ಕರಾವಳಿ ಜನರಿಗೆ ಬುದ್ಧಿ ಕಮ್ಮಿ ಎಂದ್ರಾ ಸಿಎಂ? 

 CM Kumarswamy Has Created Another Controversy

19-03-2019

ಅದ್ಯಾಕೋ ಗೊತ್ತಿಲ್ಲ ಲೋಕಸಭಾ ಚುನಾವಣೆ ಆರಂಭವಾದಾಗಿನಿಂದ ದೇವೆಗೌಡ್ರ ಕುಟುಂಬದ ಅದೃಷ್ಟವೇ ಕೆಟ್ಟಂಗಿದೆ. ಕೆಲದಿನದ ಹಿಂದೆಯಷ್ಟೇ ರೇವಣ್ಣ ಹೇಳಿಕೆ ವಿವಾದವಾಗಿದ್ದರೇ, ಇದೀಗ ಸಿಎಂಕುಮಾರಸ್ವಾಮಿ ಉಡುಪಿ ಜಿಲ್ಲೆಯ ಜನರ ಬಗ್ಗೆ ನೀಡಿರುವ ಹೇಳಿಕೆ ಹೊಸತೊಂದು ವಿವಾದ ಸೃಷ್ಟಿಸಿದ್ದು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ  ಸುದ್ದಿಯಾಗಿದೆ. 
ಜೆಪಿ ಭವನದಲ್ಲಿ ಉಡುಪಿ ಜಿಲ್ಲೆ ಟಿಕೇಟ್ ಹಂಚಿಕೆ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಎಂ ಕುಮಾರಸ್ವಾಮಿ, ಬುದ್ಧಿವಂತರ ಜಿಲ್ಲೆ ಎಂದೇ ಕರೆಯಿಸಿಕೊಳ್ಳುವ ಉಡುಪಿ ಜನರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. 

ಉಡುಪಿ, ಬ್ರಹ್ಮಾವರ ಭಾಗದ ಜನರಿಗೆ ತಿಳುವಳಿಕೆ ಕಮ್ಮಿ ಎಂದಿರುವ ಸಿಎಂ  ಕೆಲಸ ಮಾಡೋಕೆ ಮಾತ್ರ ನಾವು ಬೇಕು. ವೋಟು ಮಾತ್ರ ನರೇಂದ್ರ ಮೋದಿಗಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉಡುಪಿಗೆ ಸಾಕಷ್ಟು ಅನುದಾನ ನೀಡಿದ್ದೇವೆ . ಯಾವುದೇ ತಾರತಮ್ಯ ಮಾಡಿಲ್ಲ ಎಂದರು. 

ಜೆಡಿಎಸ್ ಪಕ್ಷಕ್ಕೆ ಕರಾವಳಿ ಭಾಗದಲ್ಲಿ ಮೊದಲಿನಿಂದಲೂ ಮಾನ್ಯತೆ ಇಲ್ಲ. ಅಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಫೈಟ್ ನಡೆದಿದೆ. ಆದರೆ ಈ ವಿಚಾರ ಈಗ ಕುಮಾರಸ್ವಾಮಿಯವರ ಸ್ವಾಭಿಮಾನಕ್ಕೆ ಧಕ್ಕೆ ತಂದಂತಿದ್ದು, ಈ ವಿಚಾರಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಉಡುಪಿ ಜಿಲ್ಲೆಯ ಜನರಿಗೆ ಅವಮಾನವಾಗುವ ರೀತಿಯಲ್ಲಿ ಸಿಎಂ ಮಾತಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಉಡುಪಿ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಣ್ಣ ಗಲಾಟೆಯೂ ಆಗಿಲ್ಲ ಎಂದಿರುವ ಸಿಎಂ ಜೆಡಿಎಸ್‍ಗೆ ಮಾನ್ಯತೆ ನೀಡದ ಜಿಲ್ಲೆಗೂ ನಾನೇನೋ ಸಹಾಯ ಮಾಡಿದೆ ಎಂಬ ರೀತಿಯಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಕುಮಾರಸ್ವಾಮಿ ಮಾತಿನ ದಾಟಿಯನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ, ನೀವೆನು ನಮಗೆ ಸಹಾಯ ಮಾಡಿಲ್ಲ. ಮುಖ್ಯಮಂತ್ರಿಯಾಗಿ ನಿಮ್ಮ ಕೆಲಸ ಮಾಡಿದ್ದೀರಿ ಅಷ್ಟೇ ಎಂದು ಕುಟುಕಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Costal #Udupi #Kumarswamy #Controversy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ