ಆನ್‍ಲೈನ್ ಟ್ರೆಂಡಿಂಗ್ ಎಲ್ಲರನ್ನೂ ಹಿಂದಿಕ್ಕಿದ ಕೆಜಿಎಫ್ ಶ್ರೀನಿಧಿ ಶೆಟ್ಟಿ 

 KGF Srinidhi Shetty Overtakes Everyone Online

15-03-2019

ಸಿನಿಪ್ರಿಯರ ಮನಗೆದ್ದ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.  ಆನ್‍ಲೈನ್ ಸೈಟ್ ನಲ್ಲಿ ಅತಿ ಹೆಚ್ಚು ವೀಕ್ಷಕರ ಮನಗೆದ್ದ ಕಾರಣಕ್ಕೆ ಅವರನ್ನು  ಐಎಂಡಿಬಿ ಫೆಬ್ರವರಿ ತಿಂಗಳ  ಬ್ರೇಕ್ ಔಟ್ ಸ್ಟಾರ್ ಎಂದು ಶ್ರೀನಿಧಿ ಶೆಟ್ಟಿಯನ್ನು  ಪರಿಗಣಿಸಿದೆ. ಇದಕ್ಕೆ ಕಾರಣ ಸ್ಟಾರ್ ಮೀಟರ್ ಚಾರ್ಟ್‍ನಲ್ಲಿ  ಶ್ರೀನಿಧಿ ಶೆಟ್ಟಿ ಹೆಸರು ಕಾಣಿಸಿಕೊಂಡು ಒಳ್ಳೆ ವಿವ್ಹ್ಸ್ ಪಡೆದುಕೊಂಡಿರುವುದು. 

ಶ್ರೀನಿಧಿ ಶೆಟ್ಟಿ ಎಂಜೀನಿಯರ್ ಪದವಿಧರೆಯಾಗಿದ್ದು,  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪ್ರಾ ಇಂಟರ್‍ನ್ಯಾಷನಲ್ ಕೀರಿಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಸುಪ್ರಾ ಇಂಟರ್ ನ್ಯಾಷನಲ್ ಅವಾರ್ಡ್ ಪಡೆಯುತ್ತಿದ್ದಂತೆ ಶ್ರೀನಿಧಿ ಕೆಜಿಎಫ್ ಚಿತ್ರಕ್ಕೆ ಆಯ್ಕೆಯಾಗಿದ್ದರು.  ಕೆಜಿಎಫ್‍ನಲ್ಲಿ ಶ್ರೀನಿಧಿ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡಿದ್ದರೂ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಸಧ್ಯ ಸಾಕಷ್ಟು ಚಿತ್ರಗಳಿಂದ ಆಫರ್ ಬರುತ್ತಿದ್ದರೂ ಕೂಡ ಶ್ರೀನಿಧಿ ಬೇರಾವುದೇ ಚಿತ್ರಕ್ಕೆ ಡೇಟ್ ಕೊಟ್ಟಿಲ್ಲ. ಕೆಜಿಎಫ್-2 ಚಿತ್ರೀಕರಣ ಮುಗಿದ ಬಳಿಕವಷ್ಟೇ ಬೇರೆ ಚಿತ್ರದಲ್ಲಿ ನಟಿಸುವ ಇರಾದೆ ಇದೆ ಅಂತಿದ್ದಾರೆ ಶ್ರೀನಿಧಿ. ಈಗಾಗಲೇ ಸಾಕಷ್ಟು ಪರಭಾಷೆ ಸಿನಿಮಾಗಳಿಂದಲೂ ಶ್ರೀನಿಧಿಗೆ ಆಫರ್ ಬಂದಿದೆಯಂತೆ. ಕೆಜಿಎಫ್‍ನಂತಹ ಯಶಸ್ವಿ ಕನ್ನಡ ಚಿತ್ರದಲ್ಲಿ ನನಗೆ ನಟಿಸುವ ಅವಕಾಶ ಸಿಕ್ಕಿದ್ದು, ಖುಷಿ ತಂದಿದೆ ಅಂತಾರೆ ಶ್ರೀನಿಧಿ. 

ವೃತ್ತಿಯಲ್ಲಿ ಎಂಜೀನಿಯರ್ ಆಗಿದ್ದರೂ ಶ್ರೀನಿಧಿ ಹೆತ್ತವರಿಗೆ ಆಕೆ ನಟಿಯಾಗಬೇಕೆಂಬ ಬಯಕೆ ಇತ್ತಂತೆ. ಈಗ ಶ್ರೀನಿಧಿ ಹೆತ್ತವರ ಆಸೆಯೂ ಈಡೇರಿದೆ. ಇನ್ನು ಕೆಜಿಎಫ್-2 ಬಳಿಕ ಸಾಕಷ್ಟು ಅವಕಾಶಗಳು ಶ್ರೀನಿಧಿ ಶೆಟ್ಟಿಗೆ ಕಾದಿದ್ದು, ಆಕೆ ಕನ್ನಡದ ಹಾಗೂ ಇತರ ಭಾಷೆಗಳ ಬಹುಬೇಡಿಕೆಯ ನಟಿಯಾಗುವ ಮುನ್ಸೂಚನೆ ನೀಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#KGF-2 #Online #Shreenedhi Shetty #Trending


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ