1 ಕೋಟಿ ಗಿಫ್ಟ್ ಕೊಟ್ಟು ಹುಟ್ಟುಹಬ್ಬ ಆಚರಿಸಿಕೊಂಡ ಆಲಿಯಾ  

 Alia, who celebrated birthday with a 1 crore gift

20-03-2019

ಸಂಜಯ್ ಲೀಲಾ ಬನ್ಸಾಲಿ ಹೊಸ ಚಿತ್ರಕ್ಕೆ ಆಯ್ಕೆಯಾಗಿರುವ ಬಾಲಿವುಡ್ ಸುಂದರಿ ಆಲಿಯಾ ಭಟ್ ಒಂದೊಳ್ಳೆ ಕೆಲಸ ಮಾಡಿ ಸುದ್ದಿಯಾಗಿದ್ದಾರೆ. ಹೌದು ಆಲಿಯಾ ಭಟ್ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಗಿಫ್ಟ್ ಪಡೆಯುವ ಬದಲು ತಾವೆ ಗಿಫ್ಟ್ ನೀಡಿದ್ದಾರೆ. ಅದು  ಬರೋಬ್ಬರಿ 50 ಲಕ್ಷ ರೂಪಾಯಿ. 

ಹೌದು ಬಾಲಿವುಡ್ ನಟಿ ಆಲಿಯಾ ಭಟ್, ತಮ್ಮ 26 ನೇ ಹುಟ್ಟುಹಬ್ಬದಂದು ತಮ್ಮ ಡ್ರೈವರ್ ಮತ್ತು ಹೆಲ್ಪರ್‍ಗೆ ತಲಾ 50 ಲಕ್ಷ ರೂಪಾಯಿ ಸಹಾಯ ನೀಡಿದ್ದಾರೆ. ಆ ಮೂಲಕ ಇತರ ನಟ-ನಟಿಯರಿಗೂ ಮಾದರಿಯಾಗಿದ್ದಾರೆ. 

ಆಲಿಯಾ ಟ್ರೈವರ್ ಹಾಗೂ ಹೆಲ್ಪರ್ ಮಂಬೈನಲ್ಲಿ  ಒಂದು ಮನೆಗಳನ್ನು ಬುಕ್  ಮಾಡಿದ್ದರು.  ಆ ಮನೆಗಳನ್ನು ಖರೀದಿಸಲು ಅವರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಆಲಿಯಾ ಭಟ್ ಅವರಿಗೆ ತಲಾ 50 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ.  ಇದರಿಂದ ಟ್ರೈವರ್ ಮತ್ತು ಹೆಲ್ಪರ್ ಖುಷಿಯಾಗಿದ್ದು, ಆಲಿಯಾಗೆ ಧನ್ಯವಾದ ಹೇಳಿದ್ದಾರೆ. 
ಇನ್ನು ಈ ಸಹಾಯದ ಬಗ್ಗೆ ಪ್ರತಿಕ್ರಿಯಿಸಿರುವ ಆಲಿಯಾ ಭಟ್,  ನನ್ನ ವೃತ್ತಿ ಜೀವನದ ಆರಂಭದಿಂದಲೂ ಅವರಿಬ್ಬರು ನನ್ನೊಂದಿಗೆ ಇದ್ದರು. ಹೀಗಾಗಿ ಅವರು ಬಯಸಿದ ಮನೆ ಖರೀದಿಸಲು ನೆರವಾಗಲಿ ಎಂಬ ಕಾರಣಕ್ಕೆ ಸಹಾಯ ನೀಡಿದ್ದೇನೆ. ಇದು ನಾನು ಅವರಿಗೆ ಥ್ಯಾಂಕ್ಸ್ ಹೇಳುವ ರೀತಿ ಎಂದು ಪ್ರತಿಕ್ರಿಯಿಸಿದ್ದಾರೆ. 
ಸಧ್ಯ ಆಲಿಯಾ ಭಟ್, ಕಲಂಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಬಳಿಕ ಅರುಣಿಮಾ ಸಿನ್ಹಾ ಹಾಗೂ ಸಲ್ಮಾನ್ ಖಾನ್ ಜೊತೆಗೆ ಇನ್ಸಲ್ಲಾಹ್ ಸಿನಿಮಾನದಲ್ಲಿ ನಟಿಸಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Bollywood #Gift #Alia Bhat #Driver And Helper


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ