ಯಶ್ ಮತ್ತು ದರ್ಶನ ಚಿತ್ರ ಪ್ರದರ್ಶನಕ್ಕೆ ನೋ ಬ್ಯಾನ್ 

 No ban for Yash and Darshan movie show

21-03-2019

ರಾಜ್ಯದ ಗಮನ ಸೆಳೆದಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಇಬ್ಬರೂ ಘಟಾನುಘಟಿ ಸ್ಟಾರ್‍ಗಳು ನಿಂತಿರೋದು ಹಲವರ ಕಣ್ಣು ಉರಿಗೆ ಕಾರಣವಾಗಿದೆ.  ಇದೇ ಕಾರಣಕ್ಕೆ ದರ್ಶನ್ ಯಶ್ ಸೇರಿದಂತೆ ಸುಮಲತಾ ಪರ ನಿಂತ ಸ್ಟಾರ್‍ಗಳ ಚಿತ್ರ ನಿರ್ಮಾಣಕ್ಕೆ ತಡೆ ನೀಡುವಂತೆ ಒತ್ತಾಯಿಸಿ ಕೆಲವರು ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋ ಸ್ಪಷ್ಟನೆ ನೀಡಿದೆ.  ಖಾಸಗಿ ವಾಹಿನಿಗಳಲ್ಲಿ ಚಿತ್ರ ಪ್ರಸಾರಕ್ಕೆ ಯಾವುದೆ ತಡೆ ಇಲ್ಲ ಎಂದಿದೆ. 

ಏಪ್ರಿಲ್ 18 ಹಾಗೂ 23 ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23 ರಂದು ಮತ ಏಣಿಕೆ ನಡೆಯಲಿದೆ. ಹೀಗಾಗಿ ಈಗಾಗಲೆ ನೀತಿಸಂಹಿತೆ ಜಾರಿಯಾಗಿದೆ. ಹೀಗಾಗಿ ಪ್ರಚಾರಕ್ಕೆ ಬರುತ್ತಿರುವ ಸಿನಿಮಾ ಸ್ಟಾರ್‍ಗಳು ಹಾಗೂ ಅಭ್ಯರ್ಥಿಗಳ ಜೊತೆ ಗುರುತಿಸಿಕೊಂಡ ಸ್ಟಾರ್‍ಗಳ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡುವಂತೆ ಕೆಲ ಸಂಘಟನೆಗಳು ಒತ್ತಾಯಿಸಿದ್ದವು. 
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗ ಸ್ಪಷ್ಟನೆ ನೀಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಜಾಹಿರಾತು ಹಾಗೂ ಚಲನಚಿತ್ರವನ್ನು ಖಾಸಗಿ ವಾಹಿನಿಗಳಲ್ಲಿ ಹಾಗೂ ಸಿನಿಮಾಮಂದಿರದಲ್ಲಿ  ಪ್ರದರ್ಶಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಅವರ ಜಾಹಿರಾತು ಹಾಗೂ ಸಿನಿಮಾಗಳನ್ನು ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಅಂದ್ರೆ ದೂರದರ್ಶನದಲ್ಲಿ ಪ್ರದರ್ಶಿಸುವಂತಿಲ್ಲ. 
ಇನ್ನು ದರ್ಶನ ಮತ್ತು ಯಶ್ ವಿಚಾರಕ್ಕೆ ರಾಜ್ಯದ ಮುಖ್ಯಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದು,  ಸುಮಲತಾ ಅವರೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಯಶ್ ಮತ್ತು ದರ್ಶನ ಚಿತ್ರಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಅಂತಹ ಯಾವುದೇ ನಿಯಮಗಳಿಲ್ಲ ಎಂದರು. ಒಟ್ಟಿನಲ್ಲಿ ಸುಮಲತಾಗೆ ಸ್ಯಾಂಡಲವುಡ್ ಸ್ಟಾರ್‍ಗಳ ಬೆಂಬಲ ಸಿಕ್ಕಿರೋದು ಚರ್ಚೆಗೆ ಕಾರಣವಾಗಿದ್ದು, ಅವರ ಬೆಂಬಲವನ್ನು ತಡೆಯುವ ಅಸ್ತ್ರದಲ್ಲಿ ಇತರರು ತೊಡಗಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Yesh #Darshan #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ