ಅತ್ತ ಟಿಕೇಟ್, ಇತ್ತ ನೊಟೀಸ್, ಸಂಕಷ್ಟಕ್ಕೆ ಸಿಲುಕಿದ ಉಮೇಶ್ ಜಾಧವ್ 

 Umesh Jadhav got into trouble

22-03-2019

ಅತ್ತ ಬಿಜೆಪಿ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಇತ್ತೀಚಿಗೆ ಕೈ ಪಾಳಯದಿಂದ ಬಂದು ಕಮಲ ಹಿಡಿದ ಉಮೇಶ್ ಜಾಧವ್‍ಗೆ ಬಿಜೆಪಿ ಟಿಕೇಟ್ ಘೋಷಿಸಿದೆ. ಇತ್ತ ತಕ್ಷಣ ಎಚ್ಚೆತ್ತ ಕಾಂಗ್ರೆಸ್ ಮತ್ತೆ ಜಾಧವ್ ವಿರುದ್ಧ ತನ್ನ ಅಸಮಧಾನ ತೀರಿಸಿಕೊಳ್ಳಲು ಮುಂದಾಗಿದೆ. ಸ್ಪೀಕರ್ ಉಮೇಶ್ ಜಾಧವ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದು, 25 ರಂದು ವಿಚಾರಣೆ ನಿಗದಿಯಾಗಿದೆ. 


ಸಮ್ಮಿಶ್ರ ಸರ್ಕಾರದ ಎರಡನೇ ಸಂಪುಟ ವಿಸ್ತರಣೆ ವೇಳೆ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ಹೊರಗುಳಿದಿದ್ದ ಉಮೇಶ್ ಜಾಧವ್ ಹಲವು ಲೆಕ್ಕಾಚಾರಗಳ ಬಳಿಕ  ಇದೇ ತಿಂಗಳು ಮೋದಿ ಸಮ್ಮುಖದಲ್ಲಿ ಕಲ್ಬುರ್ಗಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 
ಉಮೇಶ್ ಜಾಧವ್ ವಿರುದ್ಧ ಕ್ರಮಕ್ಕೆ ಮುಂದಾದ ಕಾಂಗ್ರೆಸ್ ಅವರ ವಿರುದ್ಧ  ಪಕ್ಷಾಂತರ ಕಾಯಿದೆ ಅಡಿಯಲ್ಲಿ ಕ್ರಮಕೈಗೊಳ್ಳುವಂತೆ ಸ್ಪೀಕರ್‍ಗೆ ದೂರು ನೀಡಿತ್ತು. ದೂರು ದಾಖಲಿಸಿಕೊಂಡ ಸ್ಪೀಕರ್ ಇದುವರೆಗೂ ವಿಚಾರಣೆ ಮುಂದೂಡುತ್ತಲೇ, ಬಂದಿದ್ದರು. 


ಆದರೆ ಈಗ ಅತ್ತ ಬಿಜೆಪಿ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಇತ್ತ ವಿಚಾರಣೆ ನಿಗದಿ ಪಡಿಸಿದೆ. ಸೋಮವಾರ ಜಾಧವ್ ವಿಚಾರಣೆಗೆ ಹಾಜರಾಗಬೇಕಿದೆ. ಸಿದ್ಧರಾಮಯ್ಯ ದೂರು ನೀಡುವ ಮುನ್ನವೇ, ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಈ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರಲಿಲ್ಲ. 

ಒಂದೊಮ್ಮೆ ಉಮೇಶ್ ಜಾಧವ್ ವಿರುದ್ಧ ಪಕ್ಷಾಂತರ ಕಾಯಿದೆ ಅಡಿ ಕ್ರಮವಾದಲ್ಲಿ, ಉಮೇಶ್ ಜಾಧವ್ ಚುನಾವಣೆಯಲ್ಲಿ ವಿಜೇತರಾದರೂ ಕೂಡ  ಅನರ್ಹರಾಗಲಿದ್ದು, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಲಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Trouble #Umesh Jhadav #Notice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ