ಮಹಾರಾಷ್ಟ್ರ ಕಾಂಗ್ರೆಸ್ ಗೆ ಬಿಗ್ ಶಾಕ್ 

 Big Shock to The Maharashtra Congress

19-03-2019

ಮೋದಿ ಓಟವನ್ನು ಕಟ್ಟಿಹಾಕಿ ಕೇಂದ್ರದಲ್ಲಿ ಅಧಿಕಾರ ಮರಳಿ ಸ್ಥಾಪಿಸುವ ಕನಸಿನಲ್ಲಿರುವ  ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.  ಹೌದು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಹಾಗೂ  ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಆಘಾತಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ತತ್ತರಿಸಿ ಹೋಗಿದೆ. 

ಕಳೆದ ವಾರ ರಾಧಾಕೃಷ್ಣ ವಿಖೆ ಪಾಟೀಲ್ ಪುತ್ರ  ಸುಜಯ್ ವಿಖೆ ಪಾಟೀಲ್ ಕಾಂಗ್ರೆಸ್ ತೊರೆದು  ಸಿಎಂ ಫಡ್ನಾವೀಸ್  ಸಮ್ಮುಖದಲ್ಲಿ  ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಘಟನೆ ಸ್ವತಃ ರಾಧಾಕೃಷ್ಣ ಅವರಿಗೂ ಭಾರಿ ಶಾಕ್ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ  ರಾಧಾಕೃಷ್ಣ ವಿಖೆ ಪಾಟೀಲ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಮ್ಮ  ರಾಜೀನಾಮೆ ಪತ್ರ ರವಾನಿಸಿದ್ದಾರೆ. 
ರಾಧಾಕೃಷ್ಣ ವಿಖೆ ಪಾಟೀಲ್ ಅಶೋಕ್ ಚವ್ಹಾಣ್ ಹಾಗೂ ಪ್ರಥ್ವಿರಾಜ್ ಚವ್ಹಾಣ ಮಂತ್ರಿಮಂಡಳದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನು 2009 ಹಾಗೂ 2014 ರಲ್ಲಿ ಶಿರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ರಾಧಾಕೃಷ್ಣ ಹಲವು ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಧಾಕೃಷ್ಣ ಅವರು, ಮಾಜಿ ಕೇಂದ್ರ ಸಚಿವ ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಪುತ್ರರು. 
ಒಟ್ಟಿನಲ್ಲಿ ಮಹಾಘಟಬಂಧನ ಮೂಲಕವಾದರೂ ಮೋದಿ ಓಟವನ್ನು ಕಟ್ಟಿಹಾಕುವ ಕನಸಿನಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷ ತೊರೆಯುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ, ಹಿರಿಯ ನಾಯಕರ ಸಹಾಯದಿಂದ ರಾಧಾಕೃಷ್ಣ ಅವರ ಮನವೊಲಿಸುವ ಪ್ರಯತ್ನ ಆರಂಭಿಸಿದೆ. 


ಸಂಬಂಧಿತ ಟ್ಯಾಗ್ಗಳು

#Maharastra #RadhaKrishna #Congress #Resgine


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ