ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ಆಲಿಯಾ - ಸಲ್ಮಾನ್ ಜೋಡಿ 

 Alia - Salman is pairing in Sanjay Leela Bhansali New Movie

19-03-2019

ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ನ ಖ್ಯಾತ ನಿರ್ದೇಶಕ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರಗಳು ಹಿಟ್ ಆಗೋದರ ಜೊತೆಗೆ ನಟಿಸಿ ನಟ-ನಟಿಯರಿಗೂ ಖ್ಯಾತಿ ತಂದುಕೊಡೋದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಇತ್ತೀಚಿಗೆ ಬಂದ ಪದ್ಮಾವತ್ ಚಿತ್ರವೂ ಸಾಕ್ಷಿ. ಪದ್ಮಾವತ್ ಬಳಿಕ ಇದೀಗ ಸಂಜಯ್ ಲೀಲಾ ಬನ್ಸಾಲಿ,  ಇನ್ಸಲ್ಲಾಹ್ ಹೆಸರಿನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. 

ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ಬರೋಬ್ಬರಿ 20 ವರ್ಷಗಳ ನಂತರ  ಸಂಜಯ್ ಲೀಲಾ ಬನ್ಸಾಲಿ, ಅವರ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ.  ಹಮ್ ದಿಲ್ ದೇ ಚುಕೆ ಸನಂ ಚಿತ್ರದ ಬಳಿಕ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಇನ್ನು ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರ ನಾಯಕಿಯಾಗಲು ಬಾಲಿವುಡ್ ನಟಿಮಣಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ.  ಈ ಚಿತ್ರದಲ್ಲೂ ಅದೇ ಸ್ಥಿತಿ ಇತ್ತು. ಸಾಕಷ್ಟು ಚರ್ಚೆಗಳ ಬಳಿಕ ಇದೀಗ ಸಂಜಯ್ ಲೀಲಾ ಬನ್ಸಾಲಿ ತಮ್ಮ ಇನ್ಸಲ್ಲಾಹ್ ಚಿತ್ರದ ನಾಯಕಿಯಾಗಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಆಯ್ಕೆ ಮಾಡಿದ್ದಾರೆ. 
ಬಾಲಿವುಡ್ ಹಿರೋಯಿನ್‍ಗಳ ಪಾಲಿನ ಅದೃಷ್ಟದ ನಿರ್ದೇಶಕ ಎಂದು ಭಾವಿಸಲಾಗುವ ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಆಲಿಯಾ ಭಟ್ ಆಯ್ಕೆಯಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಲ್ಲದೆ ಈ ಚಿತ್ರದಲ್ಲಿ ಆಲಿಯಾ ಎಂತಹ ಮೋಡಿ ಮಾಡಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿದೆ. 

ಹಮ್ ದಿಲ್ ದೇ ಚುಕೆ ಸನ್‍ಂ, ದೇವದಾಸ್, ರಾಮ್‍ಲೀಲಾ,ಬಾಜಿರಾವ್ ಮಸ್ತಾನಿ,ಪದ್ಮಾವತ್ ನಂತರ ಸೂಪರ್ ಹಿಟ್ ಚಿತ್ರಗಳ ಮೂಲಕ ಬಾಲಿವುಡ್‍ನಲ್ಲಿ ಮನೆಮಾತಾದ ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದಲ್ಲಿ ಅದೆಂತಹ ಕತೆಯನ್ನು ಕಟ್ಟಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Bollywood #Salman Khan #Sanjaylila Bansali Alia Bhat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ