ಕೊನೆಗೂ ಲೋಕಪಾಲ ನೇಮಕಕ್ಕೆ ಕೂಡಿಬಂತು ಮುಹೂರ್ತ

 Finally the Lokpal Appointed

18-03-2019

ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಪ್ರಧಾನ ವಿಷಯವಾಗಿದ್ದ ಲೋಕಪಾಲ ನೇಮಕಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ಇಂದು ಸಂಜೆ ವೇಳೆಗೆ ಲೋಕಪಾಲ ನೇಮಕ ಘೋಷಣೆಯಾಗುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ  ಪಿನಾಕಿಚಂದ್ರ  ಘೋಷ್ ಭಾರತದ ಮೊದಲ ಲೋಕಪಾಲರಾಗಿ ನೇಮಕವಾಗುವ ಸಾಧ್ಯತೆ ಇದೆ. 

2011 ರಲ್ಲಿ ಅಣ್ಣ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ದೊಡ್ಡ ಜನಾಂದೋಲನವೇ ನಡೆದಿತ್ತು. ಈ ಒತ್ತಡದ ಫಲವಾಗಿ 2013 ರಲ್ಲಿ ಜನಲೋಕಪಾಲ ಕಾಯಿದೆ ರೂಪುಗೊಂಡಿತ್ತು.  ಆದರೆ 5 ವರ್ಷ ಕಳೆದರೂ ಲೋಕಪಾಲರ ನೇಮಕ ನಡೆದಿರಲಿಲ್ಲ.  
ಲೋಕಪಾಲ್ ನೇಮಕಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.  ಈ ನಡುವೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಆಯ್ಕೆ ಸಮಿತಿ  ಘೋಷ್ ಹೆಸರನ್ನು ಅಂತಿಮಗೊಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. 

ಇನ್ನು ಸರ್ಕಾರದ ಈ ನಿರ್ಧಾರವನ್ನು  ಅಣ್ಣಾ ಹಜಾರೆ ಸ್ವಾಗತಿಸಿದ್ದು, ದೇಶದ ಮೊದಲ ಲೋಕಪಾಲರ ನೇಮಕ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.  48 ವರ್ಷಗಳಿಂದ ನಡೆದ  ಜನಾಂದೋಲನಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದೆ ಎಂದಿದ್ದಾರೆ.
 
 ಲೋಕಪಾಲ ಮತ್ತು ಲೋಕಾಯುಕ್ತ  ಕಾಯಿದೆ ಪ್ರಕಾರ ಲೋಕಪಾಲರು, ಹಾಲಿ ಮತ್ತು ಮಾಜಿ ಪ್ರಧಾನಿಗಳು, ಕೇಂದ್ರ ಮಂತ್ರಿಗಳು,  ಸಂಸದರು, ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕವಲಯದ ಸಂಸ್ಥೆಗಳ ಸಿಬ್ಬಂದಿ,  10 ಲಕ್ಷ ರೂ ಹೆಚ್ಚಿನ ವಿದೇಶಿ  ದೇಣಿಗೆ ಸ್ವೀಕರಿಸುವ  ಎನ್‍ಜಿಓಗಳ ಮೇಲೆ ಕೇಳಿಬರುವ ದೂರುಗಳ ಮೇಲೆ ತನಿಖೆ ನಡೆಸುವ ಅಧಿಕಾರ ಹೊಂದಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Narendra Modi #Anna Hajare #Lokpal #Pinaki Chandra Ghosh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ