ಭಾರತ ಪ್ರಧಾನಿ ಮೋದಿಗೆ ಸವಾಲೆಸೆದ ಉಗ್ರ ಅಜರ್

 Azhar is a terrorist who has challenged India

16-03-2019

ಭಾರತ ಭಯೋತ್ಪಾದನೆ ನಿರ್ಮೂಲನೆಯ ಪ್ರಯತ್ನಗಳನ್ನು ಆರಂಭಿಸಿರುವ ಬೆನ್ನಲ್ಲೇ, ಉಗ್ರನೊರ್ವ ಪ್ರಧಾನಿ ನರೇಂದ್ರ ಮೋದಿ ನನ್ನೊಂದಿಗೆ ಬಿಲ್ಲು(ಅರ್ಚರಿ) ಸ್ಪರ್ಧೆಗೆ ಬರಲಿ ಎನ್ನುವ ಸವಾಲು ಒಡ್ಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. 

ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ತನ್ನ ಅಂಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನನ್ನ ಆರೋಗ್ಯ ಉತ್ತಮವಾಗಿದೆ. ನಾನೆಷ್ಟು ಸದೃಡವಾಗಿದ್ದೇನೆ ಎಂದು ತಿಳಿಯಲು ಮೋದಿ ನನ್ನೊಂದಿಗೆ ಬಿಲ್ಲು(ಆರ್ಚರಿ)ಶೂಟಿಂಗ್ ಸ್ಪರ್ಧೆಗೆ ಬರಲಿ ಎಂದು ಸವಾಲು ಒಡ್ಡಿದ್ದಾನೆ. 

ಜೆಇಎಂ ಸಂಘಟನೆಯ ಮುಖವಾಣಿಯಾಗಿರುವ ಅಲ್-ಕಲಮ್‍ನಲ್ಲಿ ಸಾದಿ ಹೆಸರಿನಲ್ಲಿ ಅಂಕಣ ಬರೆದಿರುವ ಮಸೂದ್, ಉಗ್ರ ಮಸೂದ್ ಅಜರ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಪಾಕಿಸ್ತಾನ ಸೇನೆ ಹಾಗೂ ಭಾರತ ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾನೆ. 

ತನ್ನ ಬರಹದಲ್ಲಿ ಪುಲ್ವಾಮಾ ದಾಳಿ ಬಗ್ಗೆ ಉಲ್ಲೇಖಿಸಿರುವ ಉಗ್ರ, ಕಾಶ್ಮೀರದ ಆದಿಲ್ ಅಹಮದ್ ದರ್ ನಂತಹವರು ಇನ್ನೂ ಇದ್ದಾರೆ.  ಶೀಘ್ರದಲ್ಲಿಯೇ, ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳು  ಸಮಯ ಕಳೆದಂತೆ ಆ ಭಾಗದ ಇತರ ಕಣಿವೆಗೂ ಹಬ್ಬಬಹುದು ಎಂದಿದ್ದಾನೆ. 

ತನ್ನ ಆರೋಗ್ಯದ ಬಗ್ಗೆ ಭಾರತೀಯ ಸೇನೆ ಹಾಗೂ ಭಾರತ ಅಪಪ್ರಚಾರ ಮಾಡುತ್ತಿರುವುದರಿಂದ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿದ್ದೇನೆ ಎಂದಿರುವ ಮಸೂದ್ ಅಜರ್, ನಾನು ತುಂಬ ಚೆನ್ನಾಗಿದ್ದೇನೆ. ನನ್ನ ಮೂತ್ರಪಿಂಡ್ ಹಾಗೂ ಯಕೃತ್ ತುಂಬ ಆರೋಗ್ಯವಾಗಿದೆ. ನಾನು 17 ವರ್ಷಗಳಿಂದ ಯಾವುದೇ ಆಸ್ಪತ್ರೆಗೂ ಹೋಗಿಲ್ಲ. ವೈದ್ಯರನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ. 
ತನ್ನ ಆರೋಗ್ಯದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಉಗ್ರ, ನಾನು ಕುರಾನ್‍ನಲ್ಲಿ ಹೇಳಿರುವ ಆರೋಗ್ಯ ಪದ್ಧತಿ ಪಾಲಿಸಿರುವುದರಿಂದ ನನಗೆ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಕೂಡ ಇಲ್ಲ. ನಾನು ನನ್ನ ಬಿಡುವಿನವೇಳೆಯಲ್ಲಿ ಆರ್ಚರಿ ಅಭ್ಯಾಸ ಮಾಡುತ್ತಿದ್ದೇನೆ ಎಂದಿದ್ದಾನೆ.
ಈತ ಮೂತ್ರಪಿಂಡ್ ವೈಫಲ್ಯದಿಂದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು  ಭಾರತದ ಸೇನಾಧಿಕಾರಿಗಳು ಹೇಳಿದ್ದರು. ಉಗ್ರ ಸಂಘಟನೆ, ಅಲ್‍ಖೈದಾ ಸಂಸ್ಥಾಪಕ ಒಸಾಮ್ ಬಿನ್ ಲಾಡೆನ್ ಆಪ್ತನಾಗಿದ್ದ ಮಸೂದ್ ಅಜರ್‍ರನ್ನು  ಭಾರತ ಸೇನೆ 1994 ರಲ್ಲಿ ಬಂಧಿಸಿತ್ತು. ಬಳಿಕ ಕಂದಹಾರ್ ವಿಮಾನ ಅಪಹರಿಸಿದ್ದ ಉಗ್ರರು ಈತನನ್ನು ಬಿಡುಗಡೆ ಮಾಡಿಸಿಕೊಂಡಿದ್ದರು. 
ಅದರ ಬಳಿಕ ಭಾರತದ ಸಂಸತ್ ಮೇಲಿನ ದಾಳಿ ಹಾಗೂ 2001 ರ ಪುಲ್ವಾಮಾ ದಾಳಿಯಲ್ಲೂ ಈತನ ಕೈವಾಡವಿರುವುದು ಪತ್ತೆಯಾಗಿದ್ದರೂ ಈತ ಪಾಕಿಸ್ತಾನವನ್ನು ತನ್ನ ಅಡಗು ತಾಣವಾಗಿ ಬಳಸಿಕೊಂಡಿದ್ದು, ಅಲ್ಲಿಯೇ ಇದ್ದಾನೆ. ಈತನ ಹಸ್ತಾಂತರಕ್ಕೆ ಭಾರತ ಮನವಿ ಮಾಡಿದರೂ ಪಾಕ್ ಸಾಕ್ಷ್ಯ ಕೊರತೆಯ ಕಾರಣವೊಡ್ಡಿ ತಪ್ಪಿಸಿಕೊಳ್ಳುತ್ತಲೇ ಇದೆ. ಇದೀಗ ಆತ ಪಾಕಿಸ್ತಾನ್ ದಲ್ಲೇ ಕೂತು ಭಾರತದ ಪ್ರಧಾನಿಗೆ ಸವಾಲು ಒಡ್ಡುವ ಕೆಲಸದಲ್ಲಿ ನಿರತನಾಗಿದ್ದಾನೆ. 
 


ಸಂಬಂಧಿತ ಟ್ಯಾಗ್ಗಳು

#Narendra Modi # Azhar # Terrorist #Challenge


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ