ಕೂಡಲಸಂಗಮದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ

 Koodalasangam Basava Peetha  Chairperson Mate Mahadevi Lingayakya

15-03-2019

ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೂಡಲಸಂಗಮದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಇಂದು ಮದ್ಯಾಹ್ನದ ವೇಳೆಗೆ ಲಿಂಗೈಕ್ಯರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿರೋ ಮಾತೆ ಮಹಾದೇವಿ ಅವರಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಎಂದು ನಿಧರಾಗಿದ್ದಾರೆ. ಮಾತೆ ಮಹಾದೇವಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆ ಬಳಿ ಸಾವಿರಾರು ಭಕ್ತರು ನೆರೆದಿದ್ದರು.

ತಡರಾತ್ರಿ ರಾಜ್ಯದ ಹಲವು ಸ್ವಾಮಿಜಿಗಳು ಮಾತೆ ಮಹಾದೇವಿಯವರ ಆರೋಗ್ಯ ವಿಚಾರಿಸಿದ್ದರು. ಮೂಲಗಳ ಪ್ರಕಾರ, ಸುಮಾರು ಒಂದು ವರ್ಷದಿಂದ ಮೂತ್ರಪಿಂಡ ವಿಫಲವಾಗಿದ್ದು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಹಿಂದೆಂಗಿಂತಲೂ ಅವರ ಆರೋಗ್ಯ ಇತ್ತೀಚಿಗೆ ತೀವ್ರವಾಗಿ ಹದಗೆಟ್ಟಿತ್ತು.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ, ದೆಹಲಿಯಲ್ಲೂ ಪ್ರತಿಭಟನೆ ಮಾಡಿದ್ದರು. ಜತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಆಗುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಶಪಥ ಮಾಡಿದ್ದರು.

ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, “ಪ್ರಥಮ ಮಹಿಳಾ ಜಗದ್ಗುರು” ಎಂದು ತಮ್ಮ ಭಕ್ತರಿಂದ ಗುರುತಿಸಿಕೊಳ್ಳುವ ಮಾತೆ ಮಹಾದೇವಿ ಅವರು ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದರು


ಸಂಬಂಧಿತ ಟ್ಯಾಗ್ಗಳು

#Mate Mahadevi # Basava Peetha # Koodalasangam #Lingaiyakya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Medical Alcohol Rehab Drug Rehab Centers Alcohol Rehab Centers Drug Rehab Near Me Outpatient Substance Abuse Programs Near Me http://aaa-rehab.com JamesBesee
  • JamesBesee
  • Construction, facilities