ನನ್ನನ್ನು "ರಾಹುಲ್" ಎಂದು ಕರೆಯಿರಿ ಎಂದ ಎಐಸಿಸಿ ಅಧ್ಯಕ್ಷ

 AICC President Said He Called Me "Rahul"

16-03-2019

ಅದ್ಯಾಕೋ ಗೊತ್ತಿಲ್ಲ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಲಿಟ್ಟ ಕಡೆಯೆಲ್ಲ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅಥವಾ ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್‍ಗೆ ಒಳಗಾಗುತ್ತಿದ್ದಾರೆ. ಇದೀಗ ಇಂತಹುದೇ ಒಂದು ಕಾರಣಕ್ಕೆ ರಾಹುಲ್ ಟ್ರೋಲ್‍ಗೆ ಒಳಗಾಗಿದ್ದಾರೆ. 

ರಾಹುಲ್ ಗಾಂಧಿಯನ್ನು ಕಾಂಗ್ರೆಸ್‍ನ ಹಿರಿ-ಕಿರಿ ನಾಯಕರೆಲ್ಲರೂ ಸರ್ ಎಂದು ಸಂಬೋಧಿಸುವುದು ಹಾಗೂ ಸಭೆ-ಸಮಾರಂಭಗಳಲ್ಲಿ ತಮ್ಮ ವಯಸ್ಸು ಮರೆತು ರಾಹುಲ್ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಲು ಯತ್ನಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ಕಾಂಗ್ರೆಸ್‍ನಲ್ಲಿ ತಮಗಿಂತಲೂ ಅನುಭವ ಮತ್ತು ವಯಸ್ಸಿನಲ್ಲಿ ಹಿರಿಯರಾದವರಿಂದಲೂ ಸರ್ ಎಂದು ಕರೆಸಿಕೊಳ್ಳಲು ಮುಜುಗರಗೊಳ್ಳದ ರಾಹುಲ್ ಗಾಂಧಿ ಮೊನ್ನೆ ಹುಡುಗಿಯರಿಂದ ಸರ್ ಎಂದು ಕರೆಸಿಕೊಳ್ಳಲು ಮಜುಗರಗೊಂಡಿದ್ದಾರೆ. ಇದೇ ಕಾರಣಕ್ಕೆ ಇದೀಗ ರಾಹುಲ್ ಗಾಂಧಿ ಟ್ರೋಲ್‍ಗೆ ಒಳಗಾಗಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಚೈನೈನ ಸ್ಟೆಲ್ಲಾ ಮೇರಿ ಕಾಲೇಜ್‍ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿನ ಅಂದಾಜು 800 ವಿದ್ಯಾರ್ಥಿನಿಯರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಫೈನ್ ಆರ್ಟ್ ವಿಭಾಗದ ವಿದ್ಯಾರ್ಥಿನಿಯೊಬ್ಬಳು ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲು ಮುಂದಾಗಿದ್ದು, ಸರ್ ಎಂದು ಕರೆದಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, ನೀವು ನನಗೆ ಸರ್ ಎನ್ನುವ ಬದಲು ರಾಹುಲ್ ಎಂದು ಕರೆಯಬಹುದೇ? ರಾಹುಲ್ ಎಂದ್ರೆ ನನಗೆ ಹೆಚ್ಚು ಕಂಪರ್ಟೆಬಲ್ ಎಂದಿದ್ದಾರೆ. ರಾಹುಲ್ ಗಾಂಧಿ ಈ ಮಾತೀಗ ಸಖತ್ ವೈರಲ್ ಆಗಿದೆ. 
ರಾಹುಲ್ ಗಾಂಧಿಯವರಿಗೆ ಹುಡುಗಿಯರು ಸರ್ ಎಂದ್ರೆ ಮಾತ್ರ ಮುಜುಗರವಾಗುತ್ತದೆಯೇ ವಿನಃ ತಮಗಿಂತ ವಯಸ್ಸಿನಲ್ಲಿ ಹಿರಿಯವರಾದವರು ಕರೆದರೆ ಆಗೋದಿಲ್ಲ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ. ಕರ್ನಾಟಕದಲ್ಲೂ ಕೂಡ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಹಿರಿಯ ನಾಯಕರೂ ರಾಹುಲ್ ಗಾಂಧಿಯವರನ್ನು ಸರ್ ಎಂದೇ ಕರೆಯುತ್ತಾರೆ. ಆದರೆ ಅಲ್ಲೆಲ್ಲ ಏನು ಹೇಳದ ರಾಹುಲ್ ಗಾಂಧಿ ಹುಡುಗಿಯರಿಗೆ ಮಾತ್ರ ರಾಹುಲ್ ಎನ್ನಲು ಅನುಮತಿ ನೀಡಿದ್ದು, ಟೀಕೆಗೆ ಗುರಿಯಾಗಿದೆ. 
ಮಾತ್ರವಲ್ಲದೇ ಸಾಮಾನ್ಯವಾಗಿ ಬಿಳಿ ಪೈಜಾಮಾ, ಪ್ಯಾಂಟ್‍ನಲ್ಲಿ ಕಾಣಿಸಿಕೊಳ್ಳುವ ರಾಹುಲ್ ಗಾಂಧಿ, ಮಹಿಳಾ ಕಾಲೇಜಿನ ಸಂವಾದಕ್ಕೆ ಟೀ ಶರ್ಟ್ ಹಾಗೂ ಜೀನ್ಸ್ ಧರಿಸಿಹೋಗಿದ್ದು ಕೂಡ ಟೀಕೆಗೆ ಗುರಿಯಾಗಿದ್ದು, ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈರೈಟಿ-ವೈರೈಟಿ ಜೋಕ್‍ಗಳು ಹರಿದಾಡತೊಡಗಿದೆ. 


ಸಂಬಂಧಿತ ಟ್ಯಾಗ್ಗಳು

#Rahul Gandhi #AICC #Rahul #President


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ