ಸಚಿವ ಕೃಷ್ಣ ಭೈರೇಗೌಡ ರಾಜೀನಾಮೆ ಗೆ ಬಿಜೆಪಿ ಒತ್ತಾಯ

 BJP Insists on Resignation of Minister Krishna Bhairagowda

16-03-2019

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದದಾಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಬಳಿ ಪತ್ತೆಯಾದ ಹಣ ಚುನಾವಣೆ ಉದ್ದೇಶಕ್ಕಾಗಿಸಂಗ್ರಹಿಸಿರುವುದಾಗಿ ಆರೋಪಿಸಿರುವ ಬಿಜೆಪಿ ನಾಯಕರು, ಇದಕ್ಕೆ ಕಾರಣರಾದ ಸಚಿವ ಕೃಷ್ಣ ಭೈರೇಗೌಡ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮೇಲ್ಮನೆ ಸದಸ್ಯರಾದ ಎನ್. ರವಿಕುಮಾರ್, ತೇಜಸ್ವಿನಿ ರಮೇಶ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮತ್ತಿತರರು ಸಚಿವ ಕೃಷ್ಣ ಭೈರೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದ್ದಾರೆ. 

ಯಡಿಯೂರಪ್ಪ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್‌  ಅವರಿಂದ ವಶಕಪಡಿಸಿಕೊಂಡ ಹಣ ಯಾರಿಗೆ ಸೇರಿದ್ದು, ಚುನಾವಣೆ ಉದ್ದೇಶಕ್ಕೆ ಮತ್ತು ರಾಹುಲ್ ಗಾಂಧಿ ಕಾರ್ಯಕ್ರಮಗಳಿಗಾಗಿ ಸಚಿವ ಕೃಷ್ಣ ಭೈರೇಗೌಡ ಹಣ ಸಂಗ್ರಹದಲ್ಲಿ ತೊಡಗಿದ್ದಾರೆ. ಹೀಗೆ ಸಂಗ್ರಹಿಸಿದ ಹಣವನ್ನು ದೆಹಲಿಗೆ ಹಣ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ. ಇದು ಶೇ 20 ಪರ್ಸೆಂಟ್ ಸರ್ಕಾರ ಎನ್ನುವುದು ಸಾಬೀತಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೃಷ್ಣಭೈರೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ನೈತಿಕತೆ ಬಗ್ಗೆ ಮಾತನಾಡುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ  ಈಗೇನು ಹೇಳುತ್ತಾರೆ. ಅಧಿಕಾರಿಗಳುಹೋಟೆಲ್ ನಲ್ಲಿ ರೂಂ ಮಾಡಿಕೊಂಡು ಹಣ ಸಂಗ್ರಹಣೆಮಾಡುತ್ತಿದ್ದಾರೆ ಎಂದಾದರೆ ಇವರಿಗೆ ಮಾನ ಮರ್ಯಾದೆಇದೆಯಾ?. ಇದೊಂದು ಅಕ್ಷಮ್ಯ ಅಪರಾಧ. ಇದಕ್ಕೆ ಕೃಷ್ಣಭೈರೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಜವಾಬ್ದಾರರಾಗುತ್ತಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಂಗ್ರೆಸ್ ಯಾವ ರೀತಿ ಹಣದ ರಾಜಕೀಯ ಮಾಡುತ್ತಿದೆ ಎಂಬುದಕ್ಕೆಇದು ಸಾಕ್ಷಿಯಾಗಿದೆ. ಕೃಷ್ಣಭೈರೇಗೌಡರು ತಾನುಪ್ರಾಮಾಣಿಕ ರಾಜಕಾರಣಿ ಎಂದು ಹೇಳಿಕೊಳ್ಳುತ್ತಿದ್ದರು. ಪತ್ತೆಯಾದ ಹಣ ಸಚಿವರಿಗೆ ಸೇರಿದ್ದು, ಹೀಗಾಗಿ ತಕ್ಷಣ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕರ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಕುಮಾರಸ್ವಾಮಿ ಅವರುಕೃಷ್ಣಭೈರೇಗೌಡರನ್ನು ಸಂಪುಟದಿಂದ ಕೈಬಿಡಬೇಕು. ನಾಮಪತ್ರ ಆರಂಭಕ್ಕೂ ಮುನ್ನ ಹಣದ ಹೊಳೆ ಹರಿಯುತ್ತಿರುವುದನ್ನು ನೋಡಿದರೆ ಚುನಾವಣೆ ವೇಳೆಗೆ ಇನ್ನೆಷ್ಟು ಹಣಬಲ ಕೆಲಸ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು. 


ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್,  ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ‌ ಇಬ್ಬರದ್ದೂ ಶೇ 10+1೦ ಸೇರಿ ಇದು ಶೇ 20 ಕಮೀಷನ್ಸರ್ಕಾರವಾಗಿದೆ. ‌ ‌‌‌ ದೇವೇಗೌಡರಿಗೆ ತಮ್ಮ ಪುತ್ರಕುಮಾರಸ್ವಾಮಿ ಸರ್ಕಾರದ ಪರ್ಸೆಂಟೇಜ್ ವ್ಯವಹಾರ ನೋಡಿ ಕಣ್ಣೀರು ಬರುತ್ತಿಲ್ಲವೇ  ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಮಾನ್ಯತಾ ಟೆಕ್ ಪಾರ್ಕ್ ಬಳಿ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ‌ ಸಂವಾದಕ್ಕೆ ಕಾಂಗ್ರೆಸ್ ‌ವ್ಯವಸ್ಥೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಹಣ ದೊರೆತಿದೆ. ಈ ಹಣವನ್ಮು ಸಚಿವ ಕೃಷ್ಣಬೈರೇಗೌಡರಿಗೆ ತಲುಪಿಸಲು ಸಂಗ್ರಹಿಸಿದ್ದಾಗಿಇಂಜಿನಿಯರ್ ಹೇಳಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರಕಳೆದ 9 ತಿಂಗಳಿಂದ ವ್ಯಾಪಕ ವಸೂಲಿ ದಂಧೆಯಲ್ಲಿ ತೊಡಗಿರುವುದು ಒಂದಾದ ನಂತರ ಒಂದು ಪ್ರಕರಣದಿಂದಬಯಲಾಗುತ್ತಿದೆ ಎಂದು ಆರೋಪಿಸಿದರು.

ತೇಜಸ್ವಿನಿ ರಮೇಶ್ ಮಾತನಾಡಿ, ಮೈತ್ರಿ ಧರ್ಮ ಪಾಲನೆಯನೆಪದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಅವರು  ಸಹಕಾರ ನೀಡುತ್ತಿದ್ದಾರೆ. ಕೇವಲ ಒಬ್ಬಇಂಜಿನಿಯರ್ ಬಳಿ ಇಷ್ಟು ದೊಡ್ಡ ಪ್ರಮಾಣದ ಹಣಸಂಗ್ರಹಣೆಯಾಗಿರುವುದು ನೋಡಿದರೆ ಚುನಾವಣೆಯಲ್ಲಿ ಹಣಬಲ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮತ್ತೊಂದೆಡೆ ಮಾತನಾಡಿದ ಬಿ.ವೈ. ವಿಜಯೇಂದ್ರ ಮಾತನಾಡಿ, ಮೈತ್ರಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಆರೋಪ ಇದೀಗ ಸತ್ಯವಾಗಿದೆ. ಮೋದಿ ಶೇ 10 ರಷ್ಟು ಕಮೀಷನ್ ಸರ್ಕಾರಎಂದಿದ್ದರು. ಆದರೆ ಈ ಮೈತ್ರಿ ಸರ್ಕಾರ ಶೇ 20 ರಷ್ಟು ಕಮೀಷನ್ ಸರ್ಕಾರವಾಗಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು. 


ಸಂಬಂಧಿತ ಟ್ಯಾಗ್ಗಳು

#Bjp #Krishna Bhairagowda # Insists #Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ