ಬಿಜೆಪಿ ಭೀಷ್ಮ ಸ್ಥಾನಕ್ಕೆ ರಾಜಕೀಯ ಚಾಣಾಕ್ಯ! ಅಡ್ವಾಣಿಗೆ ಅನಿವಾರ್ಯವಾಯ್ತಾ ಕಡ್ಡಾಯ ನಿವೃತ್ತಿ ?

Advani  compulsory retirement ?

22-03-2019

ನೀರಿಕ್ಷಿತ ರೂಪದಲ್ಲೆ ಬಿಜೆಪಿಯ 2019 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು,  ಮೊದಲ ಪಟ್ಟಿಯಲ್ಲಿ 182 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಆದರೆ ಈ ಪಟ್ಟಿಯಿಂದ ಬಿಜೆಪಿಯ ಭೀಷ್ಮ ಎಂದೇ ಕರೆಯಿಸಿಕೊಳ್ಳುವ ಲಾಲ್ ಕೃಷ್ಣ ಅಡ್ವಾಣಿಯನ್ನು ಹೊರಗಿಡಲಾಗಿದ್ದು, ಅವರ ಕ್ಷೇತ್ರದಿಂದ ಬಿಜೆಪಿ ಚಾಣಕ್ಯ ಅಮಿತ್ ಷಾ ಕಣಕ್ಕಿಳಿಯಲಿದ್ದಾರೆ. ಇದು ಬಿಜೆಪಿ ಪಟ್ಟಿಯ ಬಳಿಕ ಅತ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಅಡ್ವಾಣಿಗೆ ಕಡ್ಡಾಯ ನಿವೃತ್ತಿ ನೀಡಲಾಯ್ತಾ ಎಂಬ ಅನುಮಾನ ಮೂಡಿದೆ. 
ನಿನ್ನೆ ಸಂಜೆ ಬಿಜೆಪಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ ಸೇರಿದಂತೆ ಒಟ್ಟು 182ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಹೆಸರು ಇಲ್ಲದೇ ಇರೋದು ಚರ್ಚೆಗೆ ಗುರಿಯಾಗಿದೆ. ಅಡ್ವಾಣಿ ಸ್ವಕ್ಷೇತ್ರಕ್ಕೆ ಅಮಿತ್ ಶಾ ಹೆಸರನ್ನು ಪ್ರಕಟಿಸಲಾಗಿದೆ. 
ಗಾಂಧಿನಗರ ಕ್ಷೇತ್ರದಿಂದ ಸತತ ಆರು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿಸತತವಾಗಿ ಗೆಲ್ಲುತ್ತ ಬಂದಿದ್ದರು. ಕಳೆದ ಚುನಾವಣೆಯಲ್ಲೂ ಅವರು ಇದೇ ಕ್ಷೇತ್ರದಿಂದ ಸಂಸದರಾಗಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಆದರೆ ಈಗ ಈ ಕ್ಷೇತ್ರ ಅಮಿತ್ ಶಾ ಪಾಲಾಗಿದ್ದು,  ಇದೇ ಮೊದಲ ಬಾರಿಗೆ ಅಮಿತ್ ಶಾ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. 
ಇದುವರೆಗೂ ಐದು ಬಾರಿ ಶಾಸಕರಾಗಿರುವ ಅಮಿತ್ ಶಾ, ಈಗ ಪಾರ್ಲಿಮೆಂಟ್ ಪ್ರವೇಶಕ್ಕೆ ಮುಂದಾಗಿದ್ದಾರೆ. ಆದರೆ ಅಡ್ವಾಣಿಗೆ ಟಿಕೇಟ್ ನೀಡದಿರುವುದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಒಂದೆಡೆ ಮೋದಿ ಮತ್ತು ಷಾ ಜೋಡಿ ಅಡ್ವಾಣಿಯನ್ನು ಮೂಲೆಗುಂಪು ಮಾಡಿದೆ ಎಂಬ ಕೂಗು ಕೇಳಿಬಂದಿದ್ದರೇ, ಇನ್ನೊಂದೆಡೆ ಬಿಜೆಪಿ ಮೊದಲೆ ಘೋಷಿಸಿದಂತೆ ವಯಸ್ಸಿನ ಆಧಾರದ ಮೇಲೆ ಟಿಕೇಟ್ ನಿರಾಕರಿಸಿದೆ ಎಂಬ ಮಾತು ಕೇಳಿಬಂದಿದೆ. ಆದರೆ ಯಡಿಯೂರಪ್ಪನವರ ವಿಚಾರ ಬಂದಾಗ ನಿಯಮದಲ್ಲಿ ಸಡಿಲಿಕೆ ತಂದ ಹೈಕಮಾಂಡ್, ಅಡ್ವಾಣಿಯಂತಹ ಮುತ್ಸದ್ಧಿ ರಾಜಕಾರಣಿಯನ್ನು ಮೂಲೆಗುಂಪು ಮಾಡುವ ಮೊದಲು ಯೋಚಿಸಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈಗ ಅಡ್ವಾಣಿಯವರ ಪ್ರತಿಕ್ರಿಯೆ ಹಾಗೂ ನಡೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಪಕ್ಷದಲ್ಲಿ ಹಿರಿ ತಲೆಗಳ ಕಡೆಗಣನೆ ಒಳ್ಳೆಯದಲ್ಲಿ ಎಂಬ ಆತಂಕ ಬಿಜೆಪಿ ಕಾರ್ಯಕರ್ತರಿಂದಲೇ ವ್ಯಕ್ತವಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Retirement ? #Lal Krishna Adwani #Amith Sha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ