ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ಗಳು

 Stars Standing for Sumalatha Support

18-03-2019

ಅಂಬರೀಶ್ ನಿಧನದ ಬಳಿಕ ಅಂಬಿ ಅಭಿಮಾನಿಗಳ ಆಶಯದಂತೆ ರಾಜಕೀಯಕ್ಕೆ ಅಡಿ ಇಟ್ಟಿರುವ ಸುಮಲತಾ ಅಂಬರೀಶ್ ಬೆಂಬಲಕ್ಕೆ ಸ್ಯಾಂಡಲವುಡ್ ಸ್ಟಾರ್‍ಗಳು ಟೊಂಕಕಟ್ಟಿ ನಿಂತಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾಗೆ ಯಶ್ ಹಾಗೂ ದರ್ಶನ್ ಸಾಥ್ ನೀಡಿದ್ದು, ನಾವಿಲ್ಲಿ ಸಿನಿಮಾ ಸ್ಟಾರ್‍ಗಳಾಗಿ ಬಂದಿಲ್ಲ. ಅಂಬರೀಶ್ ಮನೆಮಕ್ಕಳಾಗಿ ಬಂದಿದ್ದೇವೆ ಎನ್ನುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್, ನಾವಿಲ್ಲಿ ಕಲಾವಿದರಾಗಿ ಬಂದಿಲ್ಲ. ಅಂಬರೀಶ್ ಅವರ ಮನೆಯ ಮಕ್ಕಳಾಗಿ ಬಂದಿದ್ದೇವೆ.  ಅಂಬರೀಶ್ ನೂರಾರು ಜನರಿಗೆ ಪ್ರೀತಿ ಹಂಚಿರುವ ಕಲಾವಿದ. ಅವರು ಇಲ್ಲ ಎಂಬ ನೋವಿದೆ. ಆದರೆ ಅವರೆಡೆಗಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಮಂಡ್ಯ ಜನರಿಗೆ ಅಂಬರೀಶ್ ಏನೆಂದು ಗೊತ್ತಿದೆ. ಅವರ ಪ್ರೀತಿ ಯಾವಾಗಲೂ ಅಂಬರೀಶ್ ಜೊತೆಗಿರುತ್ತದೆ ಎಂದರು. 


ಅಂಬರೀಶ್ ಕುಟುಂಬ ಎನ್ನುವ ಒಂದೇ ಕಾರಣಕ್ಕೆ ಸುಮಲತಾ ಅವರು ಈ ಕ್ಷೇತ್ರಕ್ಕೆ ಇಳಿಯುತ್ತಿಲ್ಲ. ಅವರಿಗೂ ಸಾಮಥ್ರ್ಯವಿದೆ. ಅಂಬರೀಶಣ್ಣ ಬಿಟ್ಟುಹೋದ ಮಂಡ್ಯದೊಂದಿಗೆ ನಂಟು ಕಡಿದುಕೊಳ್ಳಬಾರದೆಂದು ಸುಮಲತಾ ಅಂಬರೀಶ್ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಾವಂತೂ ಸದಾಕಾಲ ಅವರ ಜೊತೆಗಿರುತ್ತೇವೆ. ಸುಮಲತಾ ನಮಗೆಲ್ಲ ತಾಯಿ ಇದ್ದಂತೆ ಅವರ ಎಲ್ಲ ನಿರ್ಧಾರದ ಜೊತೆ ನಾವಿರುತ್ತೇವೆ ಎಂದರು. 


ದರ್ಶನ ಕೂಡ ಸುಮಲತಾ ಬೆಂಬಲಿಸಿದ್ದು, ನಾವು ಅಮ್ಮನ ಹಿಂದೆ ಅಪ್ಪಾಜಿಯನ್ನು ನೋಡುತ್ತಿದ್ದೇವೆ. ಈ ಚುನಾವಣೆಯಲ್ಲಿ ಸಿಂಪತಿ ಪ್ರಧಾನವಾಗಿಲ್ಲ. ಅಂಬರೀಶ್ ಮಾಡಿರುವ ಕೆಲಸಗಳನ್ನಿಟ್ಟುಕೊಂಡು ಜನತೆಯ ಮುಂದೆ ಹೋಗುತ್ತೇವೆ. ಇದು ನನ್ನ ನಾಲ್ಕನೇಯ ಚುನಾವಣೆ ಅಪ್ಪಾಜಿ ಇದ್ದಾಗಲೂ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವು. ಈಗಲೂ ಹೋಗುತ್ತೇನೆ. ಒಳ್ಲೆಯ ವ್ಯಕ್ತಿಯನ್ನು ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ. 


ಅಲ್ಲದೇ ಯಶ್ ಮತ್ತು ದರ್ಶನ ಜೋಡಿಯಾಗಿ ಗಾಡಿ ಹೊಡೆಯುತ್ತೇನೆ ಎಂದಿದ್ದು, ಮಂಡ್ಯಕ್ಕೆ ನಮ್ಮದು ಗೆಸ್ಟ್ ಅಫಿಯರೆನ್ಸ್ ಅಲ್ಲ, ಜಂಟಿಯಾಗಿ ಪೂರ್ತಿ ಸಿನಿಮಾ ಮಾಡುತ್ತೇವೆ ಎಂದರು ದರ್ಶನ ಅಬ್ಬರಿಸಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್‍ಲೈನ್ ವೆಂಕಟೇಶ್ ಸುಮಲತಾ ನಾಮಪತ್ರ ಸಲ್ಲಿಸುವ ವೇಳೆ ಚಿತ್ರರಂಗದವರೆಲ್ಲ ಪಾಲ್ಗೊಳ್ಳಲಿದ್ದೇವೆ. ಪುನೀತ್ ರಾಜಕುಮಾರ್ ಕೂಡ ಸುಮಲತಾ ಅವರ ಪರ ಪ್ರಚಾರಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದರು. ಅಲ್ಲದೆ ರಾಜಕೀಯಕ್ಕಾಗಿ ಟೀಕೆ ಮಾಡಿ ಆದರೆ ಟೀಕೆಗೆ ವೈಯಕ್ತಿಕ ವಿಚಾರಗಳನ್ನು ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದರು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Darshan #Yesh #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ