ಕನ್ನಡ ಹಾಡಿಗೆ ಧ್ವನಿಯಾದ ಬಿಗ್ ಬಿ 

Amitabh Bachchan Singing In Kannada

15-03-2019

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟರು ಕಾಲಿಡ್ತಿರೋ ಸುದ್ದಿಗಳ ಮಧ್ಯೆ ಮತ್ತೊಂದು ಹೊಸ ಸುದ್ದಿ ಕೇಳಿಬರ್ತಿದೆ. ಅದೇನು ಅಂದ್ರಾ ಬಾಲಿವುಡ್‍ನ ಬಿಗ್ ಬೀ ಅಮಿತಾಬ್ ಬಚ್ಚನ್ ಕನ್ನಡ ಗೀತೆಯೊಂದಕ್ಕೆ ಧ್ವನಿಯಾಗಿದ್ದಾರೆ. ಹೌದು  ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಬಟರ್ ಫ್ಲೈ ಚಿತ್ರದ ಸಾಂಗ್‍ಗೆ ಬಿಗ್ ಬಿ ಕಂಠದಾನ ಮಾಡಿದ್ದಾರೆ. 

1978 ರಲ್ಲಿ ತೆರೆಕಂಡ  ದೇವದಾಸಿ ಚಿತ್ರದ ಸುಖವೀವ ಸುರಪಾನವಿದು ಸ್ವರ್ಗ ಸಮಾನಂ ಹಾಡನ್ನು ಬಟರ್ ಪ್ಲೈ ಚಿತ್ರದಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ.  ಈ ಹಾಡಿಗೆ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮರುಸಂಗೀತ ಸಂಯೋಜನೆ ಮಾಡಿದ್ದು,  ರ್ಯಾಪ್ ಶೈಲಿಯಲ್ಲಿರುವ ಈ ಹಾಡನ್ನು ಅಮಿತಾಬ್ ಬಚ್ಚನ್ ತಮ್ಮ ಕಂಚಿನ ಕಂಠದಲ್ಲಿ ಹಾಡಿದ್ದಾರೆ. 


  ರಮೇಶ್ ಅರವಿಂದ್ ಅವರ ಬಹುನೀರಿಕ್ಷಿತ ಚಿತ್ರವಾಗಿರುವ ಬಟರ್ ಫ್ಲೈ  ಚಿತ್ರ ಏಕಕಾಲದಲ್ಲಿ ಕನ್ನಡ, ತೆಲುಗು,ತಮಿಳಿನಲ್ಲೂ  ನಿರ್ಮಾಣವಾಗುತ್ತಿದ್ದು, ಮೇ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಮುಂಬೈನಲ್ಲಿ ಅಮಿತಾಬ್ ಹಾಡು ರೆರ್ಕಾಡಿಂಗ್ ಮಾಡಿಕೊಳ್ಳಲಾಗಿದೆ ಎಂದು ಚಿತ್ರದ ಸಹ ನಿರ್ಮಾಪಕಿ ಹಾಗೂ ನಾಯಕಿ ಪಾರುಲ್ ಯಾದವ್ ತಿಳಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Butterfly #Amitabh Bachchan #Ramesh Arvind Movie #Kannada Song


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ