ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ- ನಂಗೆ ಟಿಕೇಟ್ ಬೇಕು ಅಂದ್ರು ಸತ್ಯಜಿತ್ ಸುರತ್ಕಲ್ 

Satyajit Suratkal Asking Bjp For Mp Ticket

15-03-2019

ಮತ್ತೊಮ್ಮೆ ಮೋದಿ ಎಂಬ ಸ್ಲೋಗನ್ ಜೊತೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಆಂತರಿಕ ಭಿನ್ನಮತದ ಬಿಸಿ ತಟ್ಟುವ ಲಕ್ಷಣ ದಟ್ಟವಾಗಿದೆ. ದಕ್ಷಿಣ ಕನ್ನಡದ ಕಮಲ ಪಾಳಯದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಧಾನದ ಹೊಗೆ ಜೋರಾಗಿದ್ದು, ಅವರ ಬದಲು ನನಗೆ ಟಿಕೇಟ್ ನೀಡಬೇಕೆಂದು ಬಿಜೆಪಿಯ ಇನ್ನೊರ್ವ ಮುಖಂಡ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ. 

ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಆ ವೇಳೆ ಹೈಕಮಾಂಡ್ ಸೂಚನೆ ಮೇರೆಗೆ ಸುಮ್ಮನಾಗಿದ್ದರು. ಆದರೆ ಈಗ ಮತ್ತೆ ಲೋಕಸಭೆ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. 

ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ ಗೆಜ್ಜೆಗಿರಿ ನಂದನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸತ್ಯಜಿತ್ ಸುರತ್ಕಲ್,   ಕಳೆದ 35 ವರ್ಷದಿಂದ ಬಿಜೆಪಿ ಪಕ್ಷ ಹಾಗೂ ಸಂಘಟನೆಯಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೇನೆ. ಹೀಗಾಗಿ ಈ ಬಾರಿ ನನಗೆ ಲೋಕಸಭೆ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. 

 ಕಾರ್ಯಕರ್ತರು ಕೂಡ ಬದಲಾವಣೆ ಬಯಸಿದ್ದಾರೆ.  ನಾನು ಹಿಂದುಪರ ಸಂಘಟನೆಗಳಲ್ಲಿ ಹಾಗೂ ಬಿಜೆಪಿ ಪಕ್ಷಕ್ಕಾಗಿ ದುಡಿದಿರೋದರಿಂದ ನನಗೆ ಸ್ಥಾನ ನೀಡಬೇಕೆಂದು ಸತ್ಯಜಿತ್ ಪಟ್ಟು ಹಿಡಿದಿದ್ದು, ಇದು ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಹೈಕಮಾಂಡ್ ಸೂಚನೆಯಂತೆ ಹಾಲಿ ಸಂಸದರಿಗ ಟಿಕೇಟ್ ಕೂಡ ಘೋಷಿಸಿದೆ.

 ಹೀಗಿರುವಾಗ ಕರಾವಳಿ ಭಾಗದಲ್ಲಿ ಬಿಜೆಪಿ ಸಂಘಟಿಸುವ ಮಹತ್ತರ ಜವಾಬ್ದಾರಿ ಹೊತ್ತಿದ್ದ ಸತ್ಯಜಿತ್ ಸುರತ್ಕಲ್ ಈ ಬಂಡಾಯ ಅಭ್ಯರ್ಥಿಯಾಗಲಿರುವ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪಾಲಿಗೆ ತಲೆನೋವಾಗುವ ಎಲ್ಲ ಸಾಧ್ಯತೆ ಇದೆ. ಒಂದು ವೇಳೆ ಸತ್ಯಜಿತ್ ಸುರತ್ಕಲ್ ಮನವೊಲಿಸುವಲ್ಲಿ ಬಿಜೆಪಿ ವಿಫಲವಾದಲ್ಲಿ ಅದು ಮತಗಳಿಕೆಯ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಬಿಜೆಪಿ ಈ ಅಸಮಧಾನಗಳನ್ನು ನಾಜೂಕಾಗಿ ನಿರ್ವಹಿಸುವ ಅಗತ್ಯವಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Satyajeet Surthkal #Mangalore #MP Seat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ