ಹೊಟೆಲ್ ಬಿಲ್ ಪಾವತಿ ಮಾಡದ ನಟಿ ಪೂಜಾಗಾಂಧಿ ವಿರುದ್ಧ ಕಂಪ್ಲೆಂಟ್  

Complaint against Pooja Gandhi  who did not pay a hotel bill

19-03-2019

ನಗರದ ಪ್ರತಿಷ್ಠಿತ ಅಶೋಕ ಹೋಟೆಲ್‍ನಲ್ಲಿ ರೂಮ್ ಬಾಡಿಗೆಗೆ ಪಡೆದು ಹಣ ಪಾವತಿಸದ ಸ್ಯಾಂಡಲ್‍ವುಡ್‍ನಟಿ ಪೂಜಾಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದರಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೆಸರು ತಳುಕು ಹಾಕಿಕೊಂಡಿದೆ

ಕಳೆದ ಮಾರ್ಚ್ 11ರಂದು ಅಶೋಕ ಹೋಟೆಲ್‍ನಲ್ಲಿ ಪೂಜಾ ರೂಮ್ ಬಾಡಿಗೆಗೆ ಪಡೆದು ಮೂರು ದಿನ ಅಲ್ಲೇ ಉಳಿದುಕೊಂಡಿದ್ದು ಬಿಲ್  ಪಾವತಿಸದೆ ತಪ್ಪಿಸಿಕೊಂಡಿದ್ದರು.ಹೋಟೆಲ್‍ನವರು ಪೂಜಾರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಯಾವುದೇ ಉತ್ತರ ನೀಡಿರಲಿಲ್ಲ ಈ ಹಿನ್ನೆಲೆಯಲ್ಲಿ ಪೂಜಾ ವಿರುದ್ಧ ಹೋಟೆಲ್‍ನವರು ಹೈಗ್ರೌಂಡ್ಸ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ ಪೂಜಾಗಾಂಧಿ ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದರು ಎನ್ನುವುದು ಬೆಳಕಿಗೆ ಬಂದಿದ್ದು ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅಶೋಕ ಹೋಟೆಲ್‍ನಲ್ಲಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು.

ಬಿಜೆಪಿ ಮುಖಂಡನ ಜೊತೆ ರೂಂ ಬುಕ್ ಮಾಡಿ ಆತಿಥ್ಯ ಸ್ವೀಕರಿಸಿದ್ದ ನಟಿ, 26 ಲಕ್ಷ ರೂಪಾಯಿ ಬಿಲ್ ಕಟ್ಟದೆ ಹೊಟೇಲಿಗೆ ಸತಾಯಿಸಿ ಕೊನೆಗೆ  ಅದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಹೈ ಗ್ರೌಂಡ್ ಪೆÇಲೀಸರಿಗೆ ದೂರು ನೀಡಿದ್ದರು

ದೂರು ಹಿನ್ನೆಲೆಯಲ್ಲಿ ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡ ಪೆÇಲೀಸರು ನಟಿಯನ್ನು ಠಾಣೆಗೆ ಕರೆಸಿದಾಗ ಪೆÇಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ.

ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. ಒಟ್ಟಿನಲ್ಲಿ ಓರ್ವ ಸ್ಟಾರ್ ನಟಿಯ ಬಳಿ ಬಿಲ್ ಕಟ್ಟಲೂ ಹಣ ಇರಲಿಲ್ಲವೇ? ನಾಲ್ಕೂವರೆ ಲಕ್ಷ ಹಣ ಕೊಡದೇ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.


ಸಂಬಂಧಿತ ಟ್ಯಾಗ್ಗಳು

#Bangalore #Complent #Pooja Gandhi #Hotel Bill


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ