ದುಷ್ಟ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ !

Kannada News

07-06-2017

ಬೆಂಗಳೂರು:- ಮಗಳ ಮೇಲೆ ಅತ್ಯಾಚಾರ ನಡೆಸಿದ ತಂದೆಯನ್ನು ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ. ಮಾಗಡಿಯ ಅಜ್ಜನಹಳ್ಳಿಯ ರಮೇಶ್ ಬಂಧಿತ ಆರೋಪಿಯಾಗಿದ್ದಾನೆ. ಅತ್ಯಾಚಾರಕ್ಕೊಳಗಾದ ಯುವತಿಗೆ ಪೂಜೆ ಪುನಸ್ಕಾರದ ನೆಪದಲ್ಲಿ ಹಿಂಸೆ ನೀಡಿದ ಪೂಜಾರಿ ಮಲ್ಲೇಶ್ ಎಂಬಾತನನ್ನೂ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ರಮೇಶ್, ಪತ್ನಿ ಸಮೇತ ಕೆಲಸಕ್ಕೆಂದು ನಗರಕ್ಕೆ ಬರುತ್ತಿದ್ದು, ಒಂದೊಂದು ದಿನ ಮನೆಯಲ್ಲೇ ಉಳಿಯುತ್ತಿದ್ದ. ಆರೋಪಿ ಪತ್ನಿ ಕೆಲಸಕ್ಕೆ ಹೋದ ನಂತರ ಒಂಟಿಯಾಗಿದ್ದ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಈ ವಿಷಯ ತಾಯಿಗೆ ತಿಳಿಸಿದರೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ತಾಯಿ ಮೇಲಿನ ಪ್ರೀತಿಗೆ ಕಟ್ಟುಬಿದ್ದಿದ್ದ ಮಗಳು ತಂದೆಯ ಅನಾಚಾರವನ್ನು ಕೆಲ ದಿನಗಳು ಸಹಿಸಿಕೊಂಡಿದ್ದು, ತಂದೆಯ ವಿಕೃತಿ ಹೆಚ್ಚಾಗುತ್ತಿದ್ದಕ್ಕೆ ನೊಂದು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ಆದರೆ ತಾಯಿ ಪೊಲೀಸರಿಗೆ ದೂರು ನೀಡದೆ ಪೂಜೆ-ಪುನಸ್ಕಾರ ಅಂತ ಪೂಜಾರಿಯ ಮೊರೆ ಹೋಗಿದ್ದಾರೆ. ತನ್ನ ಮಗಳನ್ನು ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿರುವ ಸೋದರಿಯ ಮನೆಗೆ ಕರೆತಂದು ಸ್ಥಳೀಯ ಪೂಜಾರಿ ಮಲ್ಲೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಪೂಜಾರಿ ಮಲ್ಲೇಶ್ ಮತ್ತಾತನ ತಾಯಿ, ಮಗಳ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ನೊಂದ ಯುವತಿಯ ಕೈಯನ್ನು ಮುಳ್ಳಿನ ಪಾದುಕೆ ಮೇಲಿಟ್ಟು ತುಳಿದಿದ್ದಾರೆ. ತುಳಿದ ನಂತರ ಯುವತಿ ಕೈಯಲ್ಲಿ ರಕ್ತ ಬಂದರೆ ಅತ್ಯಾಚಾರವಾಗಿಲ್ಲ, ರಕ್ತ ಬರದೇ ಇದ್ದರೆ ಅತ್ಯಾಚಾರವಾಗಿದೆ ಎಂದು ನಂಬಿಸಿ ಪೊಷಕರ ಎದುರೇ ಚಿತ್ರಹಿಂಸೆ ನೀಡಿದ್ದಾರೆ. ನಂತರ ನೆರೆ-ಹೊರೆಯವರಿಂದ ವಿಷಯ ತಿಳಿದ ಸ್ಥಳೀಯರು ಕಾಮುಕ ತಂದೆ ರಮೇಶ್ ಮತ್ತು ಪೂಜಾರಿ ಮಲ್ಲೇಶ್ ಹಾಗೂ ತಾಯಿಯನ್ನು ಹಿಡಿದು ರಾಜಗೋಪಾಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ರಾಜಗೋಪಾಲ ನಗರ ಪೊಲೀಸರು ಮಲ್ಲೇಶ್ ಮತ್ತು ರಮೇಶ್ ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ