ಗೋವಾಕ್ಕೆ ಯಾರು ಉತ್ತಾಧಿಕಾರಿ, ಆರಂಭವಾಗಿದೆ ಲೆಕ್ಕಾಚಾರ 

 Who is New Cm To  Goa

18-03-2019

ಒಂದೆಡೆ ದೇಶ ಕಂಡ ಸರಳ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಹಲೋಕ ತ್ಯಜಿಸಿ ರಾಜ್ಯವನ್ನು ಶೋಕದ ಕಡಲಿನಲ್ಲಿ ಮುಳುಗಿಸಿದ್ದರೇ, ಗೋವಾ ಕಾಂಗ್ರೆಸ್ ಮಾತ್ರ ಅಧಿಕಾರ ಸ್ಥಾಪನೆಯ ಕನಸಿನಲ್ಲಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಇನ್ನೊಂದೆಡೆ ಬಿಜೆಪಿಯಲ್ಲಿ ಮನೋಹರ್ ಪರಿಕ್ಕರ್ ಉತ್ತರಾಧಿಕಾರಿಗಾಗಿ ಹುಡುಕಾಟ ಆರಂಭಗೊಂಡಿದೆ. 

 ಶನಿವಾರವೇ ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪನೆಗಾಗಿ ರಾಜ್ಯಪಾಲರ ಮೊರೆ ಹೋಗಿತ್ತು ಎನ್ನಲಾಗಿದ್ದು, ತೀವ್ರ ಟೀಕೆಗೆ ಗುರಿಯಾಯಿತು. ಆದರೆ ಇದೀಗ ಮನೋಹರ್ ಪರಿಕ್ಕರ್ ನಿಧನದಿಂದ ಸಿಎಂ ಯಾರಾಗಬಹುದು ಎಂಬ ಲೆಕ್ಕಾಚಾರ ತೀವ್ರಗೊಂಡಿದೆ. 

ಶನಿವಾರ ಬಿಜೆಪಿ ಶಾಸಕಾಂಗ ಸಭೆ ನಡೆಸಿದ್ದು, ಬಿಜೆಪಿ ಶಾಸಕರಲ್ಲೇ ಯಾರನ್ನಾದರೂ ಒಬ್ಬರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿ ಕೇಂದ್ರದ ನಾಯಕರ ಸಹಾಯ ಕೋರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ವೀಕ್ಷಕರನ್ನು ರಾಜ್ಯಕ್ಕೆ ಕಳಿಸಿದ್ದು, ವೀಕ್ಷಕರು ಬಿಜೆಪಿ ನಾಯಕರ ಜೊತೆ ಇತರ ಪಕ್ಷಗಳಾದ  ಗೋವಾ ಫಾರ್ವರ್ಡ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಹಾಗೂ ಮೂವರು ಪಕ್ಷೇತರ ಶಾಸಕರ ಜೊತೆ ಚರ್ಚಿಸಲಿದ್ದು, ಬಳಿಕ ಸಿಎಂ ಆಯ್ಕೆ ಮಾಡುವ ಸಾಧ್ಯತೆ ಇದೆ. 
ಈ ಮಧ್ಯೆ ಕಾಂಗ್ರೆಸ್ ಮುಖಂಡ ಹಾಗೂ  ಮಾಜಿ ಸಿಎಂ ದಿಗಂಬರ್ ಕಾಮತ್  ಭಾನುವಾರ ದೆಹಲಿಗೆ ದೌಡಾಯಿಸಿದ್ದು, ಕುತೂಹಲ ಮೂಡಿಸಿದೆ. ದಿಗಂಬರ್ ಕಾಮತ್ ಕಾಂಗ್ರೆಸ್ ತೊರೆದು  ಬಿಜೆಪಿ ಸೇರಿ ಸಿಎಂಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಮನೋಹರ್ ಪರಿಕ್ಕರ್ ನಿಧನ ಗೋವಾದಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟುಹಾಕಿದ್ದು, ಗೋವಾದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. 
 


ಸಂಬಂಧಿತ ಟ್ಯಾಗ್ಗಳು

#Goa #Bjp #New Cm #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ