ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡಿದ್ರೆ ರೋಗ ಉಚಿತ

 Bacteria Detect at Indira Canteen Meal

19-03-2019

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ, ರಾಜ್ಯ ಕಾಂಗ್ರೆಸ್‍ನ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‍ನ ಊಟದಲ್ಲಿ ರೋಗಕಾರಕ ಅಂಶಗಳು ಪತ್ತೆಯಾಗಿದ್ದು, ರಾಜ್ಯವೇ ಬೆಚ್ಚಿಬಿದ್ದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಸ್ಥಳದಲ್ಲಿ ರಾಜ್ಯ ಸರ್ಕಾರ ಈ ಯೋಜನೆ ಆರಂಭಿಸಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಸಾವಿರಾರು ಜನರು ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡುತ್ತಿದ್ದಾರೆ. ಇದೀಗ ಇಂದಿರಾ ಕ್ಯಾಂಟೀನ್ ಊಟ ಆರೋಗ್ಯಕ್ಕೆ ಪೂರಕವಲ್ಲ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. 

ಇಂದಿರಾ ಕ್ಯಾಂಟೀನ್‍ನ ಆಹಾರದಲ್ಲಿ ಅಪಾಯಕಾರಿ ವೈರಸ್ ಹಾಗೂ ಫಂಗಸ್ ಪತ್ತೆಯಾಗಿದ್ದು, ಇದರಿಂದ ವಾಂತಿ ಬೇಧಿ ಹಾಗೂ ಮೆದುಳಿಗೆ ಸಂಬಂಧಿಸಿದ  ಕಾಯಿಲೆ ಹಾಗೂ ಕಡಿಮೆ ರಕ್ತದೊತ್ತಡದಂತಹ ರೋಗಗಳು ಬಾಧಿಸಲಿವೆ ಎನ್ನಲಾಗಿದೆ.  ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆ ಪರಿಶೀಲನೆ ನಡೆಸಿ ವರದಿ ನೀಡಿದೆ. 

ಆಹಾರ ಪರೀಕ್ಷೆಗಾಗಿ  ಮೇಯರ್ ಗಂಗಾಂಬಿಕಾ ವಾಸವಿರುವ ಜಯನಗರ ವಾರ್ಡ್‍ನ ಇಂದಿರಾ ಕ್ಯಾಂಟಿನ್‍ನಲ್ಲಿ 150 ಎಮ್‍ಎಲ್ ಸಾಂಬಾರು, ಮುಖ್ಯಮಂತ್ರಿ ಕುಮಾರಸ್ವಾಮಿ ವಾಸವಿರುವ ಜೆಪಿನಗರ ಏರಿಯಾದಿಂದ 100 ಎಮ್‍ಎಲ್ ಸಾಂಬಾರು ಹಾಗೂ ಉಪಮೇಯರ್ ಭದ್ರೆಗೌಡ ವಾಸವಿರುವ ನಾಗಪುರ ವಾರ್ಡ್‍ನ ಕ್ಯಾಂಟೀನ್‍ನಿಂದ 460 ಗ್ರಾಂ ಅನ್ನವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 
ಹೀಗೆ ಪರೀಕ್ಷೆಗೊಳಪಡಿಸಲಾದ ಆಹಾರದಲ್ಲಿ ಅನಾರೋಗ್ಯಕರ ಫಂಗಸ್ ಹಾಗೂ ಬ್ಯಾಕ್ಟಿರಿಯಾ ಪತ್ತೆಯಾಗಿರುವ ಅಂಶವನ್ನು ಗೋವಿಂದರಾಜ್‍ನಗರ ಕಾರ್ಪೋರೇಟರ್ ಬಹಿರಂಗ ಪಡಿಸಿದ್ದಾರೆ. ಇದು ಜನರಲ್ಲಿ ಆತಂಕ ತಂದಿದೆ. ಇಂದಿರಾ ಕ್ಯಾಂಟೀನ್ ಸಾರ್ವಜನಿಕ ಸೇವೆ ತೆರೆದುಕೊಂಡಾಗಿನಿಂದ ಒಂದಿಲ್ಲೊಂದು ಗುಣಮಟ್ಟದ ಸಮಸ್ಯೆ ಹಾಗೂ ಸ್ವಚ್ಛತೆ ಸಮಸ್ಯೆ ಎದುರಿಸುತ್ತಲೆ ಇದೆ. 
ಇದೀಗ ಫಂಗಸ್, ಬ್ಯಾಕ್ಟಿರಿಯಾಗಳು ಪತ್ತೆಯಾಗಿದ್ದು, ಸರ್ಕಾರದ ಬೇಜವಬ್ದಾರಿ ವರ್ತನೆಗೆ ಹಿಡಿದ ಕೈಗನ್ನಡಿಯಾಗಿದೆ.  ಈಗಾಗಲೆ ರಾಜ್ಯದಲ್ಲಿ ನೂರಾರು ವಿಷಪ್ರಾಸನ  ಪ್ರಕರಣಗಳು ನಡೆದಿರುವಾಗಲೇ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಇಂದಿರಾ ಕ್ಯಾಂಟೀನ್ ಊಟದಲ್ಲಿ ಇಂತಹ ವಿಷಕಾರಿ ವಸ್ತುಗಳು ಪತ್ತೆಯಾಗಿರೋದರು ನಿಜಕ್ಕೂ ಆತಂಕ ತಂದಿದ್ದು, ಅದಾಗಲೇ ಲೋಕಸಭೆ ಚುನಾವಣೆಯ ಲೆಕ್ಕಾಚಾರದಲ್ಲಿ ಮುಳುಗಿ ಹೋಗಿರುವ ರಾಜ್ಯ ಸರ್ಕಾರ ಈ ಸಮಸ್ಯೆಗೆ ಹೇಗೆ ಸ್ಪಂದಿಸಲಿದೆ ಕಾದುನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Bangalore #Bacteria #Indira Canteen #Fungus


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ