ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಹಿಳಾ ಕುಲಸಚಿವರು !

Kannada News

07-06-2017

ಮೈಸೂರು:- ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ, ಪ್ರಪ್ರಥಮವಾಗಿ ಮಹಿಳಾ ಕುಲಸಚಿವರನ್ನು ನೇಮಿಸಿ ಆದೇಶ ಹೊರಡಿಸಿದೆ. ಹಿರಿಯ ಕೆಎಎಸ್ ಅಧಿಕಾರಿ ಡಿ. ಭಾರತಿಯವರನ್ನು ಕುಲಸಚಿವರನ್ನಾಗಿ  ನೇಮಕ ಮಾಡಲಾಗಿದೆ. ರಾಜ್ಯಪಾಲರ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಚಿವಾಲಯದಿಂದ ಅಧಿಸೂಚನೆ ಪ್ರಕಟವಾಗಿದೆ.ಹಾಲಿ ಕುಲಸಚಿವ ಪ್ರೊ.ರಾಜಣ್ಣ ಮಾತೃ ಇಲಾಖೆ ಕಾಲೇಜು ಶಿಕ್ಷಣಕ್ಕೆ ನಿಯೋಜನೆಯಾಗಿದ್ದು. ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿ ಮಹಿಳಾ ಅಧಿಕಾರಿಯನ್ನು ಕುಲಸಚಿವರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಮೈಸೂರು ವಿ.ವಿ ಯ ಮೊದಲ ಮಹಿಳಾ ಕುಲಸಚಿವರೆಂಬ ಹೆಗ್ಗಳಿಕೆಗೆ ಡಿ. ಭಾರತಿಯವರು ಪಾತ್ರರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ