ತೆರೆಗೆ ಬರ್ತಿದೆ ಅಂಬಿ ಅಭಿಮಾನಿ ಕತೆ

 Amby

15-03-2019

ರಾಜ್ಯ ರಾಜಕಾರಣದ ತುಂಬ ಹಿರಿಯ ಅಂಬರೀಶ್‍ರದ್ದೆ ಸುದ್ದಿ. ಅಂಬರೀಶ್ ಅಭಿಮಾನಿಗಳಿಗಾಗಿ ಸುಮಲತಾ ರಾಜಕೀಯ ಕಣಕ್ಕಿಳಿದಿರೋದು ಸಾಕಷ್ಟು ಹೊಸತಾದ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಹೀಗಿರುವಾಗಲೇ, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗವಾಗಿ ನಟ ಅಂಬರೀಶ್ ಅವರ ಅಭಿಮಾನಿಯೊಬ್ಬರ ಕತೆಯನ್ನು ತೆರೆ ಮೇಲೆ ತರುವ ಪ್ರಯತ್ನ ಆರಂಭವಾಗಿದೆ. 


ಅಂಬರೀಶ್ ನಟರಾಗಿ,ರಾಜಕಾರಣಿಯಾಗಿ, ಸಚಿವರಾಗಿ, ಸಂಸದರಾಗಿ ಸಾರ್ಥಕ ಬದುಕು ನಡೆಸಿದವರು. ಅವರಿಗೆ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲೆಡೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದರು. ಈ ಅಭಿಮಾನಿಗಳಲ್ಲಿ ಅದೇಷ್ಟೋ ಜನರು ಅಂಬರೀಶ್ ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇಂತಹುದೇ ಮಾದರಿ ಅಭಿಮಾನಿಯೊಬ್ಬನ ಕತೆ ತೆರೆಗೆ ಬರಲಿದೆ.


ಫ್ಯಾನ್ ಆಫ್ ದಿ ರೆಬೆಲ್ ಸ್ಟಾರ್ ಹೆಸರಿನಲ್ಲಿ ಈ ಚಿತ್ರ ತೆರೆಗೆ ಬರಲಿದ್ದು, ಪತಿ ಬೇಕು ಡಾಟ್.ಕಾಮ್  ನಿರ್ದೇಶಕ ರಾಕೇಶ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ನಿರ್ದೇಶಕರು ಹೇಳುವ ಪ್ರಕಾರ, ಈ ಚಿತ್ರ  ಅಂಬಿಗೆ ಆಪ್ತವಾಗಿರುವ ಹಾಗೂ ಅವರ ಜೀವನ ಕತೆಯನ್ನು ಸ್ಪೂರ್ತಿಯಾಗಿ ಸ್ವೀಕರಿಸಿ ಅನೇಕರಿಗೆ ನೆರವಾಗುತ್ತಿರುವ ಕತೆಯನ್ನು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ತೆರೆ ಮೇಲೆ ತರುವ ಪ್ರಯತ್ನ ಈ ಸಿನಿಮಾ. 

ಫ್ಯಾನ್ ಆಫ್ ದಿ ರೆಬೆಲ್ ಸಿನಿಮಾ ಮಂಡ್ಯದಲ್ಲಿಯೇ ಚಿತ್ರೀಕರಣಗೊಳ್ಳಲಿದ್ದು,  ಏಪ್ರಿಲ್‍ನಲ್ಲಿ ಚಿತ್ರಸೆಟ್ಟೇರಲಿದೆ. ಈ ಚಿತ್ರದಲ್ಲಿ ಸ್ಯಾಂಡಲವುಡ್ ನಟರೊಬ್ಬರು ಅಂಬಿ ಅಭಿಮಾನಿ ಪಾತ್ರ ನಿರ್ವಹಿಸಲಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡುವುದಾಗಿ ರಾಕೇಶ್ ಹೇಳ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಲವು ಅಂಬರೀಶ್ ಅಭಿಮಾನಿಗಳನ್ನು ಕೂಡ ಸಂದರ್ಶಿಸಿ ಮಾಹಿತಿ ಕಲೆ ಹಾಕಿದ್ದಾರಂತೆ. 


ಸಂಬಂಧಿತ ಟ್ಯಾಗ್ಗಳು

#Sandalwood #Fans #Ambarish #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ