ಉತ್ತರ ಪ್ರದೇಶದಲ್ಲಿ  ಈ ಬಾರಿ ಬಾಡುತ್ತಾ ಕಮಲ?

 Lotus is dying this time in Uttar Pradesh?

21-03-2019

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಧಿಕಾರ ಸ್ಥಾಪಿಸಿದ ಖುಷಿಯಲ್ಲಿ ಲೋಕಸಭೆ ಚುನಾವಣೆಗೂ ಸಜ್ಜಾಗಿರುವ ಉತ್ತರ ಪ್ರದೇಶ ಬಿಜೆಪಿ ನಾಯಕರಿಗೆ 2019 ರ ಲೋಕ ಕದನ ಅಷ್ಟೊಂದು ಸಿಹಿಯಾಗುವ ಸಾಧ್ಯತೆಗಳಿಲ್ಲ ಎನ್ನುತ್ತಿದೆ ಸಮೀಕ್ಷೆಗಳು. ಹೌದು ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರೋದಿ ಅಲೆಯಿಂದಲೇ ಗೆದ್ದಿದ್ದ ಬಿಜೆಪಿ ಈ ಬಾರಿ ಮುಗ್ಗರಿಸುವ ಎಲ್ಲ ಸಾಧ್ಯತೆ ಇದೆ ಎನ್ನುತ್ತಿದೆ ಅಂಕಿ-ಅಂಶ. 
ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ನಾಯಕತ್ವದಲ್ಲಿ ಮಿಂಚುತ್ತಿದೆ. ಹೀಗಾಗಿ ಸುಲಭವಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಬಹುದೆಂಬ ಕನಸಿನಲ್ಲಿದ್ದ ಬಿಜೆಪಿ ಹೈಕಮಾಂಡ್‍ಗೆ ಶಾಕ್ ನೀಡುವಂತ ಸಂಗತಿಗಳು ಉತ್ತರ ಪ್ರದೇಶದ ರಣಕಣದಿಂದ ಲಭ್ಯವಾಗುತ್ತಿದೆ. ಈ ಬಾರಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಬಿಜೆಪಿ 20 ಸೀಟುಗಳನ್ನು ಗಳಿಸಿಕೊಳ್ಳುವುದು ಕಷ್ಟ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಬಿಜೆಪಿ ರಾಜಕೀಯ ಲೆಕ್ಕಾಚಾರಗಳು ಎಡವಟ್ಟಾಗಿರೋದು. 

ಹೌದು ಉತ್ತರ ಪ್ರದೇಶದಲ್ಲಿ  ರಾಜಕೀಯ ಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಹಾಗೂ ಎಸ್‍ಪಿ  ಆಂತರಿಕ ಒಪ್ಪಂದ ಮಾಡಿಕೊಂಡಂತಿದ್ದು, ಒಬ್ಬರನೊಬ್ಬರು ಬೆಂಬಲಿಸಲು ನಿರ್ಧಾರ ಮಾಡಿದ್ದಾರೆ.  ಇದರೊಂದಿಗೆ ಉತ್ತರ ಪ್ರದೇಶದ ರಾಜಕೀಯ ಚಿತ್ರಣವೇ ಬದಲಾಗುವಂತಿದೆ. 2014 ರಲ್ಲಿ ಒಟ್ಟು 80 ಲೋಕಸಭಾ ಸೀಟುಗಳ ಪೈಕಿ 71 ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೇ, ಆಯ್‍ಎನ್‍ಸಿ 2, ಸಮಾಜವಾದಿ ಪಾರ್ಟಿ 5 ಹಾಗೂ ಅಪ್ನಾ ದಾಲ್ 2 ಸೀಟುಗಳಲ್ಲಿ ಜಯಗಳಿಸಿತ್ತು. 

2007 ರ ಜಾತಿಗಣತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 10 ರಷ್ಟು ಬ್ರಾಹ್ಮಣರಿದ್ದಾರೆ. ಅಂದ್ರೆ 20 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿ ಬ್ರಾಹ್ಮಣರು. ರಾಜಕೀಯಕವಾಗಿ ಈ ಬ್ರಾಹ್ಮಣರ ಪ್ರಾಬಲ್ಯವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಬ್ರಾಹ್ಮಣರೂ ಪ್ರಬಲವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವುದು ಕಷ್ಟ ಎನ್ನಲಾಗುತ್ತಿದೆ. ಕಾರಣ  ಬ್ರಾಹ್ಮಣ ಸಮುದಾಯಗಳು ಕೂಡ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುತ್ತಿದೆ. ಹೀಗಾಗಿ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೆಜಾರಿಟಿ ಸೀಟುಗಳನ್ನು ಗೆಲ್ಲುವ ಮುನ್ಸೂಚನೆ ಲಭ್ಯವಾಗುತ್ತಿದೆ.
 
ಉತ್ತರ ಪ್ರದೇಶದಲ್ಲಿ  ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ಬಳಿಕ ಅಭಿವೃದ್ಧಿಯಾಗಿಲ್ಲ ಎನ್ನುವ ಹಾಗಿಲ್ಲ. ಅಭಿವೃದ್ಧಿಯಾಗಿದೆ. ಆದರೆ ಅಭಿವೃದ್ಧಿ ನೋಡಿ ಮತಹಾಕುವಂತ ರಾಜಕಾರಣ ಉತ್ತರ ಪ್ರದೇಶದಲ್ಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 
ಇನ್ನೊಂದೆಡೆ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೂ ರಾಮಮಂದಿರ ನಿರ್ಮಾಣ ಮಾಡುವಲ್ಲಿ ಎಡವಿದ್ದು ಹಾಗೂ ಯೋಗಿ ಆದಿತ್ಯನಾಥರ ಅತಿಯಾದ ಹಿಂದುತ್ವ ಕೂಡ ಬಿಜೆಪಿಯ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಗಂಗಾ ಶುದ್ಧಿಯನ್ನೇ ಬಿಜೆಪಿ ಮತವಾಗಿ ಪರಿವರ್ತಿಸುವಲ್ಲೂ ವಿಫಲವಾಗೋದರಿಂದ ಉತ್ತರ ಪ್ರದೇಶದ ರಾಜಕೀಯದಲ್ಲಿ  ಹೆಗ್ಗುರುತು ಮೂಡಿಸುವ ಬಿಜೆಪಿಯ  ಕನಸು ಕನಸಾಗಿಯೇ ಉಳಿಯಲಿದೆ ಎನ್ನಲಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#Uttar Pradesh #Bjp #Yogi Adityanath #20 Seat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ