ಉಡುಪಿಗೆ ಶೋಭಾ ಕಮ್ ಬ್ಯಾಕ್..., ಎದುರಾಳಿಯಾಗಿ ಪ್ರಮೋದ್ ಮಧ್ವರಾಜ್ 

 Shobha Come back to Udupi  Pramod Madhwaraj is An Opponent

22-03-2019

ರಾಜ್ಯ ಬಿಜೆಪಿ ಟಿಕೇಟ್ ಘೋಷಣೆಯಾಗಿದೆ. ಎಲ್ಲ ಊಹಾಪೋಹಗಳ ಬಳಿಕ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ್, ಅನಂತಕುಮಾರ ಹೆಗಡೆ ಸೇರಿದಂತೆ  ಎಲ್ಲ ಹಾಲಿ ಸಂಸದರೂ ಟಿಕೇಟ್  ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗೋ ಬ್ಯಾಕ್ ಅಭಿಯಾನದ ಬಳಿಕವೂ ಶೋಭಾ ಕರಂದ್ಲಾಜೆ ಟಿಕೇಟ್ ಪಡೆದುಕೊಂಡಿದ್ದು, ಅವರ ಎದುರು ಕಾಂಗ್ರೆಸ್‍ನ ಪ್ರಮೋದ್ ಮಧ್ವರಾಜ್ ಜೆಡಿಎಸ್‍ನಿಂದ ಸ್ಪರ್ಧಿಸಿ ಪೈಪೋಟಿ ನೀಡಲಿದ್ದಾರೆ. 

ಹೌದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಕಾರ್ಯವೈಖರಿಯ ಬಗ್ಗೆ ಕಾರ್ಯಕರ್ತರಲ್ಲಿ ಅಸಮಧಾನ ಉಂಟಾಗಿದ್ದರಿಂದ ಕಾರ್ಯಕರ್ತರೇ ಕೆಲವೆಡೆ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸಿದ್ದರು. ಹೀಗಾಗಿ ಶೋಭಾ ಕರಂದ್ಲಾಜೆ ಬದಲಾಗಿ ಬೇರೆಯವರಿಗೆ ಟಿಕೇಟ್ ನೀಡುತ್ತಾರೆ ಎಂದು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಎಲ್ಲ ಊಹಾಪೋಹಗಳು ಸುಳ್ಳಾಗಿದ್ದು, ಶೋಭಾ ಮೊದಲ ಲಿಸ್ಟ್‍ನಲ್ಲೇ ಟಿಕೇಟ್ ಪಡೆದುಕೊಂಡಿದ್ದಾರೆ. 
ಸಣ್ಣ-ಪುಟ್ಟ ಅಸಮಧಾನಗಳನ್ನು ಬಗೆಹರಿಸಿಕೊಂಡು ಕ್ಷೇತ್ರದ ಹಿತ ಕಾಪಾಡುವ ಶಕ್ತಿ ಶೋಭಾ ಕರಂದ್ಲಾಜೆಯವರಿಗಿದೆ. ಹೀಗಾಗಿ ಅವರಿಗೆ ಟಿಕೇಟ್ ತಪ್ಪುವ ಪ್ರಶ್ನೆಯೇ ಇರಲಿಲ್ಲ. ಇವೆಲ್ಲ ಕೇವಲ ಗಾಳಿಸುದ್ದಿ ಅಂತಾರೆ ಅವರ ಆಪ್ತರು. ಇನ್ನು ಬಿಜೆಪಿಯಿಂದ ಕಣಕ್ಕಿಳಿದಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಎದುರಾಳಿಯಾಗಿ ಕಾಂಗ್ರೆಸ್‍ನ ಪ್ರಮೋದ್ ಮಧ್ವರಾಜ್ ನಿಲ್ಲಲಿದ್ದಾರೆ. 
ಆದರೆ ಮೈತ್ರಿ ಮಾತುಕತೆ ಸೀಟು ಹಂಚಿಕೆಯಲ್ಲಿ  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್‍ಗೆಬಿಟ್ಟುಕೊಟ್ಟಿದೆ. ಆದರೆ ಪ್ರಮೋದ್ ಮಧ್ವರಾಜ್ ಲೋಕಸಭಾ ಟಿಕೇಟ್‍ಗಾಗಿ ಪಟ್ಟು ಹಿಡಿದಿದ್ದರಿಂದ ಈಗ ಜೆಡಿಎಸ್ ಚಿಹ್ನೆಯಡಿ ಪ್ರಮೋದ್ ಮಧ್ವರಾಜ್‍ಗೆ ಸ್ಪರ್ಧಿಸಲು ಕಾಂಗ್ರೆಸ್ ಸೂಚಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಪ್ರಮೋದ್ ಮಧ್ವರಾಜ್ ಈಗಾಗಲೇ ಬಿಫಾರ್‍ಂ ಪಡೆದುಕೊಂಡಿದ್ದು, ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಉಡುಪಿ ಕ್ಷೇತ್ರವೂ ಕೂಡ ಹೈವೋಲ್ಟೆಜ್ ಕ್ಷೇತ್ರವಾಗುವ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#Udupi Chikkamangaloor #Pramod madhwaraj #Shobha Kardlaje #Jds


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ