ಚುನಾವಣೆ ಗೆಲುವಿಗಾಗಿ ಪುತ್ರನ ಜೊತೆ ಸಿಎಂ ಟೆಂಪಲ್ ರನ್

CM Temple run with son for election win

18-03-2019

ಶತಾಯ ಗತಾಯ ತಮ್ಮ ಪುತ್ರನನ್ನು ರಾಜಕೀಯಕ್ಕೆ ತರಲೇ ಬೇಕೆಂದು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿ  ಇಂದು ಪುತ್ರನ ಜೊತೆ ಮತ್ತೊಂದು ಸುತ್ತಿನ ಟೆಂಪಲ್ ರನ್ ಆರಂಭಿಸಿದ್ದಾರೆ. ಮಂಡ್ಯದ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಪೂಜೆಗಾಗಿ ಸಿಎಂ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಜೊತೆ ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ತೆರಳಿದ್ರು. ಶಾರಂದಾಬೆಗೆ ವಿಶೇಷ ಪೂಜೆ ಸಲ್ಲಿಸಿ ಮಗನ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.  

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಚುನಾವಣೆ ಅನ್ನೋದು ಯುದ್ಧವಿದ್ದಂತೆ. ಆ ಯುದ್ಧ ಗೆಲ್ಲೋದಿಕ್ಕೆ ತಾಯಿ ಶಾರದಾಂಬೆಯ ಆಶೀರ್ವಾದ ಬೇಕು. ಹೀಗಾಗಿ ಶಾರದಾಂಬೆಗೆ ಪೂಜೆ ಸಲ್ಲಿಸಲು ಸನ್ನಿಧಿಗೆ ಬಂದಿದ್ದೇನೆ. ಕೇವಲ ನಿಖಿಲ್ ಕುಮಾರಸ್ವಾಮಿಗಾಗಿ ಮಾತ್ರವಲ್ಲ  ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ 28 ಅಭ್ಯರ್ಥಿಗಳ ಗೆಲುವಿಗಾಗಿ  ಪ್ರಾರ್ಥಿಸಲು ಬಂದಿದ್ದೇನೆ ಎಂದರು.  

ಸುಮಲತಾರಿಗೆ ಯಶ್ ಮತ್ತು ದರ್ಶನ ಬೆಂಬಲ ಸೂಚಿಸಿರುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿಎಂ ಬನ್ನಿಯಾಕೆ ಅಷ್ಟೊಂದು ಟೆನ್ಸನ್ ಮಾಡ್ಕೋತಿರಾ. ಯಾರೆ ಬಂದ್ರೂ ನಮ್ಮ ಚಿತ್ರರಂಗದವರೇ ಅಲ್ಲವೇ? ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ಬನ್ನಿ ಮಂಡ್ಯದ ಜನರ ಪರ ಏನೆಲ್ಲ ತೀರ್ಮಾನ ತಗೋತಾರೆ ಹಾಗೂ ಮಂಡ್ಯ ಜನ ಯಾರ ಪರ ನಿಲ್ತಾರೆ ನೋಡೋಣ ಎಂದರು. 
ಇನ್ನು ಪ್ರಮೋದ್ ಮಧ್ವರಾಜ್ ಕುರಿತು ಕೇಳಲಾದ ಪ್ರಶ್ನೆಗೂ ಉತ್ತರಿಸಲು ನಿರಾಕರಿಸಿದ ಸಿಎಂ ಪ್ರಮೋದ್ ಮಧ್ವರಾಜ್ ಬೇರೆಯವರಲ್ಲ. ನಮ್ಮವರೇ, ಕೂತು ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು. ಇನ್ನು ತಂದೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕೂಡ ಬಿಫಾರ್‍ಂ ಹಾಗೂ ನಾಮಪತ್ರ ಪೂಜೆಗೆ ಬಂದಿದ್ದೇವೆ. ಮಂಡ್ಯದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಮಂಡ್ಯದ ಜನರು ಕುಮಾರಣ್ಣನ ಜೊತೆಗಿನ ತಮ್ಮ ಬಾಂಧವ್ಯ ಏನೆಂಬುದನ್ನು ಚುನಾವಣೆಯಲ್ಲಿ ತೋರಿಸಿಕೊಡಲಿದ್ದಾರೆ ಎಂದರು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Kumarswamy #Nikhil Kumarswamy #Temple


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ