ಸೋನಿಯಾಗಾಂಧಿ ಆಪ್ತ ಟಾಮ್ ಕಾಂಗ್ರೆಸ್‍ಗೆ ಗುಡ್ ಬೈ 

 Sonia Gandhi

14-03-2019

ಅತ್ತಶತಾಯ ಗತಾಯ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಸರ್ಕಸ್ ನಡೆಸಿರುವಾಗಲೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಅದರಲ್ಲೂ ಕಾಂಗ್ರೆಸ್ ಹಿರಿಯ ನಾಯಕ ಟಾಮ್ ವಡಕ್ಕನ್ ಬಹುವರ್ಷಗಳ ಕಾಲ ಕಾಂಗ್ರೆಸ್‍ನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ ರಾಜಕಾರಣಿಯಾಗಿದ್ದರೂ ಚುನಾವಣೆಯ ಎದುರಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 

ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಗೊಂಡ ಅವರನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾರ ಹಾಕಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.  90 ದಶಕದಲ್ಲಿ ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಆಡಳಿತ ಆರಂಭಿಸಿದಾಗ  ಕಾಂಗ್ರೆಸ್ ಮಾಧ್ಯಮ ವಿಭಾಗವನ್ನು ಟಾಮ್ ನಿರ್ವಹಿಸಿದ್ದರು. 

ಪುಲ್ವಾಮಾ ದಾಳಿ ಬಳಿಕ ರಾಷ್ಟ್ರೀಯ ಪಕ್ಷವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದ  ಕಾಂಗ್ರೆಸ್ ಕೈಗೊಂಡ ನಿರ್ಧಾರಗಳಿಂದ ಮನನೊಂದು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಟಾಮ್ ವಡಕ್ಕನ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಒಗ್ಗಟ್ಟು ತೋರಿಸಬೇಕಿತ್ತು. ಆದರೆ ಆ ಕರ್ತವ್ಯದಿಂದ ಪಕ್ಷ ಹಿಂದುಳಿದಿದ್ದು ನಮಗೆ ಖೇದ ತಂದಿದೆ ಹೀಗಾಗಿ ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದಾಗಿ ವಡಕ್ಕನ್ ಹೇಳಿದ್ದಾರೆ. 

ಇದಕ್ಕೂ ಮುನ್ನ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಪುತ್ರ ಸುಜಯ್ ವಿಖೆ ಪಾಟೀಲ್ ಕೂಡ ಬಿಜೆಪಿ ರ್ಸೇಪಡೆಗೊಂಡಿದ್ದು ಅಚ್ಚರಿ ಬೆಳವಣಿಗೆಯಾಗಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Sonia Gandhi #Tam Vadakkan #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ