ಡಾ.ಉಮೇಶ್ ಜಾಧವ್‍ಗೆ ಸಂಕಷ್ಟ ?

 Dr. Umesh Jadhav is in trouble

15-03-2019

ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಡಾ.ಉಮೇಶ್ ಜಾಧವ್, ಹಿರಿಯ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಕನಸಿನಲ್ಲಿದ್ದಾರೆ. ಆದರೆ ಅವರ ಈ ಕನಸಿಗೆ ರಾಜೀನಾಮೆ ಅಂಗೀಕಾರವಾಗದೆ ಇರೋದು ತಲೆನೋವಾಗಿ ಪರಿಣಮಿಸಿದ್ದು, ಉದ್ದೇಶಪೂರ್ವಕವಾಗಿ ನನ್ನ ರಾಜೀನಾಮೆ ಅಂಗೀಕಾರ ತಡೆಯಲಾಗಿದೆ ಎಂದು ಜಾಧವ್ ಆರೋಪಿಸಿದ್ದಾರೆ. 

ಕಳೆದ ತಿಂಗಳು ಕಾಂಗ್ರೆಸ್‍ಗೆ ರಾಜೀನಾಮೆ ಸಲ್ಲಿಸಿದ್ದ ಡಾ.ಉಮೇಶ್ ಜಾಧವ್ ಇತ್ತೀಚಿಗೆ ಕಲ್ಬುರ್ಗಿಯಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.  ಅಲ್ಲದೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಲೋಕಸಭೆ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ.
ಆದರೆ ಸ್ಪೀಕರ್ ಇನ್ನೂ ಕೂಡ ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸದೆ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಕಾಂಗ್ರೆಸ್ ರಣತಂತ್ರದ ಭಾಗವಾಗಿರಬೇಕೆಂಬ ಸಂದೇಹವೂ ವ್ಯಕ್ತವಾಗಿದೆ. 
ರಾಜೀನಾಮೆ ಅಂಗೀಕಾರವಾಗದೆ ಸಭಾಧ್ಯಕ್ಷರು  ಉಮೇಶ್ ಜಾಧವ್ ವಿರುದ್ಧ ವಿಚಾರಣೆ ಅಥವಾ ಶಾಸಕತ್ವ ರದ್ದು ಮಾಡಿದರೆ ಜಾಧವ್ ಅವರಿಗೆ ಸಮಸ್ಯೆ ಎದುರಾಗಲಿದೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಮೇಶ್ ಜಾಧವ್ ತಮ್ಮ ರಾಜೀನಾಮೆ ಅಂಗೀಕರಿಸದೇ ಇದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ. ಆದರೆ ಶಾಸಕ ಉಮೇಶ್ ಜಾಧವ್ ಮೇಲೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಂiÀi ಆದರೆ ಮಾತ್ರ ಅವರು ಸಂಕಷ್ಟಕ್ಕಿಡಾಗಲಿದ್ದಾರೆ. 

ಪ್ರಸ್ತುತ ರಾಜೀನಾಮೆ ಅಂಗೀಕಾರಕ್ಕೂ ಮುನ್ನ ಅವರು ಚುನಾವಣೆ ಸ್ಪರ್ಧಿಸಬಹುದಾಗಿದೆ.ಆದರೆ ಪಕ್ಷಾಂತರ ಕಾಯಿದೆ ಅನ್ವಯ ಶಿಕ್ಷೆಗೊಳಗಾದರೆ ಅವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಅಲ್ಲದೇ, 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಬಹಿಷ್ಕಾರಕ್ಕೂ ಒಳಗಾಗಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Trouble #Dr Umesh Jhadav #Disqualify


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ