಾರ್ಯಶೈಲಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮನೆಮಾತಾಗಿದ್ದಾರೆ. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಗೆಲುವಿಗೆ ಸ್ಮøತಿ ಇರಾನಿ ಅಡ್ಡಿ ಉಂಟು ಮಾಡುವ ಎಲ್ಲ ಸಾಧ್ಯತೆ ಇದೆ. 


ಕಳೆದ ಬಾರಿ ಸ್ಮøತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಕೇವಲ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಆ 1 ಲಕ್ಷ ಮತಗಳ ಗಳಿಕೆ ಸ್ಮøತಿ ಇರಾನಿಯವರಿಗೆ ಕಷ್ಟವಿಲ್ಲ. ಅಲ್ಲದೆ ಕಳೆದ ಅವಧಿಯಲ್ಲಿ ಸ್ಮøತಿ ಇರಾನಿ ರಾಜ್ಯ ಸಭೆ ಸದಸ್ಯರಾಗಿ, ಸಚಿವರಾಗಿ ತಮ್ಮ ಸಾಧನೆಯನ್ನು ಹೆಚ್ಚಿಸಿಕೊಂಡಿದ್ದರೇ, ರಾಹುಲ್ ಗಾಂಧಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬದಲಾಗಿ ಲಘು ಮಾತುಗಳ ಮೂಲಕ ದೇಶದ ಜನರ ಪಾಲಿಗೆ ಪಪ್ಪು ಎಂಬಂತಾಗಿದ್ದಾನೆ. ಹೀಗಾಗಿ ಈ ಬಾರಿ ರಾಹುಲ್ ಗೆಲುವು ಕಷ್ಟ ಎನ್ನಲಾಗುತ್ತಿದ್ದು, ಅಮೇಥಿಯಲ್ಲಿ ಸ್ಮøತಿ ಮೋಡಿ ಮಾಡ್ತಾರಾ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Rahul Gandhi #Smriti Irani #Amethi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ