ಮೋದಿ ಬೆಂಬಲಿಸಿದ್ರೆ ನಿಮ್ಮ ಮಕ್ಕಳು ಚೌಕಿದಾರರಾಗುತ್ತಾರೆ- ಕೇಜ್ರಿವಾಲ್ 

 If You Supports Modi, Your Children Become Chokidar - Kejriwal

20-03-2019

ದೇಶದಾದ್ಯಂತ ಮೋದಿ ಹವಾ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಮೋದಿ ಪರ ಮತ್ತು ವಿರುದ್ಧ ಚರ್ಚೆ ಜೋರಾಗಿದೆ.ಮೋದಿ ಅಭಿಮಾನಿಗಳು ಮೈ ಭೀ ಚೌಕಿದಾರ್ ಅಭಿಯಾನ ಆರಂಭಿಸಿದ್ದಾರೆ. ಎಲ್ಲೆಲ್ಲೂ ಮೈ ಭೀ ಚೌಕಿದಾರ್ ಅಭಿಯಾನದ ಹವಾ ಜೋರಾಗಿರುವಾಗಲೇ, ದೆಹಲಿ ಸಿಎಂ  ಅರವಿಂದ್ ಕೇಜ್ರಿವಾಲ್ ಮೋದಿ ವಿರುದ್ಧ ಕಿಡಿ ಕಾರಿದ್ದು,  ನಿಮ್ಮ ಮಕ್ಕಳು ಚೌಕಿದಾರ ಆಗಬೇಕಿದ್ದರೇ ಮೋದಿ ಮತ ಚಲಾಯಿಸಿ ಎಂದಿದ್ದಾರೆ. 

 ದೇಶವೆಲ್ಲ ಚೌಕಿದಾರ ಆಗಬೇಕೆಂದು ಮೋದಿ ಬಯಸಿದಂತಿದೆ. ನಿಮ್ಮ ಮಕ್ಕಳು ಚೌಕಿದಾರ ಆಗಬೇಕೆಂದು ನೀವು ಬಯಸುವುದಾದರೆ ಮೋದಿಜಿ ಅವರಿಗೆ ಮತ ಹಾಕಿ, ಆದರೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಗೌರವಾನ್ವಿತ ವ್ಯಕ್ತಿಯಾಗಿಸುವ ಕನಸಿದ್ದರೆ ಎಂಜಿನೀಯರ್, ವಕೀಲರು ಮಾಡಬೇಕೆಂದಿದ್ದರೇ ಸುಶಿಕ್ಷಿತ ಎಎಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಕೇಜ್ರಿವಾಲ್ ತಮ್ಮ ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ತಮ್ಮ ಭಾಷಣದಲ್ಲಿ ನಾನು ಈ ದೇಶದ ಚೌಕಿದಾರ ಎಂದಿದ್ದರು. ಮೋದಿ ಈ ಹೇಳಿಕೆ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿತ್ತಲ್ಲದೇ, ದೇಶದಾದ್ಯಂತ ಬಿಜೆಪಿ ನಾಯಕರು ತಮ್ಮ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂಬಟ್ಯಾಗ್‍ಲೈನ್ ಸೇರಿಸಿಕೊಂಡಿದ್ದರು. 
ಬಳಿಕ ಈ ಮಾತು ದೇಶದ ಎಲ್ಲೆಡೆ ವೈರಲ್ ಆಗಿದ್ದು, ಸಾಮಾನ್ಯ ಮೋದಿ ಅಭಿಮಾನಿಗಳು ಕೂಡ ತಮ್ಮ ಪೇಸ್‍ಬುಕ್, ಟ್ವಿಟ್ ಖಾತೆಗಳಲ್ಲೂ ಮೈ ಭೀ ಚೌಕಿದಾರ್ ಎಂಬುದನ್ನು ಬಳಸಲು ಆರಂಭಿಸಿದ್ದರು. ಇದಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಟೀಕಿಸಿದ್ದು, ಮೋದಿ ಬೆಂಬಲಿಸಿದ್ರೆ ನಿಮ್ಮ ಮಕ್ಕಳು ಕಾವಲುಗಾರರಾಗಿ ಉಳಿಯುತ್ತಾರೆ ಅಷ್ಟೇ ಎಂದು ಎಚ್ಚರಿಸಿದ್ದಾರೆ. 

 ಕಾಂಗ್ರೆಸ್ ಕೂಡ ಮೋದಿಯವರ ಮೈ ಭೀ ಚೌಕಿದಾರ್ ಅಭಿಯಾನವನ್ನು ಟೀಕಿಸಿದ್ದು, ಚೌಕಿದಾರ್ ಚೋರ್ ಹೈ ಎಂದು ಸಾಮಾಜಿಕ ಜಾಲತಾಣದಲ್ಲಿ ಮೋದಿ ಲೇವಡಿಯಲ್ಲಿ ತೊಡಗಿದೆ. ಒಟ್ಟಿನಲ್ಲಿ ದೇಶದಲ್ಲಿ ಚೌಕಿದಾರ್ ಹವಾ ಜೋರಾಗಿದ್ದು, ಲೋಕಸಭಾ ಚುನಾವಣೆಯ ಬಳಿಕ ಯಾರು ದೇಶದ ಚೌಕಿದಾರ ಆಗಿ ಉಳಿಯುತ್ತಾರೆ ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Chwokidar #Kejriwala #Narendra Modi #Twiet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ