ಶೀಘ್ರದಲ್ಲಿಯೇ ನಮ್ಮ ಮೆಟ್ರೋ ನಾಗವಾರ ಗೊಟ್ಟಿಗೆರೆ ಕಾಮಗಾರಿ ಆರಂಭ

 Soon Our Metro Nagavar Gottigere  works Starts

18-03-2019

ನಗರದ ನಾಗವಾರ ಗೊಟ್ಟಿಗೆರೆ ಮಾರ್ಗದ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಎದುರಾಗಿದ್ದ ತೊಡಕುಗಳು ನಿವಾರಣೆಯಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

ನಾಗವಾರ ಗೊಟ್ಟಿಗೆರೆ ಮಾರ್ಗದ ಕೊತ್ತನೂರಿನಲ್ಲಿ 31.5 ಎಕರೆ ಹಾಗೂ ಆರ್‍ವಿ ರಸ್ತೆ ಬೊಮ್ಮಸಂದ್ರ ಮಾರ್ಗದ ಹೆಬ್ಬಗೋಡಿ ( 39.3) ಎಕರೆ ಪ್ರದೇಶದಲ್ಲಿ ಡಿಪೆÇೀ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಬೈಯಪ್ಪನ ಹಳ್ಳಿ, ವೈಟ್‍ಫೀಲ್ಡ್ ಮಾರ್ಗದಲ್ಲಿ ಡಿಪೆÇೀ ನಿರ್ಮಾಣಕ್ಕೆ ಇನ್ನು ಎರಡು ತಿಂಗಳು ಕಾಲಾವಕಾಶ ಅಗತ್ಯವಿದ್ದು, ಕೊತ್ತನೂರು ಹಾಗೂ ಹೆಬ್ಬಗೋಡಿ ಡಿಪೆÇೀ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು  ಬಿಎಂಆರ್‍ಸಿಎಲ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಲಚೇನಹಳ್ಳಿ, ಅಂಜನಪುರ ಮಾರ್ಗದಲ್ಲಿ ಡಿಪೆÇೀ ನಿರ್ಮಾಣ(ಅಂಜನಪುರ) ಮೈಸೂರು ರಸ್ತೆ, ಕೆಂಗೇರಿ ಮಾರ್ಗ ಚಲ್ಲಘಟ್ಟ ಡಿಪೆÇೀ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.ಚಲ್ಲಘಟ್ಟದಲ್ಲಿ 25 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು ಅರಣ್ಯ ಇಲಾಖೆ ಜಮೀನುನನ್ನು ಸ್ವಾಧೀನಪಡಿಸಿಕೊಂಡರೆ ಅದಕ್ಕೆ ಪರ್ಯಾಯವಾಗಿ ಬೇರೆ ಪ್ರದೇಶದಲ್ಲಿ ನೀಡಲಾಗುತ್ತದೆ.

ದಾಂಡೇಲಿ, ಕಾಳಿ ಅರಣ್ಯದಲ್ಲಿ 29 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ನೀಡಲಾಗಿದ್ದು, ಎರಡನೇ ಹಂತದ ಮೆಟ್ರೋ ಭೂ ಸ್ವಾಧೀನಕ್ಕೆ 6300 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಹಾಗೂ ಮೆಟ್ರೋ ಡಿಪೆÇೀ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Bangalore #Nagavara #Namma Metro #Gottigere


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ