ಮಂಡ್ಯ ರಣಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಸುಮಲತಾ 

 Sumalatha Filed Nomination for the Mandya Constituency

20-03-2019

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಚುನಾವಣಾ ಕಣ ರಂಗೇರಿದ್ದು, ಪ್ರೆಸ್ಮಿಟ್‍ನಲ್ಲಿ ಹೇಳಿದಂತೆ ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪುತ್ರ ಅಭಿಷೇಕ್ ಅಂಬರೀಶ್ ಜೊತೆ ಆಗಮಿಸಿದ ಸುಮಲತಾ ಅಪಾರ ಬೆಂಬಲಿಗರು ಹಾಗೂ ಸ್ಯಾಂಡಲವುಡ್ ಸ್ಟಾರ್‍ಗಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದರು. 

ಮಂಡ್ಯಕ್ಕೆ ತೆರಳುವ ಮುನ್ನ ಮೈಸೂರಿಗೆ ತೆರಳಿದ ಸುಮಲತಾ ತಾಯಿ ಚಾಮುಂಡೇಶ್ವರಿ ಮುಂದೆ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿ ಆಶಿರ್ವಾದ ಪಡೆದುಕೊಂಡರು. ಬಳಿಕ ಮಂಡ್ಯದ  ಇಂಡುವಾಳಿಗೆ ಆಗಮಿಸಿದ ಸುಮಲತಾ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರ ನಿವಾಸಕ್ಕೆ ತೆರಳಿದರು. 

ಬಳಿಕ ಸಚ್ಚಿದಾನಂದ ಅವರ ನಿವಾಸಕ್ಕೆ ಯಶ್ ಹಾಗೂ ದರ್ಶನ ಆಗಮಿಸಿದರು. ಬಳಿಕ ಎಲ್ಲರೊಂದಿಗೆ ಡಿಸಿ ಕಚೇರಿಗೆ ತೆರಳಿದ ಸುಮಲತಾಗೆ ಡಿಸಿ ಕಚೇರಿ ಬಳಿ, ಅಹಿಂದ್ ನಾಯಕರು ಸಾಥ್ ನೀಡಿದರು. ರಾಹು ಕಾಲ ಆರಂಭವಾಗುವುದಕ್ಕೆ ಮುನ್ನವೆ ನಾಮಪತ್ರ ಸಲ್ಲಿಸಿದ ಸುಮಲತಾ ನಗು-ನಗುತ್ತಲೆ ಎಲ್ಲರೊಂದಿಗೆ ಬೆರೆತರು. 

ಸುಮಲತಾ ಮೂರು ಸೆಟ್ ನಾಮಪತ್ರ ಸಲ್ಲಿಸಿದ್ದು, ಪ್ರತಿ ನಾಮಿನೇಷನ್‍ಗೂ 10 ಅಹಿಂದ ನಾಯಕರು ಸಹಿ ಹಾಕಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಆಯೋಜಿಸಲಾದ ಸಾರ್ವಜನಿಕ ಸಮಾವೇಶಕ್ಕೆ ಮೆರವಣಿಗೆ ತೆರಳಿ  ಮತದಾರರನ್ನು ಉದ್ದೇಶಿಸಿ ಮಾತನಾಡಿ, ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡರು.

 
ಸುಮಲತಾ ರಾಜಕೀಯ ಕಣಕ್ಕಿಳಿಯುವುದನ್ನು ಬೆಂಬಲಿಸಿದ ಸ್ಟಾರ್ ನಟರಾದ ಯಶ್, ದರ್ಶನ ಜೊತೆ, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್‍ನ ಸಹೋದರನ ಪುತ್ರ ಮಧುಸೂದನ್, ನಿರ್ದೇಶಕ ನಾಗಶೇಖರ್ ಕೂಡ ಹಾಜರಿದ್ದರು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Sumalatha #Mandya # Constituency


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ