ಕೆರೆಯಂತಾದ ಸರ್ಕಾರಿ ಶಾಲೆ !

Kannada News

07-06-2017

ಕೊಪ್ಪಳ:- ಸರ್ಕಾರಿ ಶಾಲೆಗಳ ದುಸ್ಥಿಗಳು ಒಂದೆರಡಲ್ಲ, ಶಾಲೆಯ ಕಟ್ಟಡದಿಂದ ಹಿಡಿದು ಎಲ್ಲದರರಲ್ಲೂ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಇದೀಗ ಮಳೆಗಾಲ ಬೇರೆ ಇನ್ನು ಸರ್ಕಾರಿ ಶಾಲೆಗಳ ಗೋಳು ಕೇಳುವವರಾರು. ಇದರಂತೆಯೇ ನಿನ್ನೆ ಸುರಿದ ಧಾರಾಕಾರ ಮಳೆಗೆ ಶಾಲಾ ಆವರಣ ಕರೆಯಂತಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆ ನೀರು ನುಗ್ಗಿದ ಪರಿಣಾಮ, ಶಾಲಾ ಆವರಣ ಸಂಪೂರ್ಣ ಕೆರೆಯಂತಾಗಿದೆ. ಶಾಲೆಯ ತುಂಬೆಲ್ಲ ನೀರು ತುಂಬಿದ ಹಿನ್ನೆಲೆ ಶಾಲೆಗೆ ರಜೆ ನೀಡಿಲಾಗಿತ್ತು , ಮತ್ತು ಶಾಲಾ ಆವರಣದಲ್ಲಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ