ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಗಂಗಾನದಿ ಆಶ್ರಯಿಸಿದ ಪ್ರಿಯಾಂಕಾ ವಾದ್ರಾ 

Priyanka Vadra Using Ganga River  for election campaigns

16-03-2019

ಮೋದಿ ಗಂಗಾನದಿ ಶುದ್ಧೀಕರಣದ ಪ್ರಯತ್ನಗಳನ್ನು ಸದಾ ಟೀಕಿಸಿದ್ದ ಕಾಂಗ್ರೆಸ್ ಕೂಡ ಇದೀಗ ತಮ್ಮ ಚುನಾವಣಾ ಪ್ರಚಾರಕ್ಕೆ ಗಂಗಾನದಿಯನ್ನು ಬಳಸಿಕೊಳ್ಳಲು ಸಜ್ಜಾಗಿದೆ. ಹೌದು ಕಾಂಗ್ರೆಸ್‍ನಲ್ಲಿ ಹೊಸ ಭರವಸೆ ಮೂಡಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶದ ಚುನಾವಣಾ  ರಣಕಣದಲ್ಲಿ ಪ್ರಚಾರಕ್ಕೆ ಗಂಗೆಯಾನ ಮಾಡಲು ನಿರ್ಧರಿಸಿದ್ದಾರೆ. 

ಪೂರ್ವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿರುವ ಪ್ರಿಯಾಂಕಾ ವಾದ್ರಾ,  ಮಾ 18 ರಿಂದ ಉತ್ತರ ಪ್ರದೇಶದ  ಪ್ರಯಾಗ್ ರಾಜ್‍ನಿಂದ  ಕಾಂಗ್ರೆಸ್ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.  ಈ ಪ್ರಚಾರ ಕಾರ್ಯದ ವಿಶೇಷವೆಂದರೇ,  ಇಲ್ಲಿ ಪ್ರಿಯಾಂಕ ಮತದಾರರನ್ನು ಸಂಪರ್ಕಿಸಲು ದೋಣಿಯಾನ ನಡೆಸಲಿದ್ದಾರೆ.
 
ಗಂಗಾ ನದಿ ತೀರದಲ್ಲಿ ವಾಸವಾಗಿರುವ ಮತದಾರರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಪ್ರಿಯಾಂಕಾ ವಾದ್ರಾ ಈ ಪ್ರಯೋಗಕ್ಕೆ ಮುಂದಾಗಿದ್ದು, ಮಾಚ್18 ರಿಂದ 20 ರವರೆಗೆ ಮೂರು ದಿನಗಳ ಕಾಲ ಪ್ರಿಯಾಂಕಾ ವಾದ್ರಾ, 100 ಕಿಲೋಮೀಟರ್ ದೋಣಿಯಾನ ಮಾಡುವ ಮೂಲಕ  ಮತಯಾಚನೆ ಮಾಡಲಿದ್ದಾರೆ. ಅವರ ಈ ಚುನಾವಣಾ ಪ್ರಚಾರ ಯಾನ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಅಂತ್ಯವಾಗಲಿದೆ. 

ಬಳಿಕ ಅವರು ವಾರಣಾಸಿಯ ಕಾಶಿವಿಶ್ವೇಶ್ವರ ದೇವಾಲಯಕ್ಕೂ ಭೇಟಿ ನೀಡಲಿದ್ದು, ದರ್ಶನ ಪಡೆಯಲಿದ್ದಾರೆ.  ಇನ್ನು ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ದೋಣಿಯಾನದ ಮೂಲಕ ಮತಯಾಚನೆಗೆ ಅವರು ಈಗಾಗಲೆ ಅನುಮತಿ ಕೋರಿ ಅರ್ಜಿ ಕೂಡ ಸಲ್ಲಿಸಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Ganga River #Campaigns #Priyanka Vadra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ